ಅತಿದೊಡ್ಡ ಐಪಿಒಗಳಲ್ಲಿ ಗೆದ್ದವೆಷ್ಟು, ಸೋತವೆಷ್ಟು? ಪ್ರಾಥಮಿಕ ಮಾರುಕಟ್ಟೆಯಲ್ಲಿ ಹಣ ಹಾಕುವ ಮುನ್ನ ಹುಷಾರ್

|

Updated on: Oct 22, 2024 | 12:46 PM

Performance report of top-30 IPOs: ಐಪಿಒ ಎಂಬುದು ಕಂಪನಿಗಳು ಸಾರ್ವಜನಿಕವಾಗಿ ಷೇರುಗಳನ್ನು ಹಂಚಿ ಬಂಡವಾಳ ಸಂಗ್ರಹಿಸುವ ಪ್ರಾಥಮಿಕ ಮಾರುಕಟ್ಟೆ. ಇಲ್ಲಿ ಅಡಿ ಇಡುತ್ತಿರುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಿದೆ. ಐಪಿಒ ಮೂಲಕ ಅತಿಹೆಚ್ಚು ಬಂಡವಾಳ ಸಂಗ್ರಹಿಸಿದ 30 ಕಂಪನಿಗಳ ಷೇರುಗಳಲ್ಲಿ ನಿರೀಕ್ಷೆ ಹುಸಿಗಳಿಸದವು ಎಷ್ಟು? ಗೆದ್ದವೆಷ್ಟು ಎನ್ನುವ ಮಾಹಿತಿಯನ್ನು ಕ್ಯಾಪಿಟಲ್ ಮೈಂಡ್ ಕಲೆಹಾಕಿದೆ.

ಅತಿದೊಡ್ಡ ಐಪಿಒಗಳಲ್ಲಿ ಗೆದ್ದವೆಷ್ಟು, ಸೋತವೆಷ್ಟು? ಪ್ರಾಥಮಿಕ ಮಾರುಕಟ್ಟೆಯಲ್ಲಿ ಹಣ ಹಾಕುವ ಮುನ್ನ ಹುಷಾರ್
ಐಪಿಒ
Follow us on

ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ಇತ್ತೀಚೆಗೆ ಐಪಿಒ ಟ್ರೆಂಡ್ ಹೆಚ್ಚುತ್ತಿದೆ. ಸಣ್ಣ ಪುಟ್ಟ ಕಂಪನಿಗಳೆಲ್ಲಾ ಐಪಿಒಗೆ ಬಂದು ನಿರೀಕ್ಷೆಮೀರಿದ ಬಂಡವಾಳ ಸಂಗ್ರಹಿಸುತ್ತಿವೆ. ಹೂಡಿಕೆದಾರರೂ ಕೂಡ ಪ್ರಾಥಮಿಕ ಮಾರುಕಟ್ಟೆಗೆ ಮುಗಿಬೀಳುತ್ತಿದ್ದಾರೆ. ಕೆಲ ಐಪಿಒಗಳಂತೂ ಸಾವಿರಾರು ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಷನ್ ಕಾಣುತ್ತಿವೆ. ಒಂದು ರೀತಿಯಲ್ಲಿ ಐಪಿಒ ಕ್ರೇಜ್ ಶುರುವಾದಂತಿದೆ. ಆದರೆ, ವಾಸ್ತವದಲ್ಲಿ ಐಪಿಒ ಮೂಲಕ ಹೊಸದಾಗಿ ಷೇರು ಮಾರುಕಟ್ಟೆಗೆ ಬರುತ್ತಿರುವ ಕಂಪನಿಗಳು ಹೂಡಿಕೆದಾರರ ಹಣಕ್ಕೆ ನ್ಯಾಯ ಒದಗಿಸುತ್ತಿವೆಯಾ? ಕ್ಯಾಪಿಟಲ್​ಮೈಂಡ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಇತ್ತೀಚಿನ 30 ಅತಿದೊಡ್ಡ ಐಪಿಒಗಳ ಬೆಳವಣಿಗೆಯನ್ನು ಅಧ್ಯಯನ ಮಾಡಿ, ವರದಿ ಪ್ರಕಟಿಸಿದೆ. ಅದರ ಪ್ರಕಾರ ಮೂವತ್ತರಲ್ಲಿ 18 ಕಂಪನಿಗಳ ಷೇರುಗಳು ಪ್ರಮುಖ ಸೂಚ್ಯಂಕದಷ್ಟು ರಿಟರ್ನ್ ನೀಡಲು ವಿಫಲವಾಗಿವೆ.

ಕ್ಯಾಪಿಟಲ್ ಮೈಂಡ್ ಸಂಸ್ಥೆಯು ಐಪಿಒಗಳು ನೀಡಿರುವ ರಿಟರ್ನ್ ಅನ್ನು ನಿಫ್ಟಿ500 ಸೂಚ್ಯಂಕಕ್ಕೆ ಹೋಲಿಕೆ ಮಾಡಿದೆ. 30 ಟಾಪ್ ಐಪಿಒಗಳಲ್ಲಿ ಎಂಟು ಷೇರುಗಳ ಬೆಲೆ ಐಪಿಒ ಬೆಲೆಗಿಂತ ಕಡಿಮೆ ಮಟ್ಟದಲ್ಲಿವೆ. ಅಂದರೆ, ನೆಗಟಿವ್ ರಿಟರ್ನ್ ನೀಡಿವೆ.

ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದಿರುವ ಷೇರುಗಳಲ್ಲಿ ಜೊಮಾಟೊ ಪ್ರಮುಖವಾದುದು. ಕೋಲ್ ಇಂಡಿಯಾ, ಬಜಾಜ್ ಹೌಸಿಂಗ್ ಫೈನಾನ್ಸ್, ಭಾರ್ತಿ ಹೆಕ್ಸಾಕಾಮ್, ಬ್ರೇನ್​ಬೀಸ್ (ಫಸ್ಟ್ ಕ್ರೈ), ಓಲಾ, ಪಿಬಿ ಫಿನ್​ಟೆಕ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್ ಮೊದಲದ ಕಂಪನಿಗಳು ನಿಫ್ಟಿ500 ಸೂಚ್ಯಂಕಕ್ಕಿಂತ ಹೆಚ್ಚಿನ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ.

ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ

ಐಪಿಒ ಬೆಲೆಗಿಂತ ನೆಗಟಿವ್ ರಿಟರ್ನ್ ತಂದಿರುವ ಷೇರುಗಳು

  1. ಒನ್97 ಕಮ್ಯೂನಿಕೇಶನ್ಸ್ (ಪೇಟಿಎಂ)
  2. ರಿಲಾಯನ್ಸ್ ಪವರ್
  3. ಜನರಲ್ ಇನ್ಷೂರೆನ್ಸ್ ಕಾರ್ಪ್
  4. ಎಸ್​ಬಿಐ ಕಾರ್ಡ್ಸ್
  5. ನ್ಯೂ ಇಂಡಿಯಾ ಅಷೂರೆನ್ಸ್
  6. ಸ್ಟಾರ್ ಹೆಲ್ತ್ ಇನ್ಷೂರೆನ್ಸ್
  7. ಡೆಲಿವರಿ ಲಿ
  8. ನುವೋಕೋ ವಿಸ್ತಾಸ್ ಕಾರ್ಪ್
  9. ಬಂಧನ್ ಬ್ಯಾಂಕ್

ಟಾಪ್-30 ಐಪಿಒ: ನಿಫ್ಟಿ500 ಸೂಚ್ಯಂಕಕ್ಕಿಂತ ಕಡಿಮೆ ರಿಟರ್ನ್ಸ್ ತಂದಿರುವ ಷೇರುಗಳು

  1. ಎಲ್​ಐಸಿ
  2. ಒನ್97 ಕಮ್ಯೂನಿಕೇಶನ್ಸ್ (ಪೇಟಿಎಂ)
  3. ರಿಲಾಯನ್ಸ್ ಪವರ್
  4. ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್
  5. ಜನರಲ್ ಇನ್ಷೂರೆನ್ಸ್ ಕಾರ್ಪ್
  6. ಎಸ್​ಬಿಐ ಕಾರ್ಡ್ಸ್
  7. ನ್ಯೂ ಇಂಡಿಯಾ ಅಷೂರೆನ್ಸ್
  8. ಎಚ್​ಡಿಎಫ್​ಸಿ ಲೈಫ್ ಇನ್ಷೂರೆ್ಸ್
  9. ಎಸ್​ಬಿಐ ಲೈಫ್ ಇನ್ಷೂರೆನ್ಸ್
  10. ಗ್ಲ್ಯಾಂಡ್ ಫಾರ್ಮಾ
  11. ಸ್ಟಾರ್ ಹೆಲ್ತ್ ಇನ್ಷೂರೆನ್ಸ್
  12. ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್
  13. ಎನ್​ಎಚ್​ಪಿಸಿ
  14. ಎನ್​ಟಿಪಿಸಿ
  15. ಎಫ್​ಎಸ್​ಎನ್ ಇ ಕಾಮರ್ಸ್ ವೆಂಚರ್ಸ್
  16. ಡೆಲಿವರಿ ಲಿ
  17. ನುವೋಕೋ ವಿಸ್ತಾಸ್ ಕಾರ್ಪ್
  18. ಬಂಧನ್ ಬ್ಯಾಂಕ್
  19. ಇಂಡಸ್ ಟವರ್ಸ್

ಇದನ್ನೂ ಓದಿ: ಮಾರುಕಟ್ಟೆ ಬೀಳ್ತಿದೆ, ಖರೀದಿಸುವ ಸಮಯವಾ? ಇದು ಸಾಕಾಗಲ್ಲ, ಇನ್ನೂ ಬೀಳಬೇಕು ಎನ್ನುತ್ತಾರೆ ದೀಪಕ್ ಶೆಣೈ

ಟಾಪ್-30 ಐಪಿಒ: ನಿಫ್ಟಿ 500 ಸೂಚ್ಯಂಕ ಮೀರಿಸಿದ ಷೇರುಗಳು

  1. ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್
  2. ಕೋಲ್ ಇಂಡಿಯಾ
  3. ಜೊಮಾಟೊ
  4. ಒಲಾ ಎಲೆಕ್ಟ್ರಿಕ್
  5. ಪಿಬಿ ಫಿನ್​ಟೆಕ್
  6. ಸೊನಾ ಪ್ರಿಸಿಶನ್ ಫೋರ್ಜಿಂಗ್
  7. ಇಂಡಿಯನ್ ರೈಲ್ವೆ ಫಿನಾನ್ಸ್ ಕಾರ್ಪ್
  8. ಮ್ಯಾನ್​ಕೈಂಡ್ ಫಾರ್ಮಾ
  9. ಭಾರ್ತಿ ಹೆಕ್ಸಾಕಾಮ್
  10. ಬ್ರೇನ್​ಬೀಸ್ ಸಲ್ಯೂಶನ್ಸ್
  11. ಎಚ್​ಎಎಲ್

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ