AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

One97 Communications' share price rise after it shows profit first time: ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ 2025-26ರಲ್ಲಿ 9,291 ಕೋಟಿ ರೂ ಆದಾಯ ಹಾಗೂ 552 ಕೋಟಿ ರೂ ಲಾಭ ಮಾಡಿದೆ. 2020ರಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದಾಗಿನಿಂದ ಯಾವುದೇ ಪೂರ್ಣ ಹಣಕಾಸು ವರ್ಷದಲ್ಲಿ ಈ ಸಂಸ್ಥೆ ಲಾಭ ಕಂಡಿದ್ದು ಇದೇ ಮೊದಲು. ಈ ಲಾಭದ ವರದಿ ಬಂದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಪೇಟಿಎಂ ಷೇರುಬೆಲೆ ಸಖತ್ ಏರುತ್ತಿದೆ.

ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್
ಪೇಟಿಎಂImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2026 | 2:54 PM

Share

ಬೆಂಗಳೂರು, ಮೇ 7: ಪೇಟಿಎಂ ಸ್ಥಾಪನೆಯಾದಾಗಿನಿಂದ ಈ ಸಂಸ್ಥೆ ಇದೇ ಮೊದಲ ಬಾರಿಗೆ ವಾರ್ಷಿಕ ಲಾಭದ ಮುಖ ಕಂಡಿದೆ. ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ (One97 Communications) ತನ್ನ ವಾರ್ಷಿಕ ವರದಿಯಲ್ಲಿ ಲಾಭ ತೋರಿಸಿದೆ. 2025-26ರ ಹಣಕಾಸು ವರ್ಷದಲ್ಲಿ 552 ಕೋಟಿ ಲಾಭ ಮಾಡಿರುವುದು ಅದು ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ. ಹಿಂದಿನ ವರ್ಷದಲ್ಲಿ (2024-25) ಈ ಸಂಸ್ಥೆ 663 ಕೋಟಿ ರೂ ನಷ್ಟ ಅನುಭವಿಸಿತ್ತು. ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ (Stock Market) ಲಿಸ್ಟ್ ಆದಾಗಿನಿಂದ ಪೂರ್ಣ ವರ್ಷವೊಂದರಲ್ಲಿ ಲಾಭ ಕಂಡಿರುವುದು ಇದೇ ಮೊದಲು.

ಎಕ್ಸ್​ಚೇಂಜ್ ಫೈಲಿಂಗ್​ಗೆ ಅದು ಸಲ್ಲಿಸಿದ ಮಾಹಿತಿ ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ 9,291 ಕೋಟಿ ರೂ ಆದಾಯ ಹಾಗೂ 552 ಕೋಟಿ ರೂ ಲಾಭ ಮಾಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 7,625 ಕೋಟಿ ರೂ ಆದಾಯದಲ್ಲಿ 663 ಕೋಟಿ ರೂ ನಷ್ಟವಾಗಿತ್ತು. ಈಗ ನಷ್ಟಕ್ಕೆ ಕತ್ತರಿ ಹಾಕಿ ಲಾಭದ ದಾರಿ ಹುಡುಕಲು ಪೇಟಿಎಂ ಯಶಸ್ವಿಯಾಗಿರುವುದು ಗಮನಾರ್ಹ.

ಇದನ್ನೂ ಓದಿ: ಟ್ರಂಪ್ ವಿರುದ್ಧ ಸುಂಕದ ಕೇಸ್ ಗೆದ್ದ ಭಾರತೀಯ ಮೂಲದ ವ್ಯಕ್ತಿಯ ಅಚ್ಚರಿಯ ನಿಜ ಜೀವನದ ಕಥೆ ಇದು

ಲಾಭಕ್ಕಾಗಿ ಪೇಟಿಎಂ ಮಾಡಿದ್ದೇನು?

ಕಳೆದ ಒಂದು ವರ್ಷದಿಂದ ಪೇಟಿಎಂ ತನ್ನ ಕಾರ್ಯತಂತ್ರದಲ್ಲಿ ತುಸು ಬದಲಾವಣೆ ಮಾಡಿಕೊಂಡಿದಂತಿದೆ. ಪೇಮೆಂಟ್ಸ್ ಪ್ರೋಸಸಿಂಗ್, ವ್ಯಾಪಾರಿಗಳಿಗೆ ಸಬ್​ಸ್ಕ್ರಿಪ್ಷನ್​ಗಳತ್ತ ಹೆಚ್ಚು ಗಮನ ಹರಿಸಿದೆ. ಹಾಗೆಯೇ, ಸಾಲ ಹಾಗೂ ಇತರ ಹಣಕಾಸು ಉತ್ಪನ್ನಗಳ ವಿತರಣೆಯ ಬ್ಯುಸಿನೆಸ್ ಮೇಲೂ ಸಂಸ್ಥೆ ಗಮನ ಹರಿಸುತ್ತಿದೆ. ಈ ಹಣಕಾಸು ಉತ್ಪನ್ನಗಳ ವಿತರಣೆಯ ಬ್ಯುಸಿನೆಸ್​ನಿಂದ ಅದಕ್ಕೆ ಒಂದು ವರ್ಷದಲ್ಲಿ 2,594 ಕೋಟಿ ರೂ ಆದಾಯ ಸಿಕ್ಕಿದೆ.

ಈ ಮೇಲಿನ ಬ್ಯುಸಿನೆಸ್ ತಂತ್ರ ಬದಲಾವಣೆಯ ಜೊತೆಗೆ ಎಐ ಅಳವಡಿಕೆಯೂ ಕೂಡ ಸಂಸ್ಥೆಯ ಕ್ಷಮತೆಯನ್ನು ಹೆಚ್ಚಿಸಿ, ಲಾಭ ಬರಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ

ಪೆಟಿಎಂ ಷೇರುಬೆಲೆ ಝರ್ಜೆಂದು ಏರಿಕೆ

ಐದು ವರ್ಷದ ಹಿಂದೆ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಇದು ಇಡೀ ವರ್ಷವೊಂದರಲ್ಲಿ ಲಾಭದ ಮುಖ ನೋಡಿದ್ದು ಇದೇ ಮೊದಲು. 2021ರ ನವೆಂಬರ್ 18ರಂದು ಇದು ಲಿಸ್ಟ್ ಆದಾಗ ಇದ್ದ ಬೆಲೆ 1,950 ರೂ. ಐಪಿಒದಲ್ಲಿ ಪಡೆದಿದ್ದ 2,150 ರೂ ಬೆಲೆಗಿಂತಲೂ ಕಡಿಮೆ. 2024ರಲ್ಲಿ ಒಂದು ಹಂತದಲ್ಲಿ ಇದರ ಬೆಲೆ 350 ರೂಗಿಂತಲೂ ಕೆಳಗೆ ಇಳಿದುಹೋಗಿತ್ತು.

ಇದೀಗ ಚೇತರಿಸಿಕೊಂಡು 1,196 ರೂ ಮುಟ್ಟಿದೆ. ಪೂರ್ಣ ವರ್ಷದಲ್ಲಿ ಲಾಭ ಪಡೆದಿರುವ ವರದಿ ಬಂದ ಹಿನ್ನೆಲೆಯಲ್ಲಿ ಇವತ್ತು ಗುರುವಾರ ಇದರ ಷೇರುಬೆಲೆಯಲ್ಲಿ ಶೇ. 7ರಷ್ಟು ಹೆಚ್ಚಳ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್