ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್​ಡಿಐ, ಎಫ್​ಪಿಐ ಮತ್ತು ಎಫ್​ಐಐ ಮಧ್ಯೆ ವ್ಯತ್ಯಾಸಗಳೇನು?

|

Updated on: Oct 07, 2024 | 6:12 PM

Difference between FDI, FPI and FII: ವಿದೇಶೀ ಹೂಡಿಕೆಗಳಲ್ಲಿ ಎಫ್​ಡಿಐ, ಎಫ್​ಐಐ ಮತ್ತು ಎಫ್​ಪಿಐ ಎಂಬ ಮೂರು ರೀತಿಯ ಹೂಡಿಕೆಗಳಿವೆ. ವಿದೇಶೀ ನೇರ ಹೂಡಿಕೆಗಳು ಒಂದು ದೇಶದ ಆರ್ಥಿಕತೆಯೊಂದಿಗೆ ನೇರವಾಗಿ ಭಾಗಿಯಾಗುತ್ತವೆ. ಸಾಂಸ್ಥಿಕ ಹೂಡಿಕೆ ಮತ್ತು ಪೋರ್ಟ್​ಫೋಲಿಯೋ ಹೂಡಿಕೆಗಳು ಷೇರು ಮಾರುಕಟ್ಟೆ ಮೂಲಕ ಪರೋಕ್ಷವಾಗಿ ಒಂದು ದೇಶದಲ್ಲಿ ಹೂಡಿಕೆ ಮಾಡುತ್ತವೆ.

ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್​ಡಿಐ, ಎಫ್​ಪಿಐ ಮತ್ತು ಎಫ್​ಐಐ ಮಧ್ಯೆ ವ್ಯತ್ಯಾಸಗಳೇನು?
ಹೂಡಿಕೆ
Follow us on

ವಿದೇಶೀ ಹೂಡಿಕೆಗಳ ಬಗ್ಗೆ ಆಗಾಗ್ಗೆ ನೀವು ಸುದ್ದಿ ಓದುತ್ತಿರಬಹುದು. ಭಾರತದ ವಿವಿಧ ಕಂಪನಿಗಳಲ್ಲಿ, ಈಕ್ವಿಟಿಗಳಲ್ಲಿ, ಮೂಲಸೌಕರ್ಯ ಯೋಜನೆಗಳಲ್ಲಿ ಫಾರೀನ್ ಇನ್ವೆಸ್ಟ್​ಮೆಂಟ್​ಗಳು ನಡೆಯುತ್ತಿರುತ್ತವೆ. ಎಫ್​ಡಿಐ ಹೂಡಿಕೆ, ಎಫ್​ಐಐ ಹೂಡಿಕೆ, ಎಫ್​ಪಿಐ ಹೂಡಿಕೆ ಇತ್ಯಾದಿ ಪದಗಳು ಈ ವಿದೇಶೀ ಹೂಡಿಕೆಗಳೊಂದಿಗೆ ಜೋಡಿತವಾಗಿವೆ. ಈ ಮೂರು ರೀತಿಯ ವಿದೇಶೀ ಹೂಡಿಕೆಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ.

ಎಫ್​ಡಿಐ ಎಂದರೇನು?

ಎಫ್​ಡಿಐ ಎಂದರೆ ಫಾರೀನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್. ಅಥವಾ ವಿದೇಶೀ ನೇರ ಹೂಡಿಕೆ. ವಿದೇಶದ ಸಂಸ್ಥೆಯೊಂದು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ವ್ಯವಹಾರ ಸ್ಥಾಪಿಸುವುದು ಎಫ್​ಡಿಐ ಅನಿಸುತ್ತದೆ. ಭಾರತದಲ್ಲಿರುವ ಒಂದು ಕಂಪನಿಯೊಂದಿಗೋ ಅಥವಾ ತನ್ನದೇ ಅಂಗ ಸಂಸ್ಥೆ ಮೂಲಕವೋ ಉದ್ದಿಮೆ ಆರಂಭಿಸಬಹುದು. ಮ್ಯಾನುಫ್ಯಾಕ್ಚರಿಂಗ್ ಆಗಿರಬಹುದು, ಇನ್ನೇನಾದರೂ ಸರ್ವಿಸ್ ಆಗಿರಬಹುದು, ಅದನ್ನು ನಡೆಸಬಹುದು. ಅಥವಾ ಭಾರತೀಯ ಕಂಪನಿಯೊಂದರ ಶೇ. 10ಕ್ಕಿಂತ ಹೆಚ್ಚಿನ ಪಾಲನ್ನು ಖರೀದಿಸಬಹುದು. ಇದರಿಂದ ಆ ಕಂಪನಿಯ ಚಟುವಕೆಗಳಲ್ಲಿ ಹೂಡಿಕೆದಾರರಿಗೆ ನಿಯಂತ್ರಣ ಸಿಗುತ್ತದೆ.

ಇದನ್ನೂ ಓದಿ: 75 ವರ್ಷದಲ್ಲಿ 2,730; 5 ವರ್ಷದಲ್ಲೇ 2,000; ಭಾರತದ ತಲಾದಾಯ ದ್ವಿಗುಣಗೊಳ್ಳಲಿದೆ ಎಂದ ನಿರ್ಮಲಾ ಸೀತಾರಾಮನ್

ಈ ಎಫ್​ಡಿಐ ಹೂಡಿಕೆಯಿಂದ ದೇಶದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ಉದ್ಯೋಗಗಳು ಸೃಷ್ಟಿಯಅಗುತ್ತವೆ. ತಂತ್ರಜ್ಞಾನವೂ ವರ್ಗಾವಣೆ ಆಗಬಹುದು. ವಿದೇಶೀ ಕಂಪನಿಗಳು ಒಂದು ದೇಶದ ಆರ್ಥಿಕತೆಯೊಳಗೆ ಕಾರ್ಯ ನಿರ್ವಹಿಸುತ್ತವೆ. ದೀರ್ಘಾವಧಿಯಲ್ಲಿ ಲಾಭ ಪಡೆಯುವ ದೃಷ್ಟಿ ಹೊಂದಿರುತ್ತವೆ.

ಎಫ್​ಪಿಐ ಎಂದರೇನು?

ಎಫ್​ಪಿಐ ಎಂದರೆ ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟ್​ಮೆಂಟ್. ಷೇರು, ಬಾಂಡು, ಹಾಗು ಇತರ ಹಣಕಾಸು ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ದೇಶದ ಆರ್ಥಿಕತೆಯೊಂದಿಗೆ ಇದು ನೇರ ಸಂವಹಣ ಹೊಂದಿರುವುದಿಲ್ಲ. ಮಾರುಕಟ್ಟೆಯಲ್ಲಿ ಹಣ ಹಾಕಿ ಲಾಭ ಮಾಡಿಕೊಳ್ಳುವುದಕ್ಕೆ ಈ ಹೂಡಿಕೆಗಳು ಸೀಮಿತವಾಗಿರುತ್ತವೆ.

ಎಫ್​ಐಐ ಎಂದರೇನು?

ಎಫ್​ಐಐ ಎಂದರೆ ಫಾರೀನ್ ಇನ್ಸ್​ಟಿಟ್ಯೂಶನಲ್ ಇನ್ವೆಸ್ಟ್​ಮೆಂಟ್. ಇದು ಒಂದು ರೀತಿಯಲ್ಲಿ ಎಫ್​ಪಿಯನಂತಹದ್ದು. ಎಫ್​ಪಿಐನಲ್ಲಿ ವಿದೇಶದ ಸಣ್ಣ ಹೂಡಿಕೆದಾರರೂ ಬಂಡವಾಳ ಹಾಕಬಹುದು. ಎಫ್​ಐಐನಲ್ಲಿ ದೊಡ್ಡ ಸಂಸ್ಥೆಗಳು ಷೇರು ಮಾರುಕಟ್ಟೆ, ಬಾಂಡ್ ಇತ್ಯಾದಿ ಮನಿ ಮಾರ್ಕೆಟ್ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಈ ವಿಚಾರದಲ್ಲಿ ಎಫ್​ಪಿಐಗೆ ಎಫ್​ಐಐ ಸಾಮ್ಯವಾಗಿದೆಯಾದರೂ ಷೇರು ಮಾರುಕಟ್ಟೆಗೆ ಇದು ಹೆಚ್ಚು ಲಿಕ್ವಿಡಿಟಿ ಮತ್ತು ಕ್ಷಮತೆ ತಂದುಕೊಡಬಲ್ಲುದು.

ಇದನ್ನೂ ಓದಿ: ಬೆಂಗಳೂರು ಸೇರಿ ಇನ್ನೂ 4 ಕಡೆ ಹೊಸ ಆ್ಯಪಲ್ ಸ್ಟೋರ್ಸ್; ಐಫೋನ್ 16 ಪ್ರೋ ಫೋನ್​ಗಳೂ ಭಾರತದಲ್ಲೇ ತಯಾರಿಕೆ

ವಿದೇಶದ ಮ್ಯೂಚುವಲ್ ಫಂಡ್​ಗಳು, ಹೆಡ್ಜ್ ಫಂಡ್​ಗಳು, ಪೆನ್ಷನ್ ಫಂಡ್​ಗಳು ಇತ್ಯಾದಿ ಸಂಸ್ಥೆಗಳು ಎಫ್​ಐಐಗೆ ಉದಾಹರಣೆ. ಇವು ಭಾರತದ ಈಕ್ವಿಟಿ ಮಾರುಕಟ್ಟೆ ಅಥವಾ ಬಾಂಡ್ ಮಾರುಕಟ್ಟೆಗಳಲ್ಲಿ ಖರೀದಿ ಮಾಡಬಹುದು.

ಒಟ್ಟಾರೆ, ಎಫ್​ಡಿಐ ಎಂಬುದು ವಿದೇಶೀ ಕಂಪನಿಗಳು ಭಾರತದಲ್ಲಿ ಮಾಡುವ ನೇರ ಹೂಡಿಕೆಯಾದರೆ, ಎಫ್​ಪಿಐ ಮತ್ತು ಎಫ್​ಐಐಗಳು ಪರೋಕ್ಷವಾಗಿ ಹೂಡಿಕೆ ಮಾಡುತ್ತವೆ. ಈ ಮೂರೂ ಕೂಡ ವಿವಿಧ ಅವಧಿಗಳಲ್ಲಿ ಲಾಭ ಮಾಡುವ ಉದ್ದೇಶದಿಂದಲೇ ಹೂಡಿಕೆ ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ