
ನವದೆಹಲಿ, ಅಕ್ಟೋಬರ್ 23: ದಾಖಲೆಯ ವೇಗದಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (gold rates) ಇಳಿಕೆಯಾಗತೊಡಗಿವೆ. ಅದರಲ್ಲೂ ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿದಷ್ಟೂ ಕುಸಿತ ಕಾಣುತ್ತಿದೆ. ಚಿನ್ನದ ಬೆಲೆಯೂ ತನ್ನ ಗರಿಷ್ಠ ಮಟ್ಟದಿಂದ ತುಂಬಾ ಕೆಳಗೆ ಹೋಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ್ಯೂಯಾರ್ಕ್ನ ಗೋಲ್ಡ್ ಫ್ಯೂಚರ್ನಲ್ಲಿ ಶೇ. 6ರ ಆಸುಪಾಸಿನಷ್ಟು ಕುಸಿತ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 12,500 ರೂಗೆ ಬಂದು ನಿಂತಿದೆ.
ಈ ವರ್ಷದ ಆರಂಭದಲ್ಲಿದ್ದ ಬೆಲೆಗೆ ಹೋಲಿಸಿದರೆ ಚಿನ್ನ ಇನ್ನೂ ಎತ್ತರದಲ್ಲಿದೆಯಾದರೂ ಮುಂಬರುವ ದಿನಗಳಲ್ಲಿ ಬೆಲೆ ಸತತವಾಗಿ ಕುಸಿತವಾಗುವ ಸುಳಿವು ನೀಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಯಾಗಲು ಪ್ರಮುಖ ಕಾರಣವಾಗಿದ್ದುದು ಜಾಗತಿಕ ಅನಿಶ್ಚಿತ ವ್ಯಾಪಾರ ಮತ್ತು ರಾಜಕೀಯ ವಾತಾವರಣ (global economic uncertainty). ಈ ಬೆಲೆ ಇಳಿಕೆಯಾಗಲು ಏನು ಕಾರಣ?
ಇದನ್ನೂ ಓದಿ: ಬಬಲ್ ಝೋನ್ನಲ್ಲಿ ಚಿನ್ನ; 400 ಡಾಲರ್ನಷ್ಟು ಬೆಲೆ ಇಳಿಕೆ ಸಾಧ್ಯತೆ: ಆಭರಣ ವ್ಯಾಪಾರಸ್ಥರ ಅನಿಸಿಕೆ
ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆಯಾಗಲು ಇಂಥದ್ದೇ ಸ್ಪಷ್ಟ ಕಾರಣಗಳಿಲ್ಲ. ಆದರೆ, ತಜ್ಞರು ಈ ಕೆಳಗಿನ ಎರಡು ಪ್ರಮುಖ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಅಸಹಜವಾಗಿ ಬೆಲೆ ಏರಿಕೆ ಹೊಂದಿವೆ. ಸಾಮಾನ್ಯ ವರ್ಷಗಳಲ್ಲಿ ಇವುಗಳ ಬೆಲೆ ಶೇ. 10-12ರಷ್ಟು ಮಾತ್ರವೇ ಏರುವುದು. ಆದರೆ, ಕಳೆದ ಒಂದು ವರ್ಷದಲ್ಲಿ ಬೆಲೆ ಶೇ. 50-70ರಷ್ಟು ಏರಿಕೆ ಆಗಿರುವುದು ಗಮನಾರ್ಹ. ಬೆಲೆಗಳು ಇಷ್ಟು ಉಬ್ಬರ ಕಂಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇವುಗಳನ್ನು ಮಾರಿ ಲಾಭ ಮಾಡಿಕೊಳ್ಳುವುದು ಸಹಜ. ಈಗಲೂ ಅದೇ ಆಗುತ್ತಿರಬಹುದು.
ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ಚಿನ್ನದ ಬೆಲೆ 2026ರಲ್ಲಿ ಶೇ. 20ರಷ್ಟು ಇಳಿಕೆ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಬೆಳ್ಳಿ ಬೆಲೆ ಇನ್ನೂ ಹೆಚ್ಚು ಇಳಿಯಬಹುದು. ಆ ನಂತರ ಇವುಗಳ ಬೆಲೆ ಮತ್ತೆ ಏರಿಕೆಯಾಗತೊಡಗಬಹುದು ಎನ್ನಲಾಗುತ್ತಿದೆ. ಆದರೆ, ಎಷ್ಟು ದಿನ ಈ ಬೆಲೆ ಇಳಿಕೆ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ. ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡದಿದ್ದರೆ, ಅಥವಾ ಮತ್ಯಾವುದೋ ಅಂತಾರಾಷ್ಟ್ರೀಯ ವಿಪತ್ತು ಎದುರಾದರೆ ಚಿನ್ನಕ್ಕೆ ಮತ್ತೆ ಬೇಡಿಕೆ ಬರಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:39 pm, Thu, 23 October 25