ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

Senior Citizen Saving Scheme details: ಸರ್ಕಾರಿ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಉಳಿತಾ ಯೋಜನೆಯೂ ಒಂದು. ಇದರಲ್ಲಿ ಮಾಡುವ ಹೂಡಿಕೆಗೆ ವಾರ್ಷಿಕ ಶೇ. 8.2 ಬಡ್ಡಿ ಸಿಗುತ್ತದೆ. ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸುವ ಅವಕಾಶ ನೀಡುತ್ತದೆ. ಲಂಪ್ಸಮ್ ಆಗಿ ಹೂಡಿಕೆ ಮಾಡಬಹುದು. 5 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.

ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್
ಹಿರಿಯ ನಾಗರಿಕರು
Image Credit source: Shutterstock

Updated on: Apr 21, 2026 | 10:14 PM

ಪೋಸ್ಟ್ ಆಫೀಸ್​ನ ಸಣ್ಣ ಉಳಿತಾಯ ಯೋಜನೆಗಳಲ್ಲೇ (Small Savings Scheme) ಗರಿಷ್ಠ ಬಡ್ಡಿ ತರುವ ಯೋಜನೆಗಳ ಪೈಕಿ ಎಸ್​ಸಿಎಸ್​ಎಸ್ ಒಂದು. ಇದು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme). ಸುಕನ್ಯಾ ಸಮೃದ್ಧಿ ಯೋಜನೆ ರೀತಿ ಎಸ್​ಸಿಎಸ್​ಎಸ್ ಶೇ. 8.2 ವಾರ್ಷಿಕ ಬಡ್ಡಿ ಆಫರ್ ಮಾಡುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ 20,500 ರೂವರೆಗೂ ಮಾಸಿಕ ಆದಾಯ ಸೃಷ್ಟಿಸುವ ಅವಕಾಶ ಇರುತ್ತದೆ. ಇದು ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ಸ್ಕೀಮ್.

ಎಸ್​ಸಿಎಸ್​ಎಸ್ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?

  • 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರು ಈ ಯೋಜನೆ ಹೊಂದಬಹುದು.
  • ವಿಆರ್​ಎಸ್ ಪಡೆದು ಬೇಗ ನಿವೃತ್ತರಾಗಿರುವ 55-60 ವರ್ಷ ವಯಸ್ಸಿನ ನಾಗರಿಕರು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು.
  • ರಕ್ಷಣಾ ಪಡೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು 50 ವರ್ಷ ವಯಸ್ಸು ಮುಟ್ಟಿದರೆ ಈ ಯೋಜನೆಗೆ ನೊಂದಾಯಿಸಬಹುದು.

ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಎಸ್​ಸಿಎಸ್​ಎಸ್ ಅಕೌಂಟ್​ನಲ್ಲಿ ಹೇಗೆ ಹೂಡಿಕೆ?

ಆಧಾರ್, ಪ್ಯಾನ್ ಇತ್ಯಾದಿ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್​ನಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಅಕೌಂಟ್ ತೆರೆಯಬಹುದು. ಇದರಲ್ಲಿ ಲಂಪ್ಸಮ್ ಆಗಿ 1,000 ರೂನಿಂದ 30,00,000 ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ.

ಹೂಡಿಕೆ ಅವಧಿ 5 ವರ್ಷ ಇರುತ್ತದೆ. ಅಕೌಂಟ್ ತೆರೆದ ನಂತರ ಪ್ರತೀ ಕ್ವಾರ್ಟರ್​ಗೆ ಬಡ್ಡಿ ಹಣ ನಿಮ್ಮ ಅಕೌಂಟ್​ಗೆ ಜಮೆಯಾಗುತ್ತಾ ಹೋಗುತ್ತದೆ. ಹೀಗೆ ಐದು ವರ್ಷ ಬಡ್ಡಿ ಸಿಗುತ್ತಿರುತ್ತದೆ. ನಂತರ ಅಕೌಂಟ್ ಮೆಚ್ಯೂರ್ ಆಗಿ, ನಿಮ್ಮ ಅಸಲಿ ಹಣವನ್ನು ಹಿಂಪಡೆಯಬಹುದು. ಅಗತ್ಯ ಇದ್ದರೆ ಸ್ಕೀಮ್ ಅನ್ನು ಇನ್ನೂ ಮೂರು ವರ್ಷ ವಿಸ್ತರಿಸಬಹುದು.

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

20,500 ರೂ ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ?

ಈ ಸ್ಕೀಮ್ ಅಡಿಯಲ್ಲಿ 30 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ನೀವು ಗರಿಷ್ಠ ಮೊತ್ತ ಹೂಡಿಕೆ ಮಾಡಿದರೆ ಪ್ರತೀ ಕ್ವಾರ್ಟರ್​ನಲ್ಲಿ ನಿಮಗೆ 61,500 ರೂ ಬಡ್ಡಿ ಹಣ ಅಕೌಂಟ್​ಗೆ ಬಂದು ಬೀಳುತ್ತದೆ. ಅಂದರೆ, ತಿಂಗಳಿಗೆ 20,500 ರೂ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us