ಪೋಸ್ಟ್ ಪೇಯ್ಡ್ ಬಿಲ್ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಡೀಟೇಲ್ಸ್

Credit score updates: ನಿಮ್ಮ ಸಾಲ ನಿರ್ವಹಣೆಯ ಸಾಮರ್ಥ್ಯಕ್ಕೆ ಕ್ರೆಡಿಟ್ ಸ್ಕೋರ್ ಒಂದು ಪ್ರಮುಖ ಅಳತೆಗೋಲಾಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಲೋನ್ ಇಎಂಐಗಳನ್ನು ಒಮ್ಮೆಯೂ ತಪ್ಪಿಸದಂತೆ ಕಟ್ಟಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ. ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಇತ್ಯಾದಿ ಯುಟಿಲಿಟಿ ಬಿಲ್​​ಗಳನ್ನು ನಿಮ್ಮ ಕ್ರೆಡಿಟ್ ಮಾಹಿತಿಗೆ ಸೇರಿಸುವ ವಿಧಾನಗಳನ್ನು ರೂಪಿಸಲಾಗುತ್ತಿದೆ.

ಪೋಸ್ಟ್ ಪೇಯ್ಡ್ ಬಿಲ್ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಡೀಟೇಲ್ಸ್
ಕ್ರೆಡಿಟ್ ಸ್ಕೋರ್

Updated on: Mar 11, 2025 | 4:13 PM

ನವದೆಹಲಿ, ಮಾರ್ಚ್ 11: ಕ್ರೆಡಿಟ್ ಸ್ಕೋರ್ (credit score) ಎಂಬುದು ನಿಮ್ಮ ಸಾಲ ನಿರ್ವಹಣೆಯ ಸಾಮರ್ಥ್ಯಕ್ಕೆ ನೀಡಲಾಗುವ ಅಂಕ. 300ರಿಂದ 900ರವರೆಗೆ ಅಂಕಗಳನ್ನು ನೀಡಲಾಗುತ್ತದೆ. ಭಾರತದಲ್ಲಿ ಕ್ರೆಡಿಟ್ ಇನ್ಫಾರ್ಮೇಶನ್ ಸಂಸ್ಥೆಗಳಾದ ಸಿಬಿಲ್ (CIBIL), ಎಕ್ಸ್​​ಪೀರಿಯನ್, ಸಿಐಆರ್​ಎಫ್, ಹೈ ಮಾರ್ಕ್, ಈಕ್ವಿಫ್ಯಾಕ್ಸ್ ಈ ಸೇವೆ ನೀಡುತ್ತವೆ. ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್ ಬಿಲ್, ಲೋನ್ ಇಎಂಐ ಇವುಗಳನ್ನು ಎಷ್ಟು ನಿಖರವಾಗಿ ಕಟ್ಟಿರುತ್ತೀರಿ ಎಂಬುದರ ಆಧಾರದ ಮೇಲೆ ಕ್ರೆಡಿಟ್ ಸ್ಕೋರ್ ಅನ್ನು ಗಣಿಸಲಾಗುತ್ತದೆ. ನಿಖರವಾಗಿ ನೀವು ಬಿಲ್ ಅಥವಾ ಇಎಂಐ ಪಾವತಿಸುತ್ತಿದ್ದರೆ ಸ್ಕೋರ್ ಉತ್ತಮವಾಗಿರುತ್ತದೆ.

ಮೊಬೈಲ್ ಇತ್ಯಾದಿ ಯುಟಿಲಿಟಿ ಬಿಲ್​ಗಳು ಲೆಕ್ಕಕ್ಕೆ ಇರೋಲ್ಲವಾ?

ಸದ್ಯದ ಮಟ್ಟಿಗೆ ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಆಗಲೀ, ಎಲೆಕ್ಟ್ರಿಕ್ ಬಿಲ್ ಆಗಲೀ, ಬ್ರಾಡ್​​ಬ್ಯಾಂಡ್ ಬಿಲ್ ಆಗಲೀ ಅವುಗಳಿಗೆ ನೀವು ಮಾಡುವ ವೆಚ್ಚವು ಕ್ರೆಡಿಟ್ ಸ್ಕೋರ್​ನಲ್ಲಿ ಪ್ರತಿಫಲಿಸುವುದಿಲ್ಲ. ನೀವು ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಸರಿಯಾಗಿ ಕಟ್ಟದೇ ಹೋದರೆ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ. ಅಕಸ್ಮಾತ್, ನೀವು ಮೊಬೈಲ್ ಸರ್ವಿಸ್ ಪಡೆಯುತ್ತಿರುವ ಕಂಪನಿಯೇನಾದರೂ ನೀವು ತಡವಾಗಿ ಪಾವತಿಸುತ್ತಿರುವ ಮಾಹಿತಿಯನ್ನು ಸಿಬಿಲ್​ನಂತಹ ಕ್ರೆಡಿಟ್ ಮಾಹಿತಿ ಏಜೆನ್ಸಿಗಳಿಗೆ ರವಾನಿಸಿದಲ್ಲಿ ಆಗ ಸಮಸ್ಯೆಯಾಗಬಹುದು. ಸಾಮಾನ್ಯವಾಗಿ, ಆ ರೀತಿ ಸದ್ಯದ ಮಟ್ಟಿಗೆ ವ್ಯವಸ್ಥೆ ಇಲ್ಲ.

ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?

ಇದನ್ನೂ ಓದಿ
ಆಗಾಗ್ಗೆ ಟ್ಯಾಕ್ಸ್ ರಿಜೈಮ್ ಬದಲಾಯಿಸಬಹುದಾ?
ಸಾಲದ ಕಂತು ಕಟ್ಟಲು ಶೇ. 33 ಆದಾಯ ವೆಚ್ಚ; ಭಾರತೀಯರ ಪರಿಪಾಟಲು
ಕ್ರೆಡಿಟ್ ಸ್ಕೋರ್ ಮೇಲೆ ಸಾಲಕ್ಕೆ ಬಡ್ಡಿದರ ನಿಗದಿ?
ಬ್ಯಾಂಕ್ ಹಣಕ್ಕೆ ಇನ್ಷೂರೆನ್ಸ್ ಖಾತ್ರಿ; 5 ಲಕ್ಷ ರೂ ಮಿತಿ ಹೆಚ್ಚಳ?

ಭವಿಷ್ಯದಲ್ಲಿ ಯುಟಿಲಿಟಿ ಬಿಲ್ ಪ್ರಭಾವವೂ ಇರುತ್ತದೆ…

ಒಬ್ಬ ವ್ಯಕ್ತಿಯ ಸಾಲ ಸಾಮರ್ಥ್ಯ ಅಳೆಯಲು ಬೇರೆ ಬೇರೆ ವಿಧಾನಗಳನ್ನು ಅನ್ವೇಷಿಸಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ಹೊಂದಿಲ್ಲದೇ ಇರುವವರು, ಅಥವಾ ಬ್ಯಾಂಕುಗಳಲ್ಲಿ ಸಾಲವನ್ನೇ ಮಾಡದವರು ಬಹಳಷ್ಟು ಜನರಿದ್ದಾರೆ. ಅವರಿಗೆ ಯಾವ ಕ್ರೆಡಿಟ್ ರಿಪೋರ್ಟ್ ಇರುವುದಿಲ್ಲ. ಹೀಗಾಗಿ, ಮೊಬೈಲ್ ಬಿಲ್ ಇತ್ಯಾದಿ ಕಾರ್ಯಗಳನ್ನು ಕ್ರೆಡಿಟ್ ರಿಪೋರ್ಟ್​​ಗೆ ಸೇರಿಸುವ ವಿಧಾನಗಳಿವೆ. ಕೆಲವೆಡೆ ಪ್ರಾಯೋಗಿಕವಾಗಿ ಇವುಗಳನ್ನು ಚಾಲನೆಯಲ್ಲಿರಿಸಲಾಗಿದೆ. ಇವುಗಳ ನಿಖರತೆ ಮತ್ತು ಉಪಯುಕ್ತತೆ ಎಷ್ಟಿದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಎಲ್ಲೆಡೆ ಜಾರಿಗೊಳಿಸಬಹುದು.

750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇರುವಂತೆ ನೋಡಿಕೊಳ್ಳಿ

ಕ್ರೆಡಿಟ್ ಸ್ಕೋರ್ 300ರಿಂದ 900 ಅಂಕಗಳವರೆಗೆ ಇರುತ್ತದೆ. 300 ಎಂದರೆ ತೀರಾ ಕಳಪೆ ಸ್ಕೋರ್. 900 ಎಂಬುದು ಗರಿಷ್ಠ ಸ್ಕೋರ್. 750ಕ್ಕಿಂತ ಹೆಚ್ಚು ಅಂಕಗಳಿರುವ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಸಾಲ ನೀಡಲು ಹೆಚ್ಚು ವಿಶ್ವಾಸಾರ್ಹ ಎನಿಸಿರುತ್ತಾರೆ. ಬಹುತೇಕ ಎಲ್ಲಾ ಬ್ಯಾಂಕುಗಳು ಈ ವ್ಯಕ್ತಿಗೆ ಕಣ್ಮುಚ್ಚಿ ಪರ್ಸನಲ್ ಲೋನ್ ನೀಡುತ್ತವೆ.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?

ಸಾಲಕ್ಕೆ ಬಡ್ಡಿದರವೂ ಕಡಿಮೆ ಇರುತ್ತದೆ. ಹೆಚ್ಚಿನ ಮೊತ್ತದ ಸಾಲ ಕೂಡ ಸಿಗುತ್ತದೆ. ಒಂದು ವೇಳೆ 600ಕ್ಕಿಂತ ಕಡಿಮೆ ಅಂಕಗಳಿದ್ದರೆ ಅವರಿಗೆ ಪರ್ಸನಲ್ ಲೋನ್ ಸಿಗುವ ಸಾಧ್ಯತೆ ಕಡಿಮೆ. ಒಂದು ವೇಳೆ, ಸಿಕ್ಕರೂ ಬಡ್ಡಿದರ ತೀರಾ ಹೆಚ್ಚಿರುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಮೇಲೆ ನೀವು ಸದಾ ಕಣ್ಣಿಟ್ಟಿರುವುದು ಒಳ್ಳೆಯದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ