Education Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ

|

Updated on: May 16, 2023 | 5:23 PM

Information Required Before Taking Education Loan: ಉನ್ನತ ಶಿಕ್ಷಣಕ್ಕೆ ಈಗ ಸುಲಭವಾಗಿ ಎಜುಕೇಶನ್ ಲೋನ್ ಸಿಗುತ್ತದೆ. ಇದಕ್ಕೆ ಬಡ್ಡಿ ಎಷ್ಟು, ಇಎಂಐ ಯಾವಾಗ ಕಟ್ಟಬೇಕು, ಎಷ್ಟು ಮೊತ್ತದ ಸಾಲ ಸಿಗುತ್ತದೆ, ಯಾರ ಹೆಸರಲ್ಲಿ ಸಾಲ ಸಿಗುತ್ತದೆ ಇವೆಲ್ಲಾ ಸ್ವಲ್ಪ ಮಾಹಿತಿ ಇಲ್ಲಿದೆ....

Education Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ
ಕಾಲೇಜು ವಿದ್ಯಾರ್ಥಿಗಳು
Follow us on

ದುಬಾರಿಯಾಗಿರುವ ಈ ಕಾಲಘಟ್ಟದಲ್ಲಿ ಶಿಕ್ಷಣವೆಚ್ಚವೂ (Education Expense) ಬಹಳ ಹೆಚ್ಚು. ಅದರಲ್ಲೂ ವೃತ್ತಿಪರ ಉನ್ನತ ಶಿಕ್ಷಣ ಪಡೆಯಲು ಬಹಳ ಹಣ ವ್ಯಯವಾಗುತ್ತದೆ. ವಿದೇಶಗಳಲ್ಲಿ ಕಲಿಯಬೇಕಾದರಂತೂ ಲಕ್ಷ ಲಕ್ಷ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ. ಅಮೆರಿಕ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ಗಳಿಗೆ ಭಾರತೀಯರು ಉನ್ನತ ವ್ಯಾಸಂಗಕ್ಕೆ (Higher Education) ಹೆಚ್ಚಾಗಿ ಹೋಗುವುದುಂಟು. ಅಲ್ಲಿಯ ಸಾಧಾರಣ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕವೇ ಕೆಲ ಕೋಟಿಗಳಾಗಬಹುದು. ಅದರ ಜೊತೆಗೆ ಕಲಿಕಾ ಅವಧಿಯಲ್ಲಿ ಜೀವನ ವೆಚ್ಚ ಬೇರೆ. ಶ್ರೀಮಂತರೇನೋ ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಲು ಸಾಧ್ಯವಾಗವಾಗಬಹುದೇನೋ. ಆದರೆ, ಮಧ್ಯಮವರ್ಗದವರ ಕಥೆ? ವಿದೇಶಗಳಿರಲಿ, ಭಾರತದಲ್ಲೇ ಶಿಕ್ಷಣ ಪಡೆಯುವುದೆಂದರೆ ಹಣದ ಹೊಳೆಯೇ ಹರಿಸಬೇಕಾಗುತ್ತದೆ. ಇಲ್ಲಿ ಶಿಕ್ಷಣ ಸಾಲ ವ್ಯವಸ್ಥೆ ಬಹಳ ಮಂದಿಗೆ ಸಹಾಯಕ್ಕೆ ಬರುತ್ತದೆ. ಉನ್ನತ ಶಿಕ್ಷಣಕ್ಕೆ ಈಗ ಸುಲಭವಾಗಿ ಎಜುಕೇಶನ್ ಲೋನ್ ಸಿಗುತ್ತದೆ. ಇದಕ್ಕೆ ಬಡ್ಡಿ ಎಷ್ಟು, ಇಎಂಐ ಯಾವಾಗ ಕಟ್ಟಬೇಕು, ಎಷ್ಟು ಮೊತ್ತದ ಸಾಲ ಸಿಗುತ್ತದೆ, ಯಾರ ಹೆಸರಲ್ಲಿ ಸಾಲ ಸಿಗುತ್ತದೆ ಇವೆಲ್ಲಾ ಸ್ವಲ್ಪ ಮಾಹಿತಿ ಇಲ್ಲಿದೆ….

ಎಜುಕೇಶನ್ ಲೋನ್: ಎಷ್ಟು ಸಾಲ ಸಿಗುತ್ತದೆ?

ವಿದ್ಯಾರ್ಥಿ ಓದಿಗೆ ಆಗುವ ಖರ್ಚು ನಿಭಾಯಿಸಲು ಸಾಲ ನೀಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಓದುವ ಕೋರ್ಸ್​ನ ಶುಲ್ಕ ಮೊತ್ತ, ಕೋರ್ಸ್ ಮುಗಿಯುವ ಅಷ್ಟೂ ಕಾಲ ಊಟ, ಬಾಡಿಗೆ ಇತ್ಯಾದಿ ವೆಚ್ಚ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಲದ ಮೊತ್ತ ನಿರ್ಧರಿಸಬಹುದು. ಸಾಮಾನ್ಯವಾಗಿ ಸಾಲದಲ್ಲಿ 7.5 ಲಕ್ಷ ರೂವರೆಗೆ ಯಾವುದೇ ಅಡಮಾನದ ಅವಶ್ಯಕತೆ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಏನಾದರೂ ಗಿರವಿ ಇಡಬೇಕಾಗಬಹುದು. ಮನೆಯ ಪತ್ರವೋ, ಎಲ್​ಐಸಿ ಇನ್ಷೂರೆನ್ಸ್ ಪಾಲಿಸಿಯೋ, ಒಡವೆಯೋ ಏನಾದರೂ ಸರಿಯೇ.

ವಿದ್ಯಾರ್ಥಿಗೆ ಬ್ಯಾಂಕ್ ಅಕೌಂಟ್ ಇರಬೇಕು

ಸಾಲ ಕೊಡುವುದು ವಿದ್ಯಾರ್ಥಿಯ ಓದಿಗಾಗಿಯಾದ್ದರಿಂದ ಅವರ ಹೆಸರಿಗೆ ಸಾಲ ಕೊಡಲಾಗುತ್ತದೆ. ವಿದ್ಯಾರ್ಥಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಬೇಕು. ಸಾಲಕ್ಕೆ ವಿದ್ಯಾರ್ಥಿಯೇ ಪ್ರಧಾನ ಅರ್ಜಿದಾರ. ಪೋಷಕರಲ್ಲಿ ಯಾರಾದರೂ ಒಬ್ಬರು ಎರಡನೇ ಅರ್ಜಿದಾರ ಆಗಬಹುದು. ಕೊನೆಯಲ್ಲಿ ಸಾಲ ತೀರಿಸಬೇಕಾದ್ದು ವಿದ್ಯಾರ್ಥಿಯೇ.

ಇದನ್ನೂ ಓದಿWarren Buffett: ಹಣ ಬೇಕು ಎಂದಾಗ ಏನು ಮಾಡಬೇಕು? ಶ್ರೀಮಂತ ವಾರನ್ ಬಫೆಟ್ ಅಷ್ಟ ಸೂತ್ರಗಳಿವು…

ಎಜುಕೇಶನ್ ಲೋನ್: ಏನೇನು ದಾಖಲೆಗಳು ಬೇಕು?

ಶಿಕ್ಷಣ ಸಂಸ್ಥೆಯಿಂದ ಸಿಕ್ಕಿರುವ ಅಡ್ಮಿಶನ್ ಲೆಟರ್, ಕೋರ್ಸ್ ಶುಲ್ಕ ಎಷ್ಟೆಂಬುದಕ್ಕೆ ದಾಖಲೆ, ಹಿಂದಿನ ವಿದ್ಯಾಭ್ಯಾಸದ ದಾಖಲೆಗಳು ಬೇಕಾಗುತ್ತದೆ. ಅಂದರೆ ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಪದವಿ ತರಗತಿಗಳ ಮಾರ್ಕ್ಸ್​ಕಾರ್ಡ್ ನೀಡಬೇಕಾಗುತ್ತದೆ. ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಸ್ಟೇಟ್ಮೆಂಟ್, ಐಟಿ ರಿಟರ್ನ್ಸ್, ಸ್ಯಾಲರಿ ಸ್ಲಿಪ್ ಹಾಗೂ ಇತರ ಕೆವೈಸಿ ದಾಖಲೆಗಳನ್ನು ನೀಡಬೇಕಾಗಬಹುದು.

ಎಜುಕೇಶನ್ ಲೋನ್: ಓದುತ್ತಿರುವಾಗಲೇ ಸಾಲದ ಕಂತು ಕಟ್ಟಬೇಕಿಲ್ಲ

ಶಿಕ್ಷಣ ಸಾಲವನ್ನು ವಿದ್ಯಾರ್ಥಿಯೇ ತೀರಿಸಬೇಕು. ಆದರೆ ಓದುವ ಅವಧಿಯಲ್ಲಿ ಸಾಲಕ್ಕೆ ಇಎಂಐ ಕಟ್ಟಬೇಕಿಲ್ಲ. ವಿದ್ಯಾರ್ಥಿ ಸಾಲದ ಚಿಂತೆ ಇಲ್ಲದೇ ತನ್ನ ಓದಿನತ್ತ ಗಮನ ಕೊಡಬಹುದು. ಓದು ಮುಗಿದ ಬಳಿಕ ಒಂದು ವರ್ಷದವರೆಗೂ ಸಾಲ ಮರುಪಾವತಿಯಿಂದ ವಿನಾಯಿತಿ ಇರುತ್ತದೆ. ಓದು ಮುಗಿದು ಒಂದು ವರ್ಷದ ಬಳಿಕ ವಿದ್ಯಾರ್ಥಿ ತನ್ನ ಸಾಲದ ಕಂತುಗಳನ್ನು ಕಟ್ಟಬೇಕು. ಕೋರ್ಸ್ ಮುಗಿದು ಕೆಲಸಕ್ಕೆ ಸೇರಿ 6 ತಿಂಗಳ ಬಳಿಕ ಇಎಂಐ ಕಟ್ಟಲು ಆರಂಭಿಸಬೇಕು. ಅಲ್ಲಿಯವರೆಗೆ ಬಡ್ಡಿ ಹಣ ಸಾಲಕ್ಕೆ ಸೇರ್ಪಡೆಯಾಗುತ್ತಿರುತ್ತದೆ.

ಇದನ್ನೂ ಓದಿVidya Lakshmi Scheme: ‘ವಿದ್ಯಾಲಕ್ಷ್ಮೀ’ ಯೋಜನೆ; ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ; ಇದಕ್ಕೆ ಬಡ್ಡಿ, ಅರ್ಹತೆ ಇತ್ಯಾದಿ ಬಗ್ಗೆ ಮಾಹಿತಿ

ಎಜುಕೇಶನ್ ಲೋನ್: ಮಾರ್ಜಿನ್ ಪರ್ಸಂಟೇಜ್ ಎಷ್ಟೆಂದು ತಿಳಿದಿರಿ

ಇಲ್ಲಿ ವಿದ್ಯಾರ್ಥಿಯ ಕೋರ್ಸ್ ಫೀಸ್​ನಿಂದ ಹಿಡಿದು ಜೀವನ ವೆಚ್ಚ ಎಲ್ಲಾ ಸೇರಿ ಇಂತಿಷ್ಟು ಮೊತ್ತಕ್ಕೆ ನೀವು ಸಾಲಕ್ಕೆ ಅರ್ಜಿ ಹಾಕಿದಾಕ್ಷಣ ಅಷ್ಟೂ ಮೊತ್ತದ ಹಣ ಸ್ಯಾಂಕ್ಷನ್ ಆಗುವುದಿಲ್ಲ. ಈ ಮೊತ್ತದಲ್ಲಿ ವಿದ್ಯಾರ್ಥಿ ತನ್ನ ಸ್ವಂತ ದುಡ್ಡನ್ನು ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ. ಅದುವೇ ಮಾರ್ಜಿನ್ ಮನಿ ಎನ್ನುವುದು. ಒಂದೊಂದು ಬ್ಯಾಂಕಲ್ಲಿ ಒಂದೊಂದು ರೀತಿಯ ಮಾರ್ಜಿನ್ ಪರ್ಸಂಟೇಜ್ ಇರುತ್ತದೆ. ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ಬ್ಯಾಂಕಿನಿಂದ ಈ ಮಾರ್ಜಿನ್ ಪರ್ಸೆಂಟೇಜ್ ಎಷ್ಟೆಂದು ತಿಳಿದುಕೊಂಡರೆ ಒಂದಷ್ಟು ಬ್ಯಾಕಪ್ ಹಣವನ್ನು ಹೊಂದಿಸಿಟ್ಟುಕೊಳ್ಳಬಹುದು.

ಎಜುಕೇಶನ್ ಲೋನ್: ಎಲ್ಲೆಲ್ಲಿ ಸಿಗುತ್ತೆ ಸಾಲ?

ಶಿಕ್ಷಣ ಸಾಲ ವಿವಿಧ ಬ್ಯಾಂಕುಗಳಲ್ಲಿ ಸಿಗುತ್ತದೆ. ಈ ಸಾಲಕ್ಕೆ ಬಡ್ಡಿಯೂ ಬ್ಯಾಂಕಿಂದ ಬ್ಯಾಂಕಿಗೆ ವ್ಯತ್ಯಾಸವಾಗಬಹುದು. ಈಗಿನ ಸಂದರ್ಭದಲ್ಲಿ ಎಜುಕೇಶನ್ ಲೋನ್​ನ ಇಂಟರೆಸ್ಟ್ ರೇಟ್ ಶೇ. 8.5ರಿಂದ ಪ್ರಾರಂಭವಾಗಬಹುದು. ನೀವು ಅಡಮಾನ ಇಟ್ಟು ಸಾಲ ಪಡೆದರೆ ಕನಿಷ್ಠ ಬಡ್ಡಿ ದರ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ