ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

2026 January to March quarter, Post office schemes interest rates: ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು 2026ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕಕ್ಕೆ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿದರ ಪ್ರಕಟಿಸಿದೆ. ಅಂಚೆ ಕಚೇರಿಯಲ್ಲಿ ಸಿಗುವ ಈ ಸಣ್ಣ ಉಳಿತಾಯ ಯೋಜನೆಗಳಿಗೆ ಹಿಂದಿನ ಕ್ವಾರ್ಟರ್​ನಲ್ಲಿದ್ದ ದರಗಳನ್ನೇ ಮುಂದುವರಿಸಲಾಗಿದೆ. ಟೈಮ್ ಡೆಪಾಸಿಟ್, ರಿಕರಿಂಗ್ ಡೆಪಾಸಿಟ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ ಸ್ಕೀಮ್​ಗಳಿವೆ.

ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ
ಪೋಸ್ಟ್ ಆಫೀಸ್

Updated on: Jan 01, 2026 | 12:48 PM

ನವದೆಹಲಿ, ಜನವರಿ 1: ಸಾಮಾನ್ಯ ಜನರು ಅತಿಹೆಚ್ಚಾಗಿ ಬಳಸುವ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆಗಿರುವ 2026ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಗೆ ಪರಿಷ್ಕೃತ ಬಡ್ಡಿದರ ಪ್ರಕಟಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಪ್ರಕಟಣೆ ಪ್ರಕಾರ, ಈ ಕ್ವಾರ್ಟರ್​ನಲ್ಲಿ ಯಾವುದೇ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ದರಗಳೇ ಮುಂದುವರಿಯಲಿವೆ.

ಆರ್​ಬಿಐನ ರಿಪೋ ದರಗಳು ಇಳಿಕೆಯಾದ ಬಳಿಕ ಅನೇಕ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೆ ಬಡ್ಡಿದರ ತಗ್ಗಿಸಿವೆ. ಆದರೆ, ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ತಗ್ಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: LPG Price: ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

2026ರ ಜನವರಿಯಿಂದ ಮಾರ್ಚ್​ನ ಕ್ವಾರ್ಟರ್​ನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

  1. ಸುಕನ್ಯ ಸಮೃದ್ಧಿ ಸ್ಕೀಮ್: ಬಡ್ಡಿದರ ಶೇ. 8.2
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಬಡ್ಡಿದರ ಶೇ. 7.1
  3. ಕಿಸಾನ್ ವಿಕಾಸ್ ಪತ್ರ: ಬಡ್ಡಿದರ ಶೇ. 7.5
  4. ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ): ಶೇ. 7.7 ಬಡ್ಡಿ
  5. ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
  6. ಪೋಸ್ಟ್ ಆಫೀಸ್ ಆವರ್ತನ ಠೇವಣಿ (ಆರ್​ಡಿ): ಬಡ್ಡಿದರ ಶೇ. 6.7
  7. ಟೈಮ್ ಡೆಪಾಸಿಟ್: ಬಡ್ಡಿದರ ಶೇ. 6.9ರಿಂದ ಶೇ. 7.5
  8. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಬಡ್ಡಿದರ ಶೇ. 4
  9. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.2 ಬಡ್ಡಿ
  10. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.5 ಬಡ್ಡಿ

ಸರ್ಕಾರವು ಪ್ರತೀ ಕ್ವಾರ್ಟರ್​ಗೂ ಬಡ್ಡಿದರ ಪರಿಷ್ಕರಿಸುತ್ತದೆ. 2023-24ರ ಕೊನೆಯ ಕ್ವಾರ್ಟರ್​ನಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿತ್ತು. ಅದಾದ ಬಳಿಕ ಎರಡು ವರ್ಷದಿಂದ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಡ್ಡಿದರ ಪರಿಷ್ಕರಣೆಗೆಂದೇ ಒಂದು ಸಮಿತಿ

ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಎಷ್ಟು ನಿಗದಿ ಮಾಡಬೇಕೆಂದು ನಿರ್ಧರಿಸಲು ಸರ್ಕಾರ ಒಂದು ಸಮಿತಿಯನ್ನೇ ರಚಿಸಿದೆ. ಶ್ಯಾಮಲಾ ಗೋಪಿನಾಥ್ ನೇತೃತ್ವದ ಸಮಿತಿ ಸಲಹೆ ನೀಡಿರುವ ವಿಧಾನದ ಆಧಾರದ ಮೇಲೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ