ಯಾವುದೇ ಹಣಕಾಸು ಸ್ಕೀಮ್ನಲ್ಲೂ ನಾಮಿನಿ ಹೆಸರಿಸುವ ಆಯ್ಕೆ ಇರುತ್ತದೆ. ತಮ್ಮ ನಿಧನದ ನಂತರ ಯಾರಿಗೆ ಹಣ ಅಥವಾ ಲಾಭ ವರ್ಗಾವಣೆ ಆಗಬೇಕು ಎಂದು ನಿರ್ದಿಷ್ಟಪಡಿಸಲು ನಾಮಿನಿ ಬೇಕು. ಅಂತೆಯೇ ಬ್ಯಾಂಕ್ ಖಾತೆಗೂ ನಾಮಿನಿ (nominee) ಹೆಸರಿಸಲು ಕೇಳಲಾಗುತ್ತದೆ. ನಿಧನದ ಬಳಿಕ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ವಾರಸುದಾರರು ಇರಬೇಕೆಂದು ನಾಮಿನಿ ಕೇಳಲಾಗುತ್ತದೆ. ಮ್ಯುಚುವಲ್ ಫಂಡ್, ಎಫ್ಡಿ, ಇನ್ಷೂರೆನ್ಸ್ ಇತ್ಯಾದಿ ಯಾವುದೇ ಯೋಜನೆಗೂ ನಾಮಿನಿ ಎಂಬ ಆಯ್ಕೆ ಇರುತ್ತದೆ.
ವಿಮಾ ಯೋಜನೆಯಲ್ಲಿ ಒಂದು ವೇಳೆ ನೀವು ನಾಮಿನಿ ಹೆಸರಿಸದೇ ನಿಧನ ಹೊಂದಿದರೆ ನಿಮ್ಮ ಕುಟುಂಬದ ಬೇರೆ ಬೇರೆ ಸದಸ್ಯರು ಹಣಕ್ಕಾಗಿ ಕ್ಲೈಮ್ ಮಾಡಲು ಮುಂದಾಗಬಹುದು. ಇದನ್ನು ತಪ್ಪಿಸಲು ನೀವು ನಾಮಿನಿಯನ್ನು ನಿರ್ದಿಷ್ಟಪಡಿಸಿದರೆ ಅನುಕೂಲವಾಗುತ್ತದೆ.
ಹಾಗೆಯೇ, ಒಮ್ಮೆ ನಾಮಿನಿ ಹೆಸರಿಸಿದರೆ ಅದೇ ಖಾಯಂ ಆಗಬೇಕೆಂದಿಲ್ಲ. ನಾಮಿನಿ ನಿಧನ ಹೊಂದಿರಬಹುದು, ಅಥವಾ ನಿಮ್ಮನ್ನು ತೊರೆದು ಹೋಗಿರಬಹುದು, ಹೀಗೆ ಬೇರೆ ಬೇರೆ ಕಾರಣಕ್ಕೆ ನಾಮಿನಿಯನ್ನು ನೀವು ಬದಲಾಯಿಸಲು ಬಯಸಬಹುದು. ನೀವು ವಿಮಾ ಯೋಜನೆ ಅವಧಿಯ ಯಾವುದೇ ಸಮಯದಲ್ಲೂ ನಾಮಿನಿಯನ್ನು ಬದಲಿಸಬಹುದು. ನಿಮ್ಮಿಷ್ಟದ ಇನ್ನೊಬ್ಬರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು.
ನಾಮಿನಿ ಬದಲಾವಣೆ ಆಗಿದ್ದಕ್ಕೆ ಇನ್ಷೂರೆನ್ಸ್ ಕಂಪನಿ ನಿಮಗೆ ಅಕ್ನಾಲೆಜ್ಮೆಂಟ್ ಕೊಡಬೇಕು. ಅದು ಬಹಳ ಮುಖ್ಯ. ಆ ದಾಖಲೆಯನ್ನು ನೀವು ಇನ್ಷೂರೆನ್ಸ್ ದಾಖಲೆಯೊಂದಿಗೆ ಇಟ್ಟುಕೊಳ್ಳಬೇಕು. ನಿಮ್ಮ ನಾಮಿನಿಯು ಇನ್ಷೂರೆನ್ಸ್ ಕ್ಲೈಮ್ ಮಾಡುವಾಗ ಈ ದಾಖಲೆ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ