ನೀವು ಎಷ್ಟು ಉಳಿಸುತ್ತೀರೋ ಅಷ್ಟು ಹಣ ಗಳಿಕೆಗೆ ಸಮ. ಇದು ಯಾವತ್ತಿದ್ದರೂ ಸಾರ್ವಕಾಲಿಕವಾಗಿ ಅನ್ವಯ ಆಗುವ ಜಾಣ ನುಡಿ. ಹಾಗೆಯೇ, ಕೂಡಿಟ್ಟ ಹಣ ಖರ್ಚಾಗದೇ ಉಳಿಯಲು ಈ ಕಾಲದಲ್ಲಿ ಸಾಧ್ಯವಾ? ನಿಮ್ಮ ಉಳಿತಾಯದ ಹಣ (Savings) ಬೆಳೆಯದೇ ಹೋದರೆ ಉಳಿತಾಯಕ್ಕೆ ಪಟ್ಟ ನಿಮ್ಮ ಶ್ರಮ ವ್ಯರ್ಥವಾದಂತೆಯೇ. ಇವತ್ತು ಹೂಡಿಕೆಗಳಿಗೆ ಸಿಗುವ ಲಾಭವಾದರೂ ಎಷ್ಟಿದೆ? ಬ್ಯಾಂಕ್ನಲ್ಲಿ ಹಣ ಇಟ್ಟರೆ ವಾರ್ಷಿಕ ಶೇ. 9ರವರೆಗೂ ಬಡ್ಡಿ ಸಿಗುತ್ತದೆ. ಸರ್ಕಾರದ ಉಳಿತಾಯ ಸ್ಕೀಮ್ ಮತ್ತು ಬಾಂಡ್ಗಳನ್ನು ಖರೀದಿಸಿದರೆ ವರ್ಷಕ್ಕೆ ಶೇ. 8ರವರೆಗೆ ಬಡ್ಡಿ ಬರಬಹುದು. ರಿಯಲ್ ಎಸ್ಟೇಟ್ಗೆ ಹಣ ಹಾಕಿದರೆ ಶೇ. 10ರಿಂದ ಶೇ. 20ರವರೆಗೆ ಬೆಳೆಯುವ ಸಾಧ್ಯತೆ ಇರುತ್ತದೆ. ಚಿನ್ನದ ಮೇಲೆ ಹಣ ಹಾಕಿದರೆ ಶೇ. 20ರವರೆಗೂ ಮೌಲ್ಯ ಹೆಚ್ಚಬಹುದು. ಷೇರು ವಹಿವಾಟಿನಲ್ಲಿ ಹೈ ರಿಸ್ಕ್ ತೆಗೆದುಕೊಂಡರೆ ಹೆಚ್ಚು ಲಾಭ ಗಳಿಸುವ ಅವಕಾಶ ಇದೆ. ಮ್ಯೂಚುವಲ್ ಫಂಡ್ಗಳ (Mutual Funds) ಮೂಲಕ ಷೇರುಪೇಟೆಗೆ ಹಣ ಹೂಡಿಕೆ ಮಾಡುವುದು ಬೆಸ್ಟ್ ಎನ್ನುತ್ತಾರೆ ತಜ್ಞರು.
ಅಂತೆಯೇ ಮ್ಯುಚುವಲ್ ಫಂಡ್ಗಳ ಮೇಲೆ ಹೂಡಿಕೆ ಮಾಡುವ ಜನರ ಸಂಖ್ಯೆ ಬೆಳೆಯುತ್ತಿದೆ. ಕೆಲವಿಷ್ಟು ಮ್ಯೂಚುವಲ್ ಫಂಡ್ಗಳು ಭರ್ಜರಿ ಲಾಭಗಳನ್ನು ತಂದುಕೊಟ್ಟಿರುವುದುಂಟು. ವರ್ಷಕ್ಕೆ ಶೇ. 20ಕ್ಕಿಂತಲೂ ಹೆಚ್ಚು ರಿಟರ್ನ್ ಕೊಡುತ್ತಾ ಬಂದಿರುವ 12 ಮ್ಯೂಚುವಲ್ ಫಂಡ್ಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಇವು ಯಾವುದೋ ಒಂದು ಅಥವಾ ಎರಡು ವರ್ಷ ಹೀಗೆ ಶೇ. 20ಕ್ಕಿಂತ ಹೆಚ್ಚು ರಿಟರ್ನ್ ಕೊಟ್ಟಿಲ್ಲ, ಅವು ಸ್ಥಾಪನೆ ಆದಾಗಿನಿಂದ ಹೈ ರಿಟರ್ನ್ ಕೊಡುತ್ತಿವೆ. ಇವುಗಳಲ್ಲಿ ಹೂಡಿಕೆ ಮಾಡಲಾಗಿರುವ ಹಣ 3-4 ವರ್ಷಕ್ಕೆ ಡಬಲ್ ಆಗಿರುವುದುಂಟು.
ಇದನ್ನೂ ಓದಿ: LIC Premium Income: ಪ್ರೀಮಿಯಮ್ಗಳಿಂದ ಎಲ್ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?
ಇದನ್ನೂ ಓದಿ: Adani Bonds: ಹೂಡಿಕೆದಾರರ ವಿಶ್ವಾಸ ಗಳಿಸಲು ಅದಾನಿ ಹರಸಾಹಸ; ಡಾಲರ್ ಸಾಲಪತ್ರಗಳ ಮರುಖರೀದಿಗೆ ಹೆಜ್ಜೆ; ಅದಾನಿ ನಡೆಯ ಮರ್ಮವೇನು?
ಷೇರುಪೇಟೆಯಲ್ಲಿ ಸಣ್ಣ ಮೊತ್ತದ ಕಂಪನಿಗಳ ಮೇಲೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಹೂಡಿಕೆ ಮಾಡುತ್ತವೆ. ಇಂಥ ಹೂಡಿಕೆಗಳನ್ನು ಸ್ಮಾಲ್ ಕ್ಯಾಪ್ ಫಂಡ್ ಎನ್ನಲಾಗುತ್ತದೆ. ಮ್ಯೂಚುವಲ್ ಫಂಡ್ನ ಮ್ಯಾನೇಜರ್ಗಳು ಮಾರುಕಟ್ಟೆ ಮತ್ತು ಹೂಡಿಕೆ ತಜ್ಞರೇ ಆಗಿರುತ್ತಾರೆ. ಸಣ್ಣ ಬಜೆಟ್ನ ಯಾವ ಕಂಪನಿಗಳು ಬೆಳೆಯಬಲ್ಲವು, ಷೇರುಗಳ ಬೆಲೆ ಏರಬಲ್ಲವು ಎಂಬುದನ್ನು ಬಹುತೇಕ ನಿಖರವಾಗಿ ಅಂದಾಜು ಮಾಡಬಲ್ಲರು ಈ ಫಂಡ್ ಮ್ಯಾನೇಜರುಗಳು. ಆದರೂ ಕೂಡ ಸದಾ ಕಾಲಕ್ಕೂ ಮ್ಯೂಚುವಲ್ ಫಂಡ್ ಸರಿ ಎಂದು ನಿಶ್ಚಿತವಾಗಿ ಹೇಳಲಾಗದು. ಇದ್ದುದ್ದರಲ್ಲಿ ಈವರೆಗೆ ಅವುಗಳ ಸಾಧನೆ ಗಮನಿಸಿ ನಿರ್ಣಯಕ್ಕೆ ಬರುವುದಾದರೆ ಮೇಲಿನ ಮ್ಯೂಚುವಲ್ ಫಂಡ್ಗಳ ಪಟ್ಟಿ ಅನುಕೂಲ ತರಬಹುದು.
Published On - 4:51 pm, Tue, 25 April 23