‘ಪದಕಗಳ ಜೊತೆ ಕೋಟ್ಯಂತರ ಜನರ ಹೃದಯವನ್ನೂ ಗೆದ್ದಿದ್ದೀರಿ’; ಪ್ಯಾರಾ ಅಥ್ಲೀಟ್‌ಗಳ ಸಾಧನೆಗೆ ಪ್ರಧಾನಿ ಮೋದಿ ಶಹಬ್ಬಾಸ್!
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅತ್ಯುತ್ತಮ ಹಾಗೂ ಐತಿಹಾಸಿಕ ಪ್ರದರ್ಶನ ನೀಡಿ ಹಿಂತಿರುಗಿದ ಭಾರತೀಯ ಪ್ಯಾರಾ-ಕ್ರೀಡಾಪಟುಗಳ ತಂಡದ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸಂವಾದ ನಡೆಸಿ ಅಭಿನಂದಿಸಿದರು. ಭಾರತೀಯ ಪ್ಯಾರಾ ಪಡೆ 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕ ಸೇರಿದಂತೆ ಒಟ್ಟು 114 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ನವದೆಹಲಿ, ನವೆಂಬರ್ 5: ಜಪಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬಾರ್ಡರ್-ಲೈನ್ ಭರ್ಜರಿ ಪ್ರದರ್ಶನ ನೀಡಿ 114 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದ ಭಾರತದ ಪ್ಯಾರಾ ಕ್ರೀಡಾಪಟುಗಳ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಕ್ರೀಡಾಪಟುಗಳ ಕಠಿಣ ಶ್ರಮ, ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ ಮೋದಿ, “ನಿಮ್ಮ ಈ ಐತಿಹಾಸಿಕ ಸಾಧನೆಯು ಕೇವಲ ಪದಕಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಕೋಟ್ಯಂತರ ಭಾರತೀಯರ ಹೃದಯವನ್ನು ಗೆದ್ದಿದೆ” ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನೀವು ಪಂದ್ಯಾವಳಿ ಮುಗಿಯುವವರೆಗೆ ಪದಕಗಳ ಮಳೆಯನ್ನೇ ಹರಿಸಲು ನಿರ್ಧರಿಸಿದಂತಿತ್ತು. 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳು ಸೇರಿದಂತೆ 5 ಹೊಸ ವಿಶ್ವ ದಾಖಲೆ ಹಾಗೂ 9 ಏಷ್ಯನ್ ದಾಖಲೆಗಳನ್ನು ಬರೆದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ” ಎಂದು ಕೊಂಡಾಡಿದರು.
ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್ ಆರ್ಚರಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಕೈಗಳಿಲ್ಲದ ಶೀತಲ್ ದೇವಿ..!
ಕ್ರೀಡಾಕೂಟದ ಆರಂಭಕ್ಕೂ ಕೇವಲ 2 ತಿಂಗಳ ಮೊದಲು ತಾಯಿಯನ್ನು ಕಳೆದುಕೊಂಡರೂ ಧೃತಿಗೆಡದೆ ದೇಶಕ್ಕೆ ಪದಕ ತಂದುಕೊಟ್ಟ ಅಥ್ಲೀಟ್ ರಿಂಕು ಅವರ ಕಠಿಣ ಶ್ರಮವನ್ನು ಪ್ರಧಾನಿ ವಿಶೇಷವಾಗಿ ಸ್ಮರಿಸಿದರು. ಶೀತಲ್ ದೇವಿ, ಸಿಮ್ರಾನ್ ಸೇರಿದಂತೆ ಅನೇಕ ಯುವ ಅಥ್ಲೀಟ್‌ಗಳ ಸಾಧನೆಯು ದೇಶದ ಇತರ ದಿವ್ಯಾಂಗ ಸೋದರ-ಸೋದರಿಯರಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಮೋದಿ ಹೇಳಿದರು.
What a performance by our Asian Para Games athletes! They have shown what aiming high really looks like. https://t.co/5t3aCa71rT
— Narendra Modi (@narendramodi) November 5, 2026
ಸ್ವದೇಶಿ ಕ್ರೀಡಾ ಸಾಮಗ್ರಿ:
ಭಾರತೀಯ ಕ್ರೀಡಾಪಟುಗಳು ಬಳಸುವ ಉಡುಪು, ಶೂಗಳು ಹಾಗೂ ಕ್ರೀಡಾ ಉಪಕರಣಗಳು ‘ಮೇಡ್ ಇನ್ ಇಂಡಿಯಾ’ ಆಗಿರಬೇಕು. ಭಾರತವು ಜಾಗತಿಕ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸುವುದರ ಜೊತೆಗೆ ಜಗತ್ತಿಗೇ ಕ್ರೀಡಾ ಉಪಕರಣಗಳನ್ನು ಪೂರೈಸುವ ಉತ್ಪಾದನಾ ಕೇಂದ್ರವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Delhi: Prime Minister Narendra Modi says, “Friends, there was a time when India’s participation in most sports was considered merely a formality. In the Para Games, the country lagged far behind. In the 2010 Para Asian Games, India won just a single gold medal. Overall, we managed to win only 14 medals in that entire tournament—just 14. In stark contrast, this time our athletes have returned home with an extraordinary total of 114 medals”
— IANS (@ians_india) November 5, 2026
“ಒಂದು ಕಾಲವಿತ್ತು, ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಕಳುಹಿಸಲು ಭಯಪಡುತ್ತಿದ್ದರು. ಕ್ರೀಡಾ ವ್ಯವಸ್ಥೆ ಬೆಂಬಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ ನೀವು ಸೋಲೊಪ್ಪಿಕೊಳ್ಳದೆ ಸಾಗಿದಂತೆ, ನಾವು ಸಹ ಕ್ರೀಡಾ ಮೂಲಸೌಕರ್ಯ ಹಾಗೂ ಸಿಸ್ಟಮ್ ಅನ್ನು ಬಲಪಡಿಸುವತ್ತ ಗಮನ ಹರಿಸಿದೆವು. ಈಗ ನಿಮ್ಮ ಬಳಿ ಪ್ರತಿಭೆಯಿದ್ದರೆ ಇಡೀ ಭಾರತ ದೇಶ ನಿಮ್ಮ ಬೆನ್ನಿಗೆ ನಿಲ್ಲುತ್ತದೆ.” ಎಂದು ಮೋದಿ ಭರವಸೆ ನೀಡಿದ್ದಾರೆ.
ವಿಶೇಷ ನೆನಪಿನ ಕಾಣಿಕೆ ಸಲ್ಲಿಕೆ:
ಕ್ರೀಡಾಪಟುಗಳು ತಾವೇ ಸಹಿ ಮಾಡಿದ ಜರ್ಸಿಗಳು, ಕ್ರೀಡಾ ಉಪಕರಣಗಳು ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್‌ನ ವಿಶೇಷ ನೆನಪಿನ ಕಾಣಿಕೆಗಳನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿ ತಮ್ಮ ಗೌರವ ಸಲ್ಲಿಸಿದರು.
ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್: ಒಂದೇ ಆವೃತ್ತಿಯಲ್ಲಿ 2 ಚಿನ್ನದ ಪದಕ ಗೆದ್ದ ನಿಷಾದ್ ಕುಮಾರ್..!
2010ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಕೇವಲ 14 ಪದಕಗಳನ್ನು (1 ಚಿನ್ನ) ಗಳಿಸಿತ್ತು. ಆದರೆ 2026ರ ಈ ಪ್ಯಾರಾ ಗೇಮ್ಸ್‌ನಲ್ಲಿ 114 ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾರಂಗ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಈ ಬಾರಿಯ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು 5 ವಿಶ್ವ ದಾಖಲೆ, 9 ಏಷ್ಯನ್ ದಾಖಲೆಗಳನ್ನು ಬರೆದಿದ್ದಾರೆ.
WATCH | PM @narendramodi interacts with India’s Asian Para Games 2026 Contingent at Indira Gandhi Sports Complex, New Delhi.
Indian Para-Athletes Delivered a Record-Breaking Performance at the Asian Para Games.
@PMOIndia @YASMinistry @Media_SAI
#AsianParaGames2026 https://t.co/LhEm8379JY
— All India Radio News (@airnewsalerts) November 5, 2026
ಮಹಿಳಾ ಅಥ್ಲೀಟ್‌ಗಳ ಸಾಧನೆ:
ತಂಡದಲ್ಲಿದ್ದ 56 ಮಹಿಳಾ ಕ್ರೀಡಾಪಟುಗಳ ಪೈಕಿ 34 ಅಥ್ಲೀಟ್‌ಗಳು ಪದಕಗಳನ್ನು ಜಯಿಸಿ ದೇಶದ ಕ್ರೀಡಾ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ 61 ಯುವ ಅಥ್ಲೀಟ್‌ಗಳಲ್ಲಿ 36 ಕ್ರೀಡಾಪಟುಗಳು ಪದಕಗಳೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ.
Delhi: Prime Minister Narendra Modi meets the Indian contingent that participated in the Asian Para Games 2026. https://t.co/NnKWgj7kQ2
— IANS (@ians_india) November 5, 2026
ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಜೂಡೋ ಮತ್ತು ಪವರ್‌ಲಿಫ್ಟಿಂಗ್ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾರತ ತೋರಿದ ಬಲವಾದ ಪ್ರದರ್ಶನವನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 pm, Thu, 5 November 26




