ಪೋಸ್ಟ್ ಆಫೀಸ್ ಅಪ್​ಡೇಟ್; ಆರ್​​ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ

2025-26 July-September quarter, Small savings scheme interest rates: ಜುಲೈನಿಂದ ಸೆಪ್ಟೆಂಬರ್​​ವರೆಗಿನ ಕ್ವಾರ್ಟರ್​​ಗೆ ಹಣಕಾಸು ಸಚಿವಾಲಯವು ಸ್ಮಾಲ್ ಸೇವಿಂಗ್ಸ್ ಯೋಜನೆಗಳಿಗೆ ಬಡ್ಡಿದರ ಪ್ರಕಟಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದ್ದ ದರಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಸುಕನ್ಯ ಸಮೃದ್ಧಿ ಯೋಜನೆಗೆ ಶೇ. 8.2ರ ಬಡ್ಡಿಯೇ ಮುಂದುವರಿಯಲಿದೆ. ಪಿಪಿಎಫ್​​​ಗೆ ಶೇ. 7.1ರಷ್ಟು ಬಡ್ಡಿ ಇರುತ್ತದೆ.

ಪೋಸ್ಟ್ ಆಫೀಸ್ ಅಪ್​ಡೇಟ್; ಆರ್​​ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ
ಪೋಸ್ಟ್ ಆಫೀಸ್

Updated on: Jun 30, 2025 | 7:17 PM

ನವದೆಹಲಿ, ಜೂನ್ 30: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings schemes) ಮುಂಬರುವ ಕ್ವಾರ್ಟರ್​​ನಲ್ಲಿ ಈಗಿರುವ ಬಡ್ಡಿಯೇ ಮುಂದುವರಿಯಲಿದೆ. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​​ಗೆ (ಜುಲೈನಿಂದ ಸೆಪ್ಟೆಂಬರ್) ಸರ್ಕಾರ ಬಡ್ಡಿದರ ಪ್ರಕಟಿಸಿದೆ. ಮೊದಲ ಕ್ವಾರ್ಟರ್​​ನಲ್ಲಿ ಇದ್ದ ದರವನ್ನೇ ಮುಂದುವರಿಸಲು ನಿರ್ಧರಿಸಿದೆ.

ಆರ್​​ಬಿಐ ರಿಪೋ ದರ (RBI interest rates) ಇಳಿಕೆ ಆದ ಬೆನ್ನಲ್ಲೇ ಬಹುತೇಕ ಬ್ಯಾಂಕುಗಳು ಬಡ್ಡಿದರ ಇಳಿಸಿವೆ. ಪಿಪಿಎಫ್, ಸುಕನ್ಯ ಸಮೃದ್ಧಿ ಯೋಜನೆ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೂ ಬಡ್ಡಿ ದರ ಇಳಿಯಬಹುದು ಎನ್ನುವ ಸುದ್ದಿಗಳು ದಟ್ಟವಾಗಿ ಹಬ್ಬಿದ್ದವು. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಲ್ಲಿ ಕುತೂಹಲ ಇತ್ತು. ಆದರೆ, ಹಿಂದಿನ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿರುವುದು ಈ ಹೂಡಿಕೆದಾರರಿಗೆ ನಿರಾಳ ತಂದಿದೆ.

ಇದನ್ನೂ ಓದಿ: ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ

ಕಳೆದ ಐದು ತಿಂಗಳಲ್ಲಿ ಆರ್​​ಬಿಐ 100 ಮೂಲಾಂಕಗಳಷ್ಟು ಬಡ್ಡಿದರ ಇಳಿಸಿದೆ. ಹಲವು ಬ್ಯಾಂಕುಗಳು ಸಾಲದ ದರ ಹಾಗೂ ಠೇವಣಿ ದರಗಳನ್ನು ಇಳಿಸಿವೆ.

2025ರ ಜುಲೈ ಸೆಪ್ಟೆಂಬರ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ

  • ಸುಕನ್ಯ ಸಮೃದ್ಧಿ ಯೋಜನೆ (ಎಸ್​​ಎಸ್​​ವೈ ಅಕೌಂಟ್): ಶೇ. 8.2ರ ವಾರ್ಷಿಕ ಬಡ್ಡಿ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1 ಬಡ್ಡಿ
  • ಕಿಸಾನ್ ವಿಕಾಸ್ ಪತ್ರ (ಕೆವಿಸಿ): ಶೇ. 7.5 ಬಡ್ಡಿ
  • ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​​ಸಿ): ಶೇ. 7.7 ಬಡ್ಡಿ
  • ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ
  • ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ
  • ಪೋಸ್ಟ್ ಆಫೀಸ್ 3 ವರ್ಷದ ಠೇವಣಿ: ಶೇ. 7.1 ಬಡ್ಡಿ
  • ಪೋಸ್ಟ್ ಆಫೀಸ್ ಸೇವಿಂಗ್ಸ್ ಡೆಪಾಸಿಟ್: ಶೇ. 4 ಬಡ್ಡಿ

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಈ ಮೇಲಿನ ಎಲ್ಲಾ ಸ್ಕೀಮ್​​ಗಳು ಅಂಚೆ ಕಚೇರಿಯಲ್ಲಿ ಲಭ್ಯ ಇವೆ. ಪಿಪಿಎಫ್, ಎಸ್​ಎಸ್​​​ವೈ ಯೋಜನೆಗಳನ್ನು ನಿಯೋಜಿತ ಬ್ಯಾಂಕುಗಳಲ್ಲಿ ಮಾಡಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us