
ಜನರು ಮತ್ತು ಸಂಸ್ಥೆಗಳ ಆದಾಯಕ್ಕೆ ಕಾನೂನಿನ ಪ್ರಕಾರ ತೆರಿಗೆ ಪಾವತಿಯಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಐಟಿ ಇಲಾಖೆಯದ್ದಾಗಿರುತ್ತದೆ. ಜನರು ದೊಡ್ಡ ಮಟ್ಟದ ಆದಾಯ ಹೊಂದಿದ್ದರೆ ಅದನ್ನು ಪತ್ತೆ ಮಾಡಲು ಇಲಾಖೆ (Income Tax) ಬಳಿ ವಿವಿಧ ಮಾರ್ಗೋಪಾಯಗಳಿವೆ. ಅದಕ್ಕಾಗಿ ಬ್ಯಾಂಕು, ಪೋಸ್ಟ್ ಆಫೀಸ್ ಇತ್ಯಾದಿ ಹಣಕಾಸು ಸಂಸ್ಥೆಗಳ ನೆರವನ್ನು ಐಟಿ ಇಲಾಖೆ ಪಡೆಯುತ್ತದೆ. ಒಬ್ಬ ವ್ಯಕ್ತಿಯಿಂದ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ಆದಾಗ ಸ್ಟೇಟ್ಮೆಂಟ್ ಆಫ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಎನ್ನುವ ಮಾರ್ಗದ ಮೂಲಕ ಮಾಹಿತಿ ಪಡೆಯುತ್ತದೆ. ಆಗ ಇಲಾಖೆಯು ಆ ವ್ಯಕ್ತಿಯ ಹಣಕಾಸು ಚಟುವಟಿಕೆ, ಆದಾಯ ಮೂಲಗಳನ್ನು ಶೋಧಿಸುವ ಕಾರ್ಯ ಆರಂಭಿಸಲು ಸಾಧ್ಯವಾಗುತ್ತದೆ. ಅಂಥ ಕೆಲ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಯಾಂಕ್ ಡ್ರಾಫ್ಟ್, ಪೇ ಆರ್ಡರ್, ಬ್ಯಾಂಕರ್ಸ್ ಚೆಕ್ಗಳಿಗೆ ಮಾಡುವ ಒಟ್ಟಾರೆ ಕ್ಯಾಷ್ ಪೇಮೆಂಟ್ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿದ್ದರೆ, ಅದನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು ಎನ್ನುತ್ತದೆ ನಿಯಮ.
ಆರ್ಬಿಐನಿಂದ ನೀಡಲಾದ ಪಿಪಿಐಗೆ (ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್) ಕ್ಯಾಷ್ ಪಾವತಿ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದರೆ ಅದು ಐಟಿ ಗಮನಕ್ಕೆ ಹೋಗುತ್ತದೆ.
ಒಬ್ಬ ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಚಾಲ್ತಿ ಖಾತೆಗಳಿಗೆ (ಕರೆಂಟ್ ಅಕೌಂಟ್) ಒಂದು ಹಣಕಾಸು ವರ್ಷದಲ್ಲಿ ಒಟ್ಟಾರೆ 50 ಲಕ್ಷ ರೂಗೂ ಹೆಚ್ಚಿನ ಕ್ಯಾಷ್ ಡೆಪಾಸಿಟ್ ಆದರೆ…
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಒಬ್ಬ ವ್ಯಕ್ತಿಯ ಕರೆಂಟ್ ಅಕೌಂಟ್ಗಳಿಂದ ವರ್ಷದಲ್ಲಿ ಒಟ್ಟು 50 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ಅನ್ನು ವಿತ್ಡ್ರಾ ಮಾಡಿದಾಗ…
ಕರೆಂಟ್ ಅಕೌಂಟ್ ಅಲ್ಲದ ಮತ್ತು ಫಿಕ್ಸೆಡ್ ಡೆಪಾಸಿಟ್ ಹೊರತುಪಡಿಸಿ, ಇತರ ಅಕೌಂಟ್ಗಳಿಗೆ ಒಂದು ವರ್ಷದಲ್ಲಿ ಇಡಲಾದ ಕ್ಯಾಷ್ ಡೆಪಾಸಿಟ್ 10 ಲಕ್ಷ ರೂ ಮೀರಿದಾಗ ಅದನ್ನು ಐಟಿ ಗಮನಕ್ಕೆ ತರಲಾಗುತ್ತದೆ.
ಸರಕು ಮತ್ತು ಸೇವೆಗಳ ಮಾರಾಟದಲ್ಲಿ ಒಂದು ವಹಿವಾಟಿನಲ್ಲಿ 2 ಲಕ್ಷ ರೂಗಿಂತ ಅಧಿಕ ಕ್ಯಾಷ್ ಪೇಮೆಂಟ್ ಬಂದಾಗ ಅದು ಐಟಿ ಗಮನಕ್ಕೆ ಹೋಗಬಹುದು.
ಕ್ರೆಡಿಟ್ ಕಾರ್ಡ್ಗಳಿಗೆ ಒಂದು ವರ್ಷದಲ್ಲಿ ಒಂದು ಲಕ್ಷ ರೂಗಿಂತ ಅಧಿಕ ಪಾವತಿಯನ್ನು ಕ್ಯಾಷ್ನಲ್ಲಿ ಮಾಡಿದಾಗ…
ಕ್ರೆಡಿಟ್ ಕಾರ್ಡ್ಗೆ ಕ್ಯಾಷ್ ಹೊರತುಪಡಿಸಿ ಇತರ ಮಾರ್ಗಗಳಲ್ಲಿ ಪೇಮೆಂಟ್ ಮಾಡಿದಾಗ ಅದು ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಅಧಿಕ ಇದ್ದಾಗ, ಐಟಿ ಗಮನಕ್ಕೆ ಹೋಗುತ್ತದೆ.
ಟೈಮ್ ಡೆಪಾಸಿಟ್ ಅಥವಾ ಫಿಕ್ಸೆಡ್ ಡೆಪಾಸಿಟ್ಗಳಿಗೆ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತ ಹಾಕಿದಾಗ…
ಬಾಂಡ್ ಅಥವಾ ಡಿಬಂಚರ್ಗಳ ಖರೀದಿಗೆ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚು ಹಣ ವ್ಯಯಿಸಿದಾಗ…
ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಷೇರುಗಳನ್ನು ಖರೀದಿಸಿದಾಗ…
ಓಪನ್ ಮಾರ್ಕೆಟ್ ಖರೀದಿ ಹೊರತಾಗಿ, ಷೇರುಗಳ ಮರುಖರೀದಿಗೆ ಒಂದು ವರ್ಷದಲ್ಲಿ 10 ಲಕ್ಷ ರೂ ಮೊತ್ತವಾದಾಗ…
ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಮ್ಯೂಚುವಲ್ ಫಂಡ್ ಯುನಿಟ್ಗಳನ್ನು ಖರೀದಿಸಿದಾಗ…
ಇದನ್ನೂ ಓದಿ: Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…
ನಿವೇಶನ, ಮನೆ ಇತ್ಯಾದಿ ಚಿರಾಸ್ತಿಯ ವಹಿವಾಟು ಮೌಲ್ಯ ಅಥವಾ ಸ್ಟ್ಯಾಂಪ್ ವ್ಯಾಲ್ಯುಯೇಶನ್ 30 ಲಕ್ಷ ರೂಗಿಂತ ಹೆಚ್ಚಿದ್ದಾಗ…
ವಿದೇಶೀ ಕರೆನ್ಸಿಯ ಮಾರಾಟ ಅಥವಾ ಫಾರೆಕ್ಸ್ ಕಾರ್ಡ್ ಕ್ರೆಡಿಟ್ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದಾಗ…
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಟ್ರಾವೆಲರ್ಸ್ ಚೆಕ್, ಡ್ರಾಫ್ಟ್ ಅಥವಾ ಇನ್ಯಾವುದೇ ಇನ್ಸ್ಟ್ರುಮೆಂಟ್ ಮೂಲಕ ವಿದೇಶೀ ಕರೆನ್ಸಿ ಖರೀದಿಗೆ ಮಾಡುವ ವೆಚ್ಚ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದಾಗ…
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ