AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈನಲ್ಲಿ ದೇಶಾದ್ಯಂತ 13 ಬ್ಯಾಂಕ್ ರಜಾ ದಿನಗಳು; ಕರ್ನಾಟಕದಲ್ಲೆಷ್ಟು?

Banks have upto 13 days holiday in July month: 2026ರ ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜಾದಿನಗಳು ಇವೆ. ಇದರಲ್ಲಿ 6 ರೆಗ್ಯುಲರ್ ರಜೆಗಳಾದರೆ, ಇನ್ನೇಳು ದಿನಗಳು ಪ್ರಾದೇಶಿಕ ವಿಶೇಷಗಳಾಗಿವೆ. ಕರ್ನಾಟಕದಲ್ಲಿ ಜುಲೈನಲ್ಲಿ ವಿಶೇಷ ರಜೆಗಳಿಲ್ಲ. ರೆಗ್ಯುಲರ್ ರಜೆಗಳೇ ಎಲ್ಲವೂ.

ಜುಲೈನಲ್ಲಿ ದೇಶಾದ್ಯಂತ 13 ಬ್ಯಾಂಕ್ ರಜಾ ದಿನಗಳು; ಕರ್ನಾಟಕದಲ್ಲೆಷ್ಟು?
ಎಸ್​ಬಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 29, 2026 | 12:53 PM

Share

ಮುಖ್ಯಾಂಶಗಳು

  • 2026ರ ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜಾದಿನಗಳು ಇವೆ.
  • ಇದರಲ್ಲಿ 6 ರೆಗ್ಯುಲರ್ ರಜೆಗಳಾದರೆ, ಇನ್ನೇಳು ದಿನಗಳು ಪ್ರಾದೇಶಿಕ ವಿಶೇಷಗಳಾಗಿವೆ.
  • ಕರ್ನಾಟಕದಲ್ಲಿ ಜುಲೈನಲ್ಲಿ ವಿಶೇಷ ರಜೆಗಳಿಲ್ಲ. ರೆಗ್ಯುಲರ್ ರಜೆಗಳೇ ಎಲ್ಲವೂ.

ನವದೆಹಲಿ, ಜೂನ್ 29: ಆರ್​ಬಿಐ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 13 ದಿನಗಳವರೆಗೆ ರಜೆ (Bank Holidays) ಇದೆ. ಇದರಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಮಾಣದ ರಜಾ ದಿನಗಳಿವೆ. ಜುಲೈನಲ್ಲಿ ಹೆಚ್ಚಿನ ಹಬ್ಬ ಹರಿದಿನಗಳಿಲ್ಲ. ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ರಜೆಗಳನ್ನು ಹೊರತುಪಡಿಸಿ ಉಳಿದ ಏಳು ರಜಾದಿನಗಳು ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಸೀಮಿತವಾಗಿವೆ. ಒಡಿಶಾ, ಕಾಶ್ಮೀರ, ಉತ್ತರಾಖಂಡ್ ರಾಜ್ಯಗಳಲ್ಲೂ ಹೆಚ್ಚುವರಿ ರಜೆಗಳಿರುವುದನ್ನು ಕಾಣಬಹುದು.

2026ರ ಜುಲೈನಲ್ಲಿ ದೇಶಾದ್ಯಂತ ಬ್ಯಾಂಕ್ ರಜಾದಿನಗಳು

  • ಜುಲೈ 5: ಭಾನುವಾರದ ರಜೆ
  • ಜುಲೈ 6, ಸೋಮವಾರ: ಎಂಎಚ್​ಐಪಿ ದಿನ (ಮಿಝೋರಾಮ್​ನಲ್ಲಿ ರಜೆ)
  • ಜುಲೈ 9, ಗುರುವಾರ: ಬೆಹ್ ಡೇನ್​ಖ್ಲಮ್ ಹಬ್ಬ (ಮೇಘಾಲಯದಲ್ಲಿ ರಜೆ)
  • ಜುಲೈ 11: ಎರಡನೇ ಶನಿವಾರದ ರಜೆ
  • ಜುಲೈ 12: ಭಾನುವಾರದ ರಜೆ
  • ಜುಲೈ 13, ಸೋಮವಾರ: ಭಾನು ಜಯಂತಿ, ಬಲಿದಾನ ದಿನ (ಸಿಕ್ಕಿಂ, ಕಾಶ್ಮೀರದಲ್ಲಿ ರಜೆ)
  • ಜುಲೈ 16, ಗುರುವಾರ: ರಥ ಯಾತ್ರೆ, ಕಾಂಗ್, ಹರೇಲಾ (ಒಡಿಶಾ, ಮಣಿಪುರ್, ಉತ್ತರಾಖಂಡ್ ರಾಜ್ಯಗಳಲ್ಲಿ ರಜೆ)
  • ಜುಲೈ 17, ಶುಕ್ರವಾರ: ಯು ತಿರೋತ್ ಸಿಂಗ್ ಪುಣ್ಯ ತಿಥಿ (ಮೇಘಾಲಯದಲ್ಲಿ ರಜೆ)
  • ಜುಲೈ 18, ಶನಿವಾರ: ದ್ರುಪಕಾ ಶೆ ಜಿ (ಸಿಕ್ಕಿಂನಲ್ಲಿ ರಜೆ)
  • ಜುಲೈ 19: ಭಾನುವಾರದ ರಜೆ
  • ಜುಲೈ 22, ಬುಧವಾರ: ಖರ್ಚಿ ಪೂಜಾ (ತ್ರಿಪುರಾದಲ್ಲಿ ರಜೆ)
  • ಜುಲೈ 25: ನಾಲ್ಕನೇ ಶನಿವಾರದ ರಜೆ
  • ಜುಲೈ 26: ಭಾನುವಾರದ ರಜೆ

ಇದನ್ನೂ ಓದಿ: ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು

ಕರ್ನಾಟಕದಲ್ಲಿ ಜುಲೈನಲ್ಲಿ ಬ್ಯಾಂಕ್ ರಜಾದಿನಗಳು

ಕರ್ನಾಟಕದಲ್ಲಿ ಜುಲೈನಲ್ಲಿ ವಿಶೇಷ ರಜಾ ದಿನಗಳಿಲ್ಲ. ಒಟ್ಟು ಆರು ದಿನಗಳು ಇಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಈ ಆರೂ ರಜೆಗಳು ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ಹಾಲಿಡೇಗಳಾಗಿವೆ.

  • ಜುಲೈ 5: ಭಾನುವಾರದ ರಜೆ
  • ಜುಲೈ 11: ಎರಡನೇ ಶನಿವಾರದ ರಜೆ
  • ಜುಲೈ 12: ಭಾನುವಾರದ ರಜೆ
  • ಜುಲೈ 19: ಭಾನುವಾರದ ರಜೆ
  • ಜುಲೈ 25: ನಾಲ್ಕನೇ ಶನಿವಾರದ ರಜೆ
  • ಜುಲೈ 26: ಭಾನುವಾರದ ರಜೆ

ಇದನ್ನೂ ಓದಿ: ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು

ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲೇ ಲಭ್ಯ ಇರುವುದರಿಂದ ಬಹಳ ಜನರಿಗೆ ರಜೆಯ ಅನನುಕೂಲ ಇರುವುದಿಲ್ಲ. ಸೀಮಿತ ಪ್ರಮಾಣದಲ್ಲಿ ಕ್ಯಾಷ್ ವಿತ್​ಡ್ರಾ ಮಾಡಿಕೊಳ್ಳಲು ಎಟಿಎಂಗಳು 24 ಗಂಟೆ ತೆರೆದಿರುತ್ತವೆ. ಯಾವಾಗ ಬೇಕಾದರೂ ಯುಪಿಐ ಮೂಲಕ ಹಣದ ಟ್ರಾನ್ಸ್​ಫರ್ ಮಾಡಬಹುದು. ನೆಟ್​ಬ್ಯಾಂಕಿಂಗ್​ನಲ್ಲಿ ಇನ್ನೂ ಹಲವು ಹಣಕಾಸು ಕಾರ್ಯಗಳನ್ನು ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Mon, 29 June 26

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ