AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು

Financial tasks to be done by June 30th: ಕೆಲ ಪ್ರಮುಖ ಹಣಕಾಸು ಕಾರ್ಯಗಳಿಗೆ ಜೂನ್ 30ರವರೆಗೆ ಕಾಲಾವಕಾಶ ಇದೆ. ಎಲ್​ಪಿಜಿ ಗ್ಯಾಸ್ ಸೌಲಭ್ಯ ಪಡೆಯುತ್ತಿರುವವರು ಇ-ಕೆವೈಸಿ ಮಾಡಿಸಬೇಕಾಗುತ್ತದೆ, ಗಮನಿಸಬೇಕು. ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿರುವವರು, ತಪ್ಪು ಅಥವಾ ಮಾರ್ಪಾಡುಗಳಿದ್ದರೆ ತಿದ್ದಲು ಜೂನ್ 30ರವರೆಗೆ ಕಾಲಾವಕಾಶ ಇದೆ.

ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು
ಇನ್ಕಮ್ ಟ್ಯಾಕ್ಸ್ ರಿಟರ್ನ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 29, 2026 | 11:48 AM

Share

ಮುಖ್ಯಾಂಶಗಳು

  • ಕೆಲ ಪ್ರಮುಖ ಹಣಕಾಸು ಕಾರ್ಯಗಳಿಗೆ ಜೂನ್ 30ರವರೆಗೆ ಕಾಲಾವಕಾಶ ಇದೆ.
  • ಎಲ್​ಪಿಜಿ ಗ್ಯಾಸ್ ಸೌಲಭ್ಯ ಪಡೆಯುತ್ತಿರುವವರು ಇ-ಕೆವೈಸಿ ಮಾಡಿಸಬೇಕಾಗುತ್ತದೆ.
  • ಐಟಿಆರ್ ಸಲ್ಲಿಸಿರುವವರು, ಮಾರ್ಪಾಡುಗಳಿದ್ದರೆ ಜೂನ್ 30ರವರೆಗೆ ಕಾಲಾವಕಾಶ.

ನವದೆಹಲಿ, ಜೂನ್ 29: ಈ ತಿಂಗಳ ಕೊನೆಯ ದಿನಾಂಕವು (ಜೂನ್ 30) ಸಾಮಾನ್ಯ ನಾಗರಿಕರಿಗೆ ಮತ್ತು ಉದ್ಯಮಿಗಳಿಗೆ ಪ್ರಮುಖವಾಗಿದೆ. ಈ ದಿನಾಂಕದೊಳಗೆ ಕೆಲವು ಪ್ರಮುಖ ಹಣಕಾಸು ಮತ್ತು ತೆರಿಗೆ ಸಂಬಂಧಿತ ಕೆಲಸಗಳನ್ನು (Financial tasks) ಮುಗಿಸದಿದ್ದರೆ, ಜುಲೈ 1ರಿಂದ ಆರ್ಥಿಕ ನಷ್ಟ ಅಥವಾ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಎಲ್​ಪಿಜಿ ಗ್ಯಾಸ್​ಗೆ ಸಬ್ಸಿಡಿ ಪಡೆಯುತ್ತಿರುವವರು, ಆ ಸೌಲಭ್ಯ ಮುಂದುವರಿಸಲು ಇಕೆವೈಸಿ ಮಾಡುವುದು ಸೇರಿದಂತೆ ಕೆಲ ಪ್ರಮುಖ ಹಣಕಾಸು ಕಾರ್ಯಗಳಿಗೆ ನಾಳೆಯೇ (ಜೂನ್ 30, ಮಂಗಳವಾರ) ಡೆಡ್​ಲೈನ್ ಇದೆ. ಇಂಥ ಕಾರ್ಯಗಳ್ಯಾವುವು ಎನ್ನುವ ಮಾಹಿತಿ ಇಲ್ಲಿದೆ:

ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ (LPG e-KYC) ಕಡ್ಡಾಯ

ನೀವು ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದು, ಸಬ್ಸಿಡಿ (Subsidy) ಪಡೆಯುತ್ತಿದ್ದರೆ ಜೂನ್ 30ರೊಳಗೆ ಇ-ಕೆವೈಸಿ (ಬಯೋಮೆಟ್ರಿಕ್ ಪರಿಶೀಲನೆ) ಮಾಡಿಸುವುದು ಕಡ್ಡಾಯವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮತ್ತು ಸಬ್ಸಿಡಿ ಪಡೆಯುತ್ತಿರುವ ಇತರ ಸಾಮಾನ್ಯ ಗ್ರಾಹಕರು ಇದನ್ನು ಮಾಡಿಸಬೇಕು.

ಇದನ್ನೂ ಓದಿ: ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು

ಈ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಜಮೆಯಾಗುವುದು ಕಾಯಂ ಆಗಿ ಸ್ಥಗಿತಗೊಳ್ಳಬಹುದು. ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಮೊಬೈಲ್ ಆಪ್ ಮೂಲಕ ಇದನ್ನು ಸುಲಭವಾಗಿ ಮಾಡಬಹುದು. ಈಗಾಗಲೇ ಈ ಆರ್ಥಿಕ ವರ್ಷದಲ್ಲಿ ಕೆವೈಸಿ ಮಾಡಿಸಿರುವ ಸಬ್ಸಿಡಿ ರಹಿತ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ.

ಆದಾಯ ತೆರಿಗೆ ರಿಟರ್ನ್ಸ್ ಪರಿಶೀಲನೆಯ ಗಡುವು

ಹೊಸ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 31 ಆಗಿದ್ದರೂ, ಈಗಾಗಲೇ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿರುವವರಿಗೆ ಜೂನ್ 30 ಪ್ರಮುಖ ದಿನವಾಗಿದೆ.

ಆದಾಯ ತೆರಿಗೆ ಇಲಾಖೆಯು ಸಲ್ಲಿಕೆಯಾದ ರಿಟರ್ನ್ಸ್‌ಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ತಪ್ಪುಗಳನ್ನು ಪತ್ತೆಹಚ್ಚಲು ಮತ್ತು ಸೆಕ್ಷನ್ 143(2) ಅಡಿಯಲ್ಲಿ ಸ್ಕ್ರುಟಿನಿ ನೋಟಿಸ್ (Scrutiny Notice) ಜಾರಿ ಮಾಡುತ್ತದೆ. ನಿಮ್ಮ ಫಾರ್ಮ್ 26AS, AIS ಅಥವಾ ಬ್ಯಾಂಕ್ ವಹಿವಾಟುಗಳ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದರೆ ಇಲಾಖೆಯಿಂದ ವಿಚಾರಣೆಯ ನೋಟಿಸ್ ಬರಬಹುದು. ಆದ್ದರಿಂದ ತೆರಿಗೆದಾರರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಜೂನ್ 30ರವರೆಗೂ ಅವಕಾಶ ಇರುತ್ತದೆ. ಹೀಗಾಗಿ, ಇದು ಮುಖ್ಯವಾಗಿದೆ.

ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ಬಹಳ ಬಳಕೆಯಾಗುವ ಟಾಪ್-10 ತಂತ್ರಜ್ಞಾನಗಳು; ಡಬ್ಲ್ಯುಇಎಫ್​ನಿಂದ ಪಟ್ಟಿ ಬಿಡುಗಡೆ

ಉದ್ಯಮಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ತ್ರೈಮಾಸಿಕ ಮುಕ್ತಾಯ

ಜೂನ್ 30 ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್ – Quarterly End) ಕೊನೆಯ ದಿನವಾಗಿದೆ. ಹೀಗಾಗಿ ವ್ಯಾಪಾರಸ್ಥರು ತಮ್ಮ ಖಾತೆಗಳ ಪುಸ್ತಕಗಳನ್ನು ನವೀಕರಿಸಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಸಲ್ಲಿಸಬೇಕಾದ ಜಿಎಸ್‌ಟಿ (GST) ರಿಟರ್ನ್ಸ್, ಟಿಡಿಎಸ್ (TDS) ಮತ್ತು ಟಿಸಿಎಸ್ (TCS) ಸ್ಟೇಟ್‌ಮೆಂಟ್‌ಗಳನ್ನು ಸಕಾಲದಲ್ಲಿ ಸಿದ್ಧಪಡಿಸಿಕೊಳ್ಳಲು ಜೂನ್ 30ರ ಒಳಗಿನ ಲೆಕ್ಕಾಚಾರಗಳು ಬಹಳ ಮುಖ್ಯವಾಗಿವೆ.

ಕೊನೆಯ ಕ್ಷಣದ ಗಡಿಬಿಡಿ ಮತ್ತು ದಂಡವನ್ನು ತಪ್ಪಿಸಲು ಈ ಎಲ್ಲಾ ಪ್ರಮುಖ ಆರ್ಥಿಕ ಜವಾಬ್ದಾರಿಗಳನ್ನು ಗಡುವಿನ ಒಳಗಾಗಿಯೇ ಪೂರ್ಣಗೊಳಿಸುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 29 June 26

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ