ಕುಟುಂಬ ಸದಸ್ಯರೆಲ್ಲರ ಬ್ಯಾಂಕ್ ಖಾತೆ ಒಂದೇ ಗುಂಪಿನಲ್ಲಿ; ಬಾಬ್ ಪರಿವಾರ್ ಅಕೌಂಟ್​ನ ಅನುಕೂಲಗಳೇನು?

BoB Parivar Account for family members: ಬ್ಯಾಂಕ್ ಆಫ್ ಬರೋಡದ ಪರಿವಾರ್ ಅಕೌಂಟ್ ಸ್ಕೀಮ್​ನಲ್ಲಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಿ ನಿರ್ವಹಿಸಬಹುದು. ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ಅತ್ತೆ, ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್​ನ ಸದಸ್ಯರಾಗಲು ಅರ್ಹರಿರುತ್ತಾರೆ. ಕಡಿಮೆ ಬಡ್ಡಿಯಲ್ಲಿ ಸಾಲ, ಲಾಕರ್ ಶುಲ್ಕ ರಿಯಾಯಿತಿ ಇತ್ಯಾದಿ ಸಾಕಷ್ಟು ಲಾಭಗಳು ಪರಿವಾರ್ ಅಕೌಂಟ್​ನಿಂದ ಸಿಗುತ್ತದೆ.

ಕುಟುಂಬ ಸದಸ್ಯರೆಲ್ಲರ ಬ್ಯಾಂಕ್ ಖಾತೆ ಒಂದೇ ಗುಂಪಿನಲ್ಲಿ; ಬಾಬ್ ಪರಿವಾರ್ ಅಕೌಂಟ್​ನ ಅನುಕೂಲಗಳೇನು?
ಬ್ಯಾಂಕ್ ಆಫ್ ಬರೋಡಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 04, 2023 | 11:48 AM

ನವದೆಹಲಿ, ಡಿಸೆಂಬರ್ 4: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಫ್ ಬರೋಡಾ ಪರಿವಾರ್ ಅಕೌಂಟ್ (Bank of Baroda Parivar Account) ಸ್ಕೀಮ್ ಅನ್ನು ಆರಂಭಿಸಿದೆ. ಬ್ಯಾಂಕ್​ನ ಫೆಸ್ಟಿವ್ ಸೀಸನ್ ಅಭಿಯಾನದ ಭಾಗವಾಗಿ ‘ಮೈ ಫ್ಯಾಮಿಲಿ, ಮೈ ಬ್ಯಾಂಕ್’ ಹೆಸರಿನಲ್ಲಿ ಪರಿವಾರ್ ಅಕೌಂಟ್ ಶುರು ಮಾಡಲಾಗಿದೆ. ಒಂದು ಕುಟುಂಬದ ಎಲ್ಲ ಸದಸ್ಯರ ಬ್ಯಾಂಕ್ ಖಾತೆಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ. ಈ ರೀತಿ ಬ್ಯಾಂಕ್ ಖಾತೆಗಳನ್ನು ಕುಟುಂಬ ಸದಸ್ಯರ ಮಧ್ಯೆ ಮಾತ್ರವಲ್ಲ, ಒಬ್ಬರಿಗೆ ಸೇರಿದ ವಿವಿಧ ಬಿಸಿನೆಸ್ ಅಕೌಂಟ್​ಗಳನ್ನೂ ಒಂದೇ ಗುಂಪಿಗೆ ಸೇರಿಸಬಹುದು. ಈ ರೀತಿ ಗ್ರೂಪ್ ಅಕೌಂಟ್​ಗಳಿಂದ ಸಾಕಷ್ಟು ಲಾಭಗಳನ್ನು, ಅನುಕೂಲತೆಗಳನ್ನು ಬಾಬ್ ಆಫರ್ ಮಾಡಿದೆ.

ಪರಿವಾರ್ ಅಕೌಂಟ್​ನಲ್ಲಿರುವ ಪ್ರತಿಯೊಂದು ಖಾತೆಯನ್ನೂ ಮುಖ್ಯ ಖಾತೆದಾರನೇ ನಿರ್ವಹಣೆ ಮಾಡಬಹುದು. ಆದರೆ, ಎಲ್ಲಾ ಖಾತೆಗಳಿಗೆ ಪ್ರತ್ಯೇಕವಾಗಿ ಮಿನಿಮಮ್ ಬ್ಯಾಲನ್ಸ್ ಇರಿಸುವ ಅವಶ್ಯಕತೆ ಇರುವುದಿಲ್ಲ. ಅಷ್ಟೂ ಖಾತೆಗಳನ್ನು ಸೇರಿಸಿ ಸರಾಸರಿ ತ್ರೈಮಾಸಿಕ ಬ್ಯಾಲನ್ಸ್ ಇಟ್ಟುಕೊಂಡರೆ ಸಾಕು.

ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಸ್ಕೀಮ್ ಹೊಂದಬೇಕಾದರೆ ಕನಿಷ್ಠ ಇಬ್ಬರು ಸದಸ್ಯರ ಬ್ಯಾಂಕ್ ಖಾತೆಗಳಿರಬೇಕು. ಗರಿಷ್ಠ ಆರು ಸದಸ್ಯರನ್ನು ಒಳಗೊಳ್ಳಬಹುದು. ಮುಖ್ಯ ಖಾತೆದಾರನ ಖಾತೆ ಜೊತೆಗೆ ಅವ್ ಸಂಗಾತಿ, ತಂದೆ ತಾಯಿ, ಮಕ್ಕಳು, ಅತ್ತೆ ಮಾವ, ಅಳಿಯ, ಸೊಸೆ ಇವರು ಪರಿವಾರ್ ಅಕೌಂಟ್​ಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್

ಬಾಬ್ ಪರಿವಾರ್ ಅಕೌಂಟ್​ನಲ್ಲಿ ಎಷ್ಟು ಬ್ಯಾಲನ್ಸ್ ಇರಬೇಕು?

ಬ್ಯಾಂಕ್ ಆಫ್ ಬರೋಡಾದ ಪರಿವಾರ್ ಅಕೌಂಟ್ ಮೂರು ರೀತಿ ಇರುತ್ತದೆ: ಡೈಮಂಡ್, ಗೋಲ್ಡ್ ಮತ್ತು ಸಿಲ್ವರ್. ಎಲ್ಲಾ ಸದಸ್ಯರ ಖಾತೆ ಸೇರಿ ತ್ರೈಮಾಸಿಕ ಸರಾಸರಿ ಬ್ಯಾಲನ್ಸ್ ಹಣ ಕ್ರಮವಾಗಿ 5 ಲಕ್ಷ ರೂ, 2 ಲಕ್ಷ ರೂ ಮತ್ತು 50,000 ರೂ ಎಂದಿದೆ.

ಬಾಬ್ ಪರಿವಾರ್ ಅಕೌಂಟ್​ನ ಅನುಕೂಲತೆಗಳೇನು?

  • ರೀಟೇಲ್ ಸಾಲಗಳಿಗೆ ಬಡ್ಡಿದರದಲ್ಲಿ ರಿಯಾಯಿತಿ
  • ಸಾಲದ ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ
  • ಲಾಕರ್​ನ ಬಾಡಿಗೆ ಶುಲ್ಕದಲ್ಲಿ ರಿಯಾಯಿತಿ
  • ಡಿಮ್ಯಾಟ್ ಎಎಂಸಿಯಲ್ಲಿ ರಿಯಾಯಿತಿ
  • ನೆಫ್ಟ್ ಆರ್​ಟಿಜಿಎಸ್ ಶುಲ್ಕದಲ್ಲಿ ರಿಯಾಯಿತಿ
  • ನೆಟ್​ಬ್ಯಾಂಕಿಂಗ್​ನಲ್ಲಿ ನೆಫ್ಟ್ ಮತ್ತು ಆರ್​ಟಿಜಿಎಸ್ ಶುಲ್ಕ ಇರುವುದಿಲ್ಲ
  • ಡಿಡಿ ಮತ್ತು ಪಿಒ ಶುಲ್ಕ ಇರುವುದಿಲ್ಲ
  • ಚೆಕ್ ಬುಕ್ ಶುಲ್ಕದಲ್ಲಿ ರಿಯಾಯಿತಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Mon, 4 December 23

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ