
ನವದೆಹಲಿ, ಸೆಪ್ಟೆಂಬರ್ 11: ಬಹಳ ಜನಪ್ರಿಯವಾಗಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನ 2019-20ರ ಸರಣಿ-10ರ ಅಡಿಯಲ್ಲಿ ವಿತರಿಸಲಾಗಿದ್ದ ಗೋಲ್ಡ್ ಬಾಂಡ್ಗಳ (SGB- Sovereign Gold Bond) ಪ್ರೀಮೆಚ್ಯೂರ್ ರಿಡೆಂಪ್ಷನ್ಗೆ ಅವಕಾಶ ಕೊಡಲಾಗಿದೆ. 2020ರ ಮಾರ್ಚ್ 11ರಂದು ಈ ಬಾಂಡ್ಗಳನ್ನು ವಿತರಿಸಲಾಗಿತ್ತು. ಈ ಬಾಂಡ್ಗಳ ಮೇಲೆ ಹಣ ಹೂಡಿಕೆ ಮಾಡಿದವರಿಗೆ ಶೇ. 155.99ರಷ್ಟು ಲಾಭ ಸಿಗುತ್ತಿದೆ.
2020ರಲ್ಲಿ ಈ ಬಾಂಡ್ಗಳನ್ನು ಪ್ರತೀ ಯುನಿಟ್ಗೆ 4,260 ರೂನಂತೆ ನೀಡಲಾಗಿತ್ತು. ಎಂಟು ವರ್ಷಕ್ಕೆ ಮೆಚ್ಯೂರ್ ಆಗುವ ಬಾಂಡ್ಗೆ ಐದು ವರ್ಷಕ್ಕೆ ಪ್ರೀಮೆಚ್ಯೂರ್ ಆಗಿ ವಿತ್ಡ್ರಾ ಮಾಡುವ ಅವಕಾಶ ನೀಡಲಾಗುತ್ತದೆ. ಅದರಂತೆ ಇಂದು ಪ್ರೀಮೆಚ್ಯೂರ್ ವಿತ್ಡ್ರಾಯಲ್ ಅನ್ನು ಆರ್ಬಿಐ ಘೋಷಿಸಿದೆ. ಪ್ರತೀ ಯುನಿಟ್ಗೆ 10,905 ರೂ ನಿಗದಿ ಮಾಡಿದೆ. 4,260 ರೂನಂತೆ ಬಾಂಡ್ಗಳನ್ನು ಖರೀದಿಸಿದವರಿಗೆ ಈಗ 10,905 ರೂ ಸಿಗುತ್ತಿದೆ. ಅಂದರೆ, ಶೇ. 155.99ರಷ್ಟು ಲಾಭ ಸಿಗಲಿದೆ.
ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ
ಪ್ರೀಮೆಚ್ಯೂರ್ ಡೇಟ್ನಲ್ಲಿ ಹೂಡಿಕೆ ವಿತ್ಡ್ರಾ ಮಾಡಬೇಕೆಂಬ ಕಡ್ಡಾಯವೇನಿಲ್ಲ. ಈ ಸರಣಿಯ ಬಾಂಡ್ಗಳು 2028ರ ಸೆಪ್ಟೆಂಬರ್ಗೆ ಮೆಚ್ಯೂರ್ ಆಗುತ್ತವೆ. ಅಲ್ಲಿಯವರೆಗೂ ಕಾಯುವವರು ಕಾಯಬಹುದು.
ಈ ಎಸ್ಜಿಬಿ ಸರಣಿಯಲ್ಲಿ 5 ಲಕ್ಷ ರೂ ಹೂಡಿಕೆ ಮಾಡಿದ್ದರೆ ಎಷ್ಟು ಲಾಭ?
ಈ ಸಾವರೀನ್ ಗೋಲ್ಡ್ ಬಾಂಡ್ನ 2019-20ರ ಸರಣಿ 10ರ ಬಾಂಡ್ಗಳಲ್ಲಿ ಯಾರಾದರೂ 5 ಲಕ್ಷ ರೂ ಹೂಡಿಕೆ ಮಾಡಿದ್ದರೆ, ಈಗ ಅವರ ಹಣ 12,79,950 ರೂ ಆಗಿರುತ್ತಿತ್ತು. ಐದು ವರ್ಷದಲ್ಲಿ ಹೂಡಿಕೆಯು ಎರಡೂವರೆ ಪಟ್ಟು ಹೆಚ್ಚಾಗಿರುತ್ತಿತ್ತು.
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನ ಮತ್ತೊಂದು ವಿಶೇಷತೆ ಎಂದರೆ, ಅದು ಹೂಡಿಕೆ ಬೆಳೆಯುವುದರ ಜೊತೆಗೆ ಬಡ್ಡಿ ಆದಾಯವನ್ನೂ ನೀಡುತ್ತದೆ. ನೀವು ಐದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಅದಕ್ಕೆ ವರ್ಷಕ್ಕೆ ಶೇ. 2.5ರಂತೆ ಬಡ್ಡಿಯನ್ನೂ ನೀಡಲಾಗುತ್ತದೆ. ಈ ಬಡ್ಡಿ ಹಣವು ಹೂಡಿಕೆಗೆ ಪ್ರತ್ಯೇಕವಾಗಿರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ಗೆ ನಿಯಮಿತವಾಗಿ ಜಮೆಗೊಳ್ಳುತ್ತಿರುತ್ತದೆ.
ಇದನ್ನೂ ಓದಿ: ಗೋಲ್ಡ್ ಇಟಿಎಫ್ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?
ಐದು ಲಕ್ಷ ರೂಗೆ ವರ್ಷಕ್ಕೆ 12,500 ರೂ ಬಡ್ಡಿಯೇ ಸಿಗುತ್ತದೆ. ಐದು ವರ್ಷದಲ್ಲಿ ನಿಮಗೆ 62,500 ರೂ ಬಡ್ಡಿ ಸಂದಾಯವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ