
ನವದೆಹಲಿ, ಜುಲೈ 22: ಷೇರು ಮಾರುಕಟ್ಟೆ, ಡಾಲರ್, ಹೂಡಿಕೆ ಬಗ್ಗೆ ಬಾರಿ ಬಾರಿ ಸಲಹೆಗಳನ್ನು ನೀಡುತ್ತಲೇ ಇರುವ ಖ್ಯಾತ ಲೇಖಕ ಮತ್ತು ಹೂಡಿಕೆದಾರ ರಾಬರ್ಟ್ ಕಿಯೋಸಾಕಿ (Robert Kiyosaki) ಈಗ ಚಿನ್ನ (gold), ಬೆಳ್ಳಿ ಮತ್ತು ಬಿಟ್ಕಾಯಿನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ ವಿಶ್ವದ ಪ್ರಮುಖ ಸರಕುಗಳ ಬೆಲೆ ಕುಸಿತ ಆರಂಭವಾಗಬಹುದು ಎನ್ನುವ ಸುಳಿವನ್ನು ಅವರು ನೀಡಿದ್ದಾರೆ. ಇದು ತಮಗೆ ಒಳ್ಳೆಯ ಸುದ್ದಿ ಎಂದೂ ಅವರು ಹೇಳಿದ್ದಾರೆ.
‘ಬಬಲ್ಗಳು ಒಡೆಯಲಿವೆ. ಇವು ಒಡೆದಾಗ, ಚಿನ್ನ, ಬೆಳ್ಳಿ ಮತ್ತು ಬಿಟ್ಕಾಯಿನ್ ಕೂಡ ಒಡೆಯಬಹುದು’ ಎಂದು ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿರುವ ರಾಬರ್ಟ್ ಕಿಯೋಸಾಕಿ, ‘ಈ ಸರಕುಗಳ ಬೆಲೆ ಕುಸಿದಾಗ ತಾನು ಅವುಗಳ ಮೇಲೆ ಹೂಡಿಕೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಅಂದರೆ, ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಬೆಸ್ಟ್ ಸೆಲ್ಲಿಂಗ್ ಪುಸ್ತಕದ ಕರ್ತೃವಾದ ಕಿಯೋಸಾಕಿ, ತಾನು ಚಿನ್ನ, ಬೆಳ್ಳಿ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಲಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬ್ಲಿಂಕಿಟ್ ಯಶಸ್ಸಿಗೆ ಉದ್ಯೋಗಿಗಳ ‘ಅತೃಪ್ತಿ’ಯೇ ಕಾರಣವಾ? ಎಟರ್ನಲ್ ಸಿಇಒ ಬಿಚ್ಚಿಟ್ಟ ಸತ್ಯ ಇದು
ಹಣ ಉಳಿಸಿ ಕೂಡಿ ಹಾಕುವವರನ್ನು ರಾಬರ್ಟ್ ಕಿಯೋಸಾಕಿ ಲೂಸರ್ಸ್ ಎಂದು ಕರೆಯುತ್ತಾರೆ. ಹಣಕ್ಕೆ ಯಾವ ಮೌಲ್ಯವೂ ಇಲ್ಲ. ಹಾಗೆ ಹಣ ಕೂಡಿ ಹಾಕುವ ಬದಲು ಎಲ್ಲಿಯಾದರೂ ಹೂಡಿಕೆ ಮಾಡಿ ಎನ್ನುವುದು ಅವರ ಸಲಹೆ.
‘1987ರಲ್ಲಿ ಮಾರುಕಟ್ಟೆ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 1998ರಲ್ಲಿ ಎಲ್ಟಿಸಿಎಂ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 2019ರಲ್ಲಿ ರಿಪೋ ಮಾರ್ಕೆಟ್ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. ಕೋವಿಡ್ ಬಂದಾಗಲೂ ಮುದ್ರಿಸಿದರು’ ಎಂದು ಹೇಳುವ ಅವರು, ‘ನಕಲಿ ಡಾಲರ್ಗಳನ್ನು ಉಳಿಸುವುದನ್ನು ಬಿಟ್ಟು ನೈಜ ಚಿನ್ನ, ಬೆಳ್ಳಿ ಮತ್ತು ಬಿಟ್ಕಾಯಿನ್ಗಳನ್ನು ಉಳಿಸಲು ಆರಂಭಿಸಿ’ ಎಂದು ಮತ್ತೊಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಫ್ಯೂಚರ್ ಇರುವ ಬ್ಯುಸಿನೆಸ್; ಸೋಲಾರ್ ಏಜೆನ್ಸಿ ಮತ್ತು ಡೀಲರ್ಶಿಪ್, ಯಾವುದು ಬೆಸ್ಟ್? ಇಲ್ಲಿದೆ ಡೀಟೇಲ್ಸ್
ಅಮೆರಿಕವನ್ನು ವಿಶ್ವದ ಅತಿದೊಡ್ಡ ಸಾಲಗಾರ ದೇಶ ಎಂದು ಬಣ್ಣಿಸುವ ಇವರು, ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಸದ್ಯದಲ್ಲೇ ಬರುತ್ತಿದೆ ಎಂದು ಎಚ್ಚರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Tue, 22 July 25