
ನವದೆಹಲಿ, ನವೆಂಬರ್ 21: ಷೇರು ಮಾರುಕಟ್ಟೆಯ (stock market) ಇತಿಹಾಸದಲ್ಲೇ ಅತಿ ಹೀನಾಯ ಹಿನ್ನಡೆಯ ಪರ್ವ ಆರಂಭಗೊಂಡಿದೆ ಎಂದು ಕೆಲ ಜಾಗತಿಕ ಮಾರುಕಟ್ಟೆ ತಜ್ಞರು ಕೆಲ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿಯಂತೂ ಬಾರಿ ಬಾರಿ ಇದನ್ನು ಹೇಳುತ್ತಲೇ ಇದ್ದಾರೆ. ಇದೀಗ ಅಮೆರಿಕದ ಷೇರುಪೇಟೆಯ ವ್ಯಾಲ್ಯುಯೇಶನ್ ಎಕ್ಸ್ಪರ್ಟ್ ಎನಿಸಿರುವ ಪ್ರೊ| ಅಶ್ವಥ್ ದಾಮೋದರನ್ (Prof. Ashwath Damodaran) ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಸ್ಕಾಟ್ ಗ್ಯಾಲೋವೇ ಎನ್ನುವ ಯೂಟ್ಯೂಬ್ ವಾಹಿನಿಯ ಪೋಡ್ಕ್ಯಾಸ್ಟ್ವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ನ್ಯೂಯಾರ್ಕ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಅಶ್ವಥ್ ದಾಮೋದರನ್, ತಾನು ತಮ್ಮ ಹೂಡಿಕೆ ಜೀವನದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯ ಭೀಕರ ಕುಸಿತದ ಸಾಧ್ಯತೆಯನ್ನು ಎದಿರುನೋಡುತ್ತಿರುವುದಾಗಿ ಹೇಳಿದ್ದಾರೆ.
ಅಶ್ವಥ್ ದಾಮೋದರನ್ ಅವರು ಮಾರುಕಟ್ಟೆ ಕುಸಿತಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ಪಾಸಿವ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಿರುವುದು ಮತ್ತು ಇಂಡೆಕ್ಸ್ ಫಂಡ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಮಾರುಕಟ್ಟೆ ರಕ್ಷಣೆಯ ಕೋಟೆ ಒಡೆಯಲು ಒಂದು ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ
ಮಾರುಕಟ್ಟೆಗಳು ಕುಸಿಯುವುದರ ಜೊತೆಗೆ, ಮಾರುಕಟ್ಟೆ ಪ್ರಭಾವ ಇರುವಂಥವೂ ಕೂಡ ಉರುಳಲಿವೆ. ಮಾರುಕಟ್ಟೆಯ ಪ್ರಭಾವ ಇಲ್ಲದವನ್ನು ಹುಡುಕುವುದೇ ಕಷ್ಟಕರ ಎನಿಸಿದೆ ಎಂದು ಅಮೆರಿಕದ ಈ ಮಾರುಕಟ್ಟೆ ಪರಿಣಿತ ಅಭಿಪ್ರಾಯಪಟ್ಟಿದ್ದಾರೆ.
ಅಶ್ವಥ್ ದಾಮೋದರನ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹೂಡಿಕೆಯನ್ನು ಈಕ್ವಿಟಿಯಿಂದ ಹೊರಗೆ ಮಾಡುತ್ತಿದ್ದಾರಂತೆ. ಕ್ಯಾಷ್ಗಳನ್ನು ಇರಿಸಿಕೊಳ್ಳುತ್ತಿದ್ದಾರೆ. ಚಿನ್ನ, ಬೆಳ್ಳಿ ಇತ್ಯಾದಿ ಭೌತಿಕ ಆಸ್ತಿಗಳನ್ನು ಖರೀದಿಸುತ್ತಿದ್ದಾರೆ.
ಅಶ್ವಥ್ ದಾಮೋದರನ್ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿ ಮೂಲಭೂತ ಅಂಶಗಳು ಸರಿಯಾಗಿಯೇ ಇವೆ. ಆದರೂ ಅವರಿಗೆ ಭಯ ಕಾಡುತ್ತಿದೆ.
‘ಷೇರುಗಳು ಶೇ. 15ರಿಂದ 20ರಷ್ಟು ಏರಿದರೂ, ಮತ್ತು ಬಡ್ಡಿದರಗಳು ಸ್ಥಿರವಾಗಿದ್ದರೂ ಚಿನ್ನದ ಬೆಲೆ ಒಂದು ವರ್ಷದಲ್ಲಿ ಇಷ್ಟು ಅಗಾಧವಾಗಿ ಹೆಚ್ಚಿರುವುದು ಯಾಕೆ? ಈ ಸಂಖ್ಯೆಯನ್ನು ತಾನು ನಂಬುವುದಿಲ್ಲ. ಏನೋ ಕೆಟ್ಟದ್ದು ಬರುತ್ತಿದೆ’ ಎಂದು ಪೋಡ್ಕ್ಯಾಸ್ಟ್ನಲ್ಲಿ ಅಶ್ವಥ್ ದಾಮೋದರನ್ ವಿವರಿಸಿದ್ದಾರೆ.
ಇದನ್ನೂ ಓದಿ: ರಾಶಿ ರಾಶಿ ಮ್ಯುಚುವಲ್ ಫಂಡ್ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?
ಅಶ್ವಥ್ ದಾಮೋದರನ್ ಪ್ರಕಾರ, ಷೇರು ಮಾರುಕಟ್ಟೆ ಎರಡು ರೀತಿಯಲ್ಲಿ ಕುಸಿಯಬಹುದು. ಒಂದು, ಅದು ಅಲ್ಪಾವಧಿಯಲ್ಲೇ ಶೇ. 30ರಿಂದ 35ರಷ್ಟು ತೀಕ್ಷ್ಣವಾಗಿ ಕುಸಿಯಬಹುದು. ಇನ್ನೊಂದು, ಹಲವು ವರ್ಷಗಳವರೆಗೆ ನಿಧಾನವಾಗಿ ಕುಸಿಯುತ್ತಾ ಹೋಗಬಹುದು. ಇವೆರಡೂ ಕೂಡ ಘಾಸಿ ಮಾಡುವಂಥವು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ