AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Loan Rates: ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಯಾವ ಬ್ಯಾಂಕುಗಳಲ್ಲಿ ಬಡ್ಡಿ ಕಡಿಮೆ? ಇಲ್ಲಿದೆ ಡೀಟೇಲ್ಸ್

Banks That Give Personal Loans for Lower Interest Rates: ಹೆಚ್ಚು ರಿಸ್ಕ್ ಎಂಬ ಕಾರಣಕ್ಕೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲಕ್ಕೆ ಬ್ಯಾಂಕುಗಳು ಹೆಚ್ಚು ಬಡ್ಡಿ ದರ ವಿಧಿಸುತ್ತವೆ. ಎಚ್​ಡಿಎಫ್​ಸಿಯಿಂದ ಹಿಡಿದು ಪಿಎನ್​ಬಿವರೆಗೆ ವಿವಿಧ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್​ಗೆ ಬಡ್ಡಿದರ ಎಷ್ಟಿದೆ ಎಂಬ ವಿವರ ಇಲ್ಲಿದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿದರಕ್ಕೆ ಹೆಚ್ಚು ಸಾಲ ಸಿಗುತ್ತದೆ.

Loan Rates: ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಯಾವ ಬ್ಯಾಂಕುಗಳಲ್ಲಿ ಬಡ್ಡಿ ಕಡಿಮೆ? ಇಲ್ಲಿದೆ ಡೀಟೇಲ್ಸ್
ಪರ್ಸನಲ್ ಲೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2024 | 2:12 PM

Share

ಬಹಳ ತುರ್ತಾಗಿ ಸಣ್ಣ ಸಾಲ ಬೇಕೆಂದರೆ ಜನರಿಗೆ ಇರುವ ಪ್ರಮುಖ ಆಯ್ಕೆಗಳಲ್ಲಿ ಪರ್ಸನಲ್ ಲೋನ್ (Personal Loan) ಒಂದು. ನಿಮ್ಮ ಬಳಿಕ ಒತ್ತೆ ಇಡಲು ಚಿನ್ನ ಇಲ್ಲದಿದ್ದರೆ ಪರ್ಸನಲ್ ಲೋನ್ ಅನಿವಾರ್ಯ ಆಯ್ಕೆ ಆಗಿರುತ್ತದೆ. ಗೃಹ ಸಾಲ, ಒಡವೆ ಸಾಲ ಇತ್ಯಾದಿ ಅಡಮಾನ ಸಾಲಗಳಿಗೆ (mortgage or secured loan) ಹೋಲಿಸಿದರೆ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಹೆಚ್ಚಿರುತ್ತದೆ. ಪರ್ಸನಲ್ ಲೋನ್ ಅನ್ನು ಅಡಮಾನ ಇಲ್ಲದೆಯೇ ನೀಡುವುದರಿಂದ ಬಡ್ಡಿದರ ತುಸು ಹೆಚ್ಚಿರುತ್ತದೆ. ಯಾವ್ಯಾವ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್​ಗೆ ಬಡ್ಡಿದರ ಕಡಿಮೆ ಇದೆ, ಈ ಸಾಲಕ್ಕೆ ಯಾವ ದಾಖಲೆಗಳು ಬೇಕು, ಕನಿಷ್ಠ ಬಡ್ಡಿಯಲ್ಲಿ ಸಾಲ ಪಡೆಯಲು ಏನು ಮಾಡಬೇಕು ಎಂಬ ವಿವರ ಮುಂದಿದೆ.

ಅತಿಕಡಿಮೆ ದರಕ್ಕೆ ಪರ್ಸನಲ್ ಲೋನ್ ನೀಡುವ ಬ್ಯಾಂಕುಗಳು

  • ಎಚ್​ಡಿಎಫ್​ಸಿ ಬ್ಯಾಂಕ್: ಬಡ್ಡಿದರ ಶೇ. 10.75ರಿಂದ ಶೇ. 24ರವರೆಗೆ
  • ಐಸಿಐಸಿಐ ಬ್ಯಾಂಕ್: ಶೇ. 10.65ರಿಂದ ಶೇ. 16
  • ಎಸ್​ಬಿಐ: ಶೇ. 11.15ರಿಂದ ಶೇ. 11.90
  • ಕೋಟಕ್ ಮಹೀಂದ್ರ: ಶೇ. 10.99
  • ಎಕ್ಸಿಸ್ ಬ್ಯಾಂಕ್: ಶೇ. 10.65ರಿಂದ ಶೇ. 22
  • ಇಂಡಸ್​ಇಂಡ್ ಬ್ಯಾಂಕ್: ಶೇ. 10.25ರಿಂದ ಶೇ. 26
  • ಬ್ಯಾಂಕ್ ಆಫ್ ಬರೋಡ: ಶೇ. 11.40ಯಿಂದ ಶೇ. 18.75
  • ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 11.40ಯಿಂದ ಶೇ. 12.75
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯ: ಶೇ. 11.35ರಿಂದ ಶೇ. 15.45
  • ಐಡಿಬಿಐ ಬ್ಯಾಂಕ್: ಶೇ. 10.50ಯಿಂದ ಶೇ. 13.25

ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

ಕನಿಷ್ಠ ಬಡ್ಡಿದರದಲ್ಲಿ ಸಾಲ ಸಿಗಲು ಏನು ಮಾಡಬೇಕು?

ಪರ್ಸನಲ್ ಲೋನ್ ಅಡಮಾನರಹಿತ ಸಾಲವಾದುದರಿಂದ ಬ್ಯಾಂಕುಗಳಿಗೆ ರಿಸ್ಕ್ ಹೆಚ್ಚು. ಗ್ರಾಹಕನ ಮೇಲಿನ ನಂಬುಗೆಯಿಂದ ಒಂದು ಅಂದಾಜಿನಲ್ಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಅಂತೆಯೇ ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಗ್ರಾಹಕನಿಂದ ಸಾಲ ಮರುಪಾವತಿ ಸಾಧ್ಯತೆ ಕಡಿಮೆ ಎಂಬ ಅಂದಾಜು ಇದ್ದಷ್ಟೂ ಬಡ್ಡಿ ಹೆಚ್ಚು ನಿಗದಿ ಮಾಡಲಾಗುತ್ತದೆ.

ಗ್ರಾಹಕನ ಮರುಪಾವತಿ ಶಕ್ತಿ ಎಷ್ಟು ಎಂದು ತಿಳಿಯಲು ಬ್ಯಾಂಕಿಗೆ ಇರುವ ಪ್ರಮುಖ ಉಪಾಯ ಕ್ರೆಡಿಟ್ ಸ್ಕೋರ್. ಪರ್ಸನಲ್ ಲೋನ್ ಅಷ್ಟೇ ಅಲ್ಲ ಯಾವುದೇ ಸಾಲಕ್ಕೆ ಒಬ್ಬ ಗ್ರಾಹಕ ಅರ್ಜಿ ಸಲ್ಲಿಸಿದಾಗ ಮೊದಲು ಅವರ ಕ್ರೆಡಿಟ್ ಸ್ಕೋರ್ ಅನ್ನು ಬ್ಯಾಂಕು ಪರಿಶೀಲಿಸುತ್ತದೆ. 750ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರಕ್ಕೆ ಸಾಲ ಮಂಜೂರು ಮಾಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟೂ ಸಾಲಕ್ಕೆ ಬಡ್ಡಿದರ ಹೆಚ್ಚು ಇರುತ್ತದೆ.

ಇದನ್ನೂ ಓದಿ: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

ಪರ್ಸನಲ್ ಲೋನ್​ಗೆ ದಾಖಲೆಗಳು ಏನು ಬೇಕು?

  • ಸಂಬಳದಾರರಾಗಿದ್ದರೆ ಅವರ ಹಿಂದಿನ ಮೂರು ತಿಂಗಳ ಸ್ಯಾಲರಿ ಸ್ಲಿಪ್
  • ಹಿಂದಿನ ಮೂರು ತಿಂಗಳಿನದ್ದೋ ಅಥವಾ ಆರು ತಿಂಗಳಿನದ್ದೋ ಬ್ಯಾಂಕ್ ಸ್ಟೇಟ್ಮೆಂಟ್

ಇದರ ಜೊತೆಗೆ ಬ್ಯಾಂಕು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಪಡೆದು ಪರಿಶೀಲಿಸುತ್ತದೆ. ನಿಮಗೆ ಸಾಲ ತೀರಿಸುವಿಕೆಯ ಶಿಸ್ತು ಮತ್ತು ಸಾಮರ್ಥ್ಯ ಇದೆ ಎನಿಸಿದರೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಮೊತ್ತದ ಸಾಲ ಕೊಡಲು ಬ್ಯಾಂಕ್ ಸಿದ್ಧ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ