ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್​ಐಸಿಯ ಜೀವನ್ ಉತ್ಸವ್ ಪಾಲಿಸಿ

LIC Jeevan Utsav policy: ಎಲ್​ಐಸಿಯ ಜೀವನ್ ಉತ್ಸವ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಜೀವನಕ್ಕೆ ಭದ್ರತೆ ಜೊತೆಗೆ ಆದಾಯ ಭದ್ರತೆಯನ್ನೂ ಕೊಡುತ್ತದೆ. ಐದು ವರ್ಷದಷ್ಟು ಕನಿಷ್ಠ ಅವಧಿಯ ಪ್ರೀಮಿಯಮ್ ಅವಕಾಶ ಇದೆ. ಕನಿಷ್ಠ ಖಾತ್ರಿ ಮೊತ್ತ 5,00,000 ರೂ ಇದೆ. ಕನಿಷ್ಠ ವಾರ್ಷಿಕ ಪೇಔಟ್ 50,000 ರೂ ಇದೆ. ಹೆಚ್ಚಿನ ಪೇಔಟ್ ಬೇಕೆಂದರೆ ಹೆಚ್ಚಿನ ಖಾತ್ರಿ ಮೊತ್ತದ ಪ್ಲಾನ್ ಆಯ್ದುಕೊಳ್ಳಬಹುದು.

ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್​ಐಸಿಯ ಜೀವನ್ ಉತ್ಸವ್ ಪಾಲಿಸಿ
ಎಲ್​ಐಸಿ

Updated on: Sep 18, 2025 | 12:10 PM

ಭಾರತದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯಾದ ಎಲ್​ಐಸಿ (LIC) ನಾನಾ ಅಗತ್ಯಗಳಿಗೆ ತಕ್ಕಂತಹ ಪಾಲಿಸಿಗಳನ್ನು ಹೊಂದಿದೆ. ನಿಯಮಿತವಾದ ಆದಾಯ ಗಳಿಸಲು ಹಲವು ಪಾಲಿಸಿಗಳಿದ್ದು, ಅದರಲ್ಲಿ ಪ್ರಮುಖವಾಗಿರುವುದು ಜೀವನ್ ಉತ್ಸವ್ ಪಾಲಿಸಿ. ಸಾಮಾನ್ಯವಾಗಿ ಲೈಫ್ ಇನ್ಷೂರೆನ್ಸ್ (Insurance) ಎಂದರೆ ಹಲವಾರು ವರ್ಷ ಕಾಲ ಪ್ರೀಮಿಯಮ್ ಕಟ್ಟುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಆದರೆ, ಎಲ್​ಐಸಿ ಜೀವನ್ ಉತ್ಸವ್ ಬಹಳ ಕಡಿಮೆ ಅವಧಿಗೆ ಪ್ರೀಮಿಯಮ್ ಕಟ್ಟಿಸಿ, ಜೀವನ ಪೂರ್ತಿ ಸುರಕ್ಷತೆ ಹಾಗೂ ಆದಾಯ ಕೊಡುತ್ತದೆ.

ಏನಿದು ಎಲ್​ಐಸಿ ಜೀವನ್ ಉತ್ಸವ್ ಪಾಲಿಸಿ?

ಎಲ್​ಐಸಿ ಜೀವನ್ ಉತ್ಸವ್ ಒಂದು ನಾನ್-ಲಿಂಕ್ಡ್ ಮತ್ತು ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಷೂರೆನ್ಸ್ ಪಾಲಿಸಿ. ನಾನ್-ಲಿಂಕ್ಡ್ ಎಂದರೆ, ಇದು ಕೊಡುವ ರಿಟರ್ನ್ ಬೇರೆ ಮಾರುಕಟ್ಟೆಗಳ ರಿಟರ್ನ್ ಮೇಲೆ ಅವಲಂಬಿತವಾಗಿರುವುದಿಲ್ಲ. ಪಾಲಿಸಿ ಪೂರ್ವದಲ್ಲೇ ಸ್ಪಷ್ಟಪಡಿಸಿರುವ ನಿಶ್ಚಿತ ಮೊತ್ತವನ್ನು ಇದು ರಿಟರ್ನ್ ಆಗಿ ನೀಡುತ್ತದೆ.

5ರಿಂದ 16 ವರ್ಷ ಪ್ರೀಮಿಯಮ್

ಜೀವನ್ ಉತ್ಸವ್ ಇನ್ಷೂರೆನ್ಸ್ ಪ್ಲಾನ್​ಗಳು 90 ದಿನಗಳ ಮಗುವಿನಿಂದ ಹಿಡಿದು 65 ವರ್ಷದ ಹಿರಿಯರವರೆಗೂ ಯಾರಿಗೆ ಬೇಕಾದರೂ ಲಭ್ಯ ಇರುತ್ತವೆ. ಕನಿಷ್ಠ ಖಾತ್ರಿ ಮೊತ್ತ (Basic sum assured) 5 ಲಕ್ಷ ರೂ ಇರುತ್ತದೆ.

ಇದನ್ನೂ ಓದಿ
ಇನ್ಷೂರೆನ್ಸ್ ಪಾಲಿಸಿದಾರ, ನಾಮಿನಿ ಇಬ್ಬರೂ ಸತ್ತರೆ ಹಣ ಯಾರಿಗೆ?
ಸೆ. 22ಕ್ಕೆ ಮುಂಚೆ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಗಡುವಿದ್ದರೆ ಏನು ಮಾಡಬೇಕು?
ಲ್ಯಾಪ್ಸ್ ಆದ ಎಲ್​ಐಸಿ ಪಾಲಿಸಿ ಪುನಶ್ಚೇತನಕ್ಕೆ ಅ. 17ರವರೆಗೂ ಅಭಿಯಾನ
ಇನ್ಷೂರೆನ್ಸ್ ಪ್ರೀಮಿಯಮ್ ಹೊರೆ ತಗ್ಗಿಸುವ ಸೂಪರ್ ಐಡಿಯಾ

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

ಜೀವನ್ ಉತ್ಸವ್​ನ ಪ್ರೀಮಿಯಮ್ ಪಾವತಿ ವಾರ್ಷಿಕವಾಗಿದ್ದು, ಕನಿಷ್ಠ ಅವಧಿ 5 ವರ್ಷ ಇದೆ. ಗರಿಷ್ಠ ಅವಧಿ 15 ವರ್ಷ ಇರುತ್ತದೆ. ಅಂದರೆ, ನೀವು ಐದು ವರ್ಷದವರೆಗೆ ವರ್ಷಕ್ಕೊಮ್ಮೆ ಪ್ರೀಮಿಯಮ್ ಕಟ್ಟಬಹುದು. ಅಥವಾ 16 ವರ್ಷದವರೆಗೆ ಬೇಕಾದರೂ ಕಟ್​ಟಬಹುದು.

ಜೀವನ್ ಉತ್ಸವ್ ಎಷ್ಟು ರಿಟರ್ನ್ ನೀಡುತ್ತದೆ?

ಈ ಪಾಲಿಸಿಯಲ್ಲಿ ಕನಿಷ್ಠ ಖಾತ್ರಿ ಮೊತ್ತ 5,00,000 ರೂ ಇರುತ್ತದೆ. ನೀವು ಇನ್ನೂ ಹೆಚ್ಚಿನ ಖಾತ್ರಿ ಮೊತ್ತವನ್ನು ಬೇಕಾದರೆ ಆಯ್ದುಕೊಳ್ಳಬಹುದು. ಐದು ಲಕ್ಷ ರೂನ ಕನಿಷ್ಠ ಖಾತ್ರಿ ಮೊತ್ತದ ಪಾಲಿಸಿಯನ್ನು ಆಯ್ದುಕೊಂಡಲ್ಲಿ, ಐದು ವರ್ಷದ ಪ್ರೀಮಿಯಮ್ ಆಪ್ಷನ್ ಪಡೆದರೆ ಆಗ ವರ್ಷಕ್ಕೆ ನೀವು 1.16 ಲಕ್ಷ ರೂ ಪಾವತಿಸಬೇಕು. ಐದು ವರ್ಷದಲ್ಲಿ ನೀವು ಸುಮಾರು 5.80 ಲಕ್ಷ ರೂ ಪಾವತಿಸಿರುತ್ತೀರಿ.

ಇದಾದ ಬಳಿಕ ಐದು ವರ್ಷ ವೇಯ್ಟಿಂಗ್ ಪೀರಿಯಡ್ ಇರುತ್ತದೆ. ನೀವು ಪ್ರೀಮಿಯಮ್ ಕಟ್ಟುವ ಅಗತ್ಯ ಇರುವುದಿಲ್ಲ. ಐದು ವರ್ಷ ವೇಯ್ಟಿಂಗ್ ಪೀರಿಯಡ್ ಬಳಿಕ ನಿಮಗೆ ವರ್ಷಕ್ಕೆ 50,000 ರೂ ಪೇಔಟ್ ಸಿಗುತ್ತಾ ಹೋಗುತ್ತದೆ. ಜೀವನಪೂರ್ತಿ ನಿಮಗೆ ಪ್ರತೀ ವರ್ಷ 50,000 ರೂ ಆದಾಯ ಸಿಗುತ್ತಿರುತ್ತದೆ. ಅಕಸ್ಮಾತ್ ಸಾವಾದರೆ, ನಾಮಿನಿಗಳಿಗೆ ಐದು ಲಕ್ಷ ರೂ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು

ಹೆಚ್ಚಿನ ಪೇಔಟ್ ಬೇಕೆಂದರೆ?

ಹೆಚ್ಚಿನ ಪೇಔಟ್ ಬೇಕೆಂದರೆ ಹೆಚ್ಚಿನ ಪ್ರೀಮಿಯಮ್ ಪಾವತಿಸಬೇಕು. ಉದಾಹರಣೆಗೆ ನಿಮಗೆ ವರ್ಷಕ್ಕೆ 5 ಲಕ್ಷ ರೂ ಆದಾಯ ನಿರ್ಮಾಣ ಆಗಬೇಕೆಂದು ಬಯಸಿದಲ್ಲಿ 50 ಲಕ್ಷ ರೂ ಬೇಸಿಕ್ ಸಮ್ ಅಶೂರ್ಡ್​ನ ಪ್ಲಾನ್ ಆಯ್ದುಕೊಳ್ಳಬಹುದು. ಆಗ ವರ್ಷಕ್ಕೆ ಸುಮಾರು 11 ಲಕ್ಷ ರೂ ಪ್ರೀಮಿಯಮ್​ನಂತೆ 5 ವರ್ಷ ಕಟ್ಟಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Thu, 18 September 25