ಆಧಾರ್
ಆಧಾರ್ ಕಾರ್ಡ್ ಬಹಳ ಅಗತ್ಯ ಇರುವ ದಾಖಲೆ ಎಂಬುದು ಗೊತ್ತಿರಬಹುದು. ಯುಐಡಿಎಐ ವಿತರಿಸುವ ಆಧಾರ್ ಕಾರ್ಡ್ (Aadhaar Card) ನಮ್ಮ ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆ ಮಾತ್ರವಲ್ಲ, ಸರ್ಕಾರಿ ಯೋಜನೆಗಳ ಸೇವೆ ಪಡೆಯಲು ಅವಶ್ಯಕವಾದ ದಾಖಲೆ ಹೌದು. ಬ್ಯಾಂಕ್, ಗ್ಯಾಸ್ ಇತ್ಯಾದಿ ಖಾತೆಗಳಿಗೂ ಕೆವೈಸಿಗೆ ಆಧಾರ್ ಬೇಕು. ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಬಹಳ ಪ್ರಯೋಜನ. ಇದರಿಂದ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದು.
ಆಧಾರ್ಗೆ ಮೊಬೈಲ್ ನಂಬರ್ ಸೇರಿಸುವುದು ಅಥವಾ ನಂಬರ್ ಅಪ್ಡೇಟ್ ಮಾಡುವ ಕ್ರಮಗಳಿವು
- ನಿಮ್ಮ ವಾಸಸ್ಥಳದ ಸಮೀಪ ಅಥವಾ ಯಾವುದೇ ಸ್ಥಳದಲ್ಲಿರುವ ಆಧಾರ್ ಸೇವಾ ಕೇಂದ್ರ ಅಥವಾ ಎನ್ರೋಲ್ಮೆಂಟ್ ಸೆಂಟರ್ಗೆ ಹೋಗಿರಿ. ಈ ಆಧಾರ್ ಕೇಂದ್ರ ಎಲ್ಲಿದೆ ಎಂದು ಗೊತ್ತಾಗದೇ ಇದ್ದರೆ ಯುಐಡಿಎಐ ವೆಬ್ಸೈಟ್ನಲ್ಲಿ ಲೊಕೇಟ್ ಎನ್ರೋಲ್ಮೆಂಟ್ ಸೆಂಟರ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಸಮೀಪದ ಆಧಾರ್ ಕೇಂದ್ರವನ್ನು ತೋರಿಸುತ್ತದೆ.
- ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗೆ ಹೋದರೆ ಅಲ್ಲಿರುವ ಸಿಬ್ಬಂದಿ ಮೂಲಕ ಆಧಾರ್ ತಿದ್ದುಪಡಿ ಸೇವೆ ಪಡೆಯಬಹುದು.
- ಜೊತೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಇತರ ಪೂರಕ ದಾಖಲೆಗಳನ್ನು ಇಟ್ಟುಕೊಂಡಿರಿ.
ಇದನ್ನೂ ಓದಿ: ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ
- ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದಾದರೆ ಅದಕ್ಕೆಂದು ಫಾರ್ಮ್ ಕೊಡಲಾಗುತ್ತದೆ. ಅದನ್ನು ಭರ್ತಿ ಮಾಡಬೇಕು.
- ಎಚ್ಚರಿಕೆಯಿಂದ ಅರ್ಜಿ ತುಂಬಿಸಿ, ಅಲ್ಲಿರುವ ಹೆಲ್ಪ್ ಎಕ್ಸಿಕ್ಯೂಟಿವ್ಗೆ ಕೊಡಿ. ಫಾರ್ಮ್ನಲ್ಲಿ ತುಂಬಿಸಲಾಗಿರುವ ಮಾಹಿತಿ ಎಲ್ಲವೂ ಸರಿ ಇದ್ದ ಬಳಿಕ ಶುಲ್ಕ ಕಟ್ಟಲು ತಿಳಿಸಲಾಗುತ್ತದೆ.
- ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದೂ ಸೇರಿ ಯಾವುದೇ ಸೇವೆಗೂ 50 ರೂ ಶುಲ್ಕ ಇರುತ್ತದೆ. ಕ್ಯಾಷ್ ಮೂಲಕ ಹಣ ಪಾವತಿಸಬಹುದು. ಅಥವಾ ಸಿಬ್ಬಂದಿ ಬೇರೆ ಪಾವತಿ ಆಯ್ಕೆಗಳನ್ನು ಕೊಡಬಹುದು.
ಇದನ್ನೂ ಓದಿ: Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ
- ಶುಲ್ಕ ಕಟ್ಟಿದ ಬಳಿಕ ನಿಮಗೆ ಅಪ್ಡೇಟ್ ರಿಕ್ವೆಸ್ಟ್ ನಂಬರ್ (ಯುಆರ್ಎನ್) ಸ್ಲಿಪ್ ಅನ್ನು ಕೊಡಲಾಗುತ್ತದೆ. ಈ ನಂಬರ್ ಮೂಲಕ ನಿಮ್ಮ ಮನವಿಯ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ತಿಳಿಯಬಹುದು.
- ಯುಐಡಿಎಐನ ಮೈ ಆಧಾರ್ ಪೋರ್ಟಲ್ನಲ್ಲಿ ನೀವು ನಿಮ್ಮ ಮನವಿಯ ಸ್ಥಿತಿ ನೋಡಬಹುದು. ಪೋರ್ಟಲ್ನಲ್ಲಿರುವ ‘ಚೆಕ್ ಎನ್ರೋಲ್ಮೆಂಟ್’ ಸೆಕ್ಷನ್ಗೆ ಹೋಗಿ ಅಲ್ಲಿ ಯುಆರ್ಎನ್ ನೀಡಿ ಸ್ಟೇಟಸ್ ಪರಿಶೀಲಿಸಬಹುದು.
- ನೀವು ಮೊಬೈಲ್ ನಂಬರ್ ಅಪ್ಡೇಟ್ಗೆ ಮನವಿ ಸಲ್ಲಿಸಿದ ಬಳಿಕ ಅದು ಡಾಟಾಬೇಸ್ನಲ್ಲಿ ಯಶಸ್ವಿಯಾಗಿ ಅಪ್ಡೇಟ್ ಆಗಲು 90 ದಿನ ಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ