
ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಹೂಡಿಕೆ ಮಾಡಬೇಕು ಎಂಬುದು ಹೆಚ್ಚಿನವರಿಗೆ ಇರುವ ಗೊಂದಲ. ಅಲ್ಪಾವಧಿಗೆ ಹೂಡಿಕೆ ಮಾಡಲು ಠೇವಣಿ ಪ್ಲಾನ್ಗಳು ಸೂಕ್ತ. ಆದರೆ, ದೀರ್ಘಾವಧಿ ಹೂಡಿಕೆ (Long term investment) ಮಾಡಲು ಯಾವುವು ಸೂಕ್ತ? ಚಿನ್ನದ ಬೆಲೆ ಇತ್ತೀಚೆಗೆ ನಾಗಾಲೋಟ ನಡೆಸಿರುವುದು ಬಹಳ ಜನರ ಗಮನ ಸೆಳೆದಿದೆ. ಚಿನ್ನ, ಷೇರು ಮತ್ತು ಎಫ್ಡಿಗಳು ಜನಸಾಮಾನ್ಯರ ಪ್ರಿಯವಾದ ಹೂಡಿಕೆ ಯಂತ್ರಗಳಾಗಿವೆ. ಈ ಮೂರರಲ್ಲಿ ದೀರ್ಘಾವಧಿಯಲ್ಲಿ ಅತಿಹೆಚ್ಚು ಲಾಭ ತಂದಿರುವುದು ಯಾವುದು?
ವೈಟ್ಓಕ್ ಕ್ಯಾಪಿಟಲ್ ಸಂಸ್ಥೆ ಕುತೂಹಲಕಾರಿ ಎನಿಸುವ ಒಂದು ತುಲನೆ ಹೆಕ್ಕಿ ತೆಗೆದಿದೆ. 1985ರಿಂದ 2015ರವರೆಗೆ 40 ವರ್ಷದಲ್ಲಿ ಚಿನ್ನ, ಸೆನ್ಸೆಕ್ಸ್ ಮತ್ತು ಎಫ್ಡಿಗಳು ಎಷ್ಟು ರಿಟರ್ನ್ ಕೊಟ್ಟಿವೆ ಎನ್ನುವುದನ್ನು ಅವಲೋಕಿಸಿದೆ. ಹಾಗೆಯೇ, ಹಣದ ಮೌಲ್ಯ ಈ ಅವಧಿಯಲ್ಲಿ ಎಷ್ಟು ಕಡಿಮೆ ಆಗಿದೆ ಎನ್ನುವ ಅಂಶವನ್ನೂ ಅದು ಗಣನೆಗೆ ತೆಗೆದುಕೊಂಡಿದೆ. ಕುತೂಹಲಕಾರಿ ಎನಿಸುತ್ತದೆ ಆ ಮಾಹಿತಿ.
ಇದನ್ನೂ ಓದಿ: ಶೇ. 80 ವಿತ್ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್ಪಿಎಸ್
ನೀವು 1985ರಲ್ಲಿ 100 ರೂ ಹಣವನ್ನು ಬ್ಯಾಂಕ್ ಎಫ್ಡಿ, ಅಥವಾ ಸೆನ್ಸೆಕ್ಸ್, ಅಥವಾ ಚಿನ್ನದ ಮೇಲೆ ಹಾಕಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ ಎಷ್ಟಾಗುತ್ತಿತ್ತು? ಈ ಅವಧಿಯಲ್ಲಿ ಹಣದ ಮೌಲ್ಯ ಎಷ್ಟು ಕಡಿಮೆ ಆಗಿದೆ ಎಂಬುದನ್ನು ವೈಟ್ಓಕ್ ಕ್ಯಾಪಿಟಲ್ ತನ್ನ ವರದಿಯಲ್ಲಿ ತೋರಿಸಿದೆ.
1985ರಲ್ಲಿ ಇದ್ದ ಒಂದು ರುಪಾಯಿಯು ಈಗ ಮೌಲ್ಯದಲ್ಲಿ 14-15 ರೂಗೆ ಸಮ ಎಂಬಂತಾಗಿದೆ. 100 ರೂ ಹಣದ ಮೌಲ್ಯ ಇವತ್ತು 1,478 ರೂ ಆಗಿದೆ. ಇದು ಹಣದುಬ್ಬರದ ಎಫೆಕ್ಟ್. ಈ ಹಣದುಬ್ಬರಕ್ಕಿಂತ ಬಹಳ ಹೆಚ್ಚಿನ ಮಟ್ಟದ ಲಾಭ ತಂದುಕೊಡಬಲ್ಲ ಹೂಡಿಕೆಯು ದೀರ್ಘಾವಧಿ ಹೂಡಿಕೆಗೆ ಪ್ರಶಸ್ತವಾಗಿರುತ್ತದೆ.
ಇದನ್ನೂ ಓದಿ: ಪ್ರತ್ಯೇಕ ಇಪಿಎಫ್ ಅಕೌಂಟ್ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?
ಮೇಲೆ ತಿಳಿಸಿದ ಮಾಹಿತಿ ಪ್ರಕಾರ ಬ್ಯಾಂಕ್ ಡೆಪಾಸಿಟ್ಗಳು ಹಣದುಬ್ಬರಕ್ಕಿಂತ ತುಸು ಹೆಚ್ಚು ಮಾತ್ರವೇ ಲಾಭ ತಂದಿವೆ. ಸೆನ್ಸೆಕ್ಸ್ ಸಾಕಷ್ಟು ಏರಿಕೆ ತಂದಿದೆಯಾದರೂ ಮಧ್ಯದಲ್ಲಿ ಕೆಲ ವರ್ಷ ಕುಸಿತವನ್ನೂ ಕಂಡಿದ್ದಿದೆ. ಇದಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಾ ಬಂದಿದೆ. ಈ 40 ವರ್ಷದಲ್ಲಿ ಅದು ಶೇ. 10-12 ಸಿಎಜಿಆರ್ನಲ್ಲಿ ಬೆಳೆದಿರುವುದನ್ನು ಗುರುತಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ