ಸರ್ಕಾರದ ವತಿಯಿಂದ ನಡೆಸಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಕಾಲ ಕಾಲಕ್ಕೆ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತೀ ಕ್ವಾರ್ಟರ್ಗೂ ಬಡ್ಡಿದರಗಳ ಪರಿಷ್ಕರಣೆ ಆಗುತ್ತದೆ. 2024ರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅಂಚೆ ಕಚೇರಿಯ ವಿವಿಧ ಸೇವಿಂಗ್ಸ್ ಸ್ಕೀಮ್ಗಳಿಗೆ ಇರಿಸಲಾಗಿದ್ದ ಬಡ್ಡಿದರಗಳನ್ನು ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ಗೂ ಮುಂದುವರಿಸಲಾಗಿದೆ.
2024-25ರ ಹಣಕಾಸು ವರ್ಷದಲ್ಲಿ ಏಪ್ರಿಲ್ 1ರಿಂದ ಆರಂಭವಾಗಿ ಜೂನ್ 30ರವರೆಗೆ ಇರುವ ಮೊದಲ ಕ್ವಾರ್ಟರ್ನಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ (small savings schemes) ಬಡ್ಡಿದರದಲ್ಲಿ ವ್ಯತ್ಯಯ ಆಗಿಲ್ಲ. 2023-24ರ ಕೊನೆಯ ಕ್ವಾರ್ಟರ್ನಲ್ಲಿ ಇರಿಸಲಾಗಿದ್ದ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮಾರ್ಚ್ 8ರಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್ನಲ್ಲಿ
ಇದನ್ನೂ ಓದಿ: ಎನ್ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ
ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯ ಸಮೃದ್ದಿ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಉಳಿತಾ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮೊದಲಾದ ಸ್ಕೀಮ್ಗಳು ಸಾಕಷ್ಟು ಜನಪ್ರಿಯವಾಗಿವೆ. ಪಿಪಿಎಫ್ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಲು ಬಹಳ ಸೂಕ್ತವಾದ ಹೂಡಿಕೆ ಆಗಿದೆ. ಬಡ್ಡಿದರ ಕಡಿಮೆ ಆದರೂ ತೆರಿಗೆ ಲಾಭದ ಕಾರಣಕ್ಕೆ ಅದಕ್ಕೆ ಜನಪ್ರಿಯತೆ ಇದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಇದರಲ್ಲಿ ಹೂಡಿಕೆ ಮಾಡಲು ಸಾಧ್ಯ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ