AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pesonal Loan: ಪರ್ಸನಲ್ ಲೋನ್​ಗೆ ಯಾವ ಬ್ಯಾಂಕ್​ನಲ್ಲಿ ಎಷ್ಟು ಬಡ್ಡಿ ದರ?

Personal Loan: ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು ಎಂದಿದ್ದಲ್ಲಿ ಭಾರತದ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರದ ಬಗ್ಗೆ ಮಾಹಿತಿ ಇಲ್ಲಿದೆ.

Pesonal Loan: ಪರ್ಸನಲ್ ಲೋನ್​ಗೆ ಯಾವ ಬ್ಯಾಂಕ್​ನಲ್ಲಿ ಎಷ್ಟು ಬಡ್ಡಿ ದರ?
ಇವತ್ತಿಗೆ 1.61 ಕೋಟಿ ರೂಪಾಯಿ
Srinivas Mata
|

Updated on: May 20, 2021 | 11:51 PM

Share

ಪರ್ಸನಲ್ ಲೋನ್ ಎಂಬುದು ಕಷ್ಟ ಕಾಲದಲ್ಲಿ ಯಾವುದೇ ಶ್ಯೂರಿಟಿ, ಜಾಮೀನು ಇಲ್ಲದೆ ದೊರೆಯುವ ಸಾಲ. ಇದನ್ನು ಅನ್​ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಅಡಮಾನ ಮಾಡುವುದಕ್ಕೆ ಏನೂ ಇಲ್ಲ ಎಂದಾಗ ಪರ್ಸನಲ್ ತೆಗೆದುಕೊಳ್ಳಲಾಗುತ್ತದೆ. ಅಲ್ಪಾವಧಿಗೆ ಸಾಲ ಬೇಕೆಂದಾಗ (12ರಿಂದ 36 ತಿಂಗಳು ಹಾಗೂ ಇನ್ನೂ ಕೆಲ ಸಲ 60ರಿಂದ 84 ತಿಂಗಳ ತನಕ ದೊರೆಯುತ್ತದೆ), ಅಡಮಾನ ಮಾಡುವುದಕ್ಕೆ ಏನೂ ನೀಡುವುದಿಲ್ಲ ಎಂದಾಗ, ತಕ್ಷಣಕ್ಕೆ ಸಾಲ ಬೇಕು ಎಂಬ ಹಣದ ತುರ್ತು ಅಗತ್ಯ ಇದ್ದಾಗ ಪರ್ಸನಲ್ ಲೋನ್​ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ. ಉಳಿದ ಸಾಲಕ್ಕೆ ಹೋಲಿಸಿದರೆ ಪರ್ಸನಲ್ ಲೋನ್ ಮೇಲಿನ ಬಡ್ಡಿ ತುಸು ಜಾಸ್ತಿ. ಆದರೆ ಅನಿವಾರ್ಯ ಅನ್ನೋ ಸಂದರ್ಭದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.

ಆದರೆ, ಪರ್ಸನಲ್ ತೆಗೆದುಕೊಳ್ಳುವ ಮುಂಚೆ ಬಡ್ಡಿ ದರ, ಪ್ರೊಸೆಸಿಂಗ್ ಫೀ, ಅವಧಿಗೆ ಮುಂಚೆ ಹಣ ಹಿಂತಿರುಗಿಸಿದರೆ ಪ್ರೀಕ್ಲೋಷರ್ ಶುಲ್ಕ ಹಾಗೂ ಭಾಗಶಃ ಹಣ ಪಾವತಿಸಿದರೆ ಅದಕ್ಕೆ ಇರುವ ನಿಯಮಗಳೇನು ಇತ್ಯಾದಿಗಳನ್ನು ವಿಚಾರಿಸಿಕೊಂಡ ನಂತರವೇ ಮುಂದುವರಿಯುವುದು ಉತ್ತಮ. ಇನ್ನು ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಮತ್ತು ಯಾವ ಬ್ಯಾಂಕ್​ ಖಾತೆಗೆ ವೇತನ ಹೋಗುತ್ತದೋ ಅಥವಾ ನೀವು ವ್ಯವಹಾರ ಮಾಡುತ್ತೀರೋ ಅಲ್ಲೇ ಪ್ರಯತ್ನ ಪಟ್ಟರೆ ಪರ್ಸನಲ್ ಲೋನ್ ಬಡ್ಡಿ ಕಡಿಮೆ ಆಗಬಹುದು. ಆದರೆ ಚಿನ್ನ ಅಥವಾ ಆಸ್ತಿ ಅಡಮಾನ ಮಾಡಿ ಸಾಲ ಪಡೆಯುವುದು ಉತ್ತಮ ಆಯ್ಕೆ ಆಗುತ್ತದೆ. ಇರಲಿ, ಸದ್ಯಕ್ಕೆ ಪ್ರಮುಖ ಬ್ಯಾಂಕ್​ಗಳಲ್ಲಿನ ಪರ್ಸನಲ್ ಲೋನ್ ಬಡ್ಡಿ ದರ ಎಷ್ಟಿದೆ ಎಂಬುದನ್ನು ತಿಳಿಯಿರಿ.

ಪಂಜಾಬ್​ ನ್ಯಾಷನಲ್ ಬ್ಯಾಂಕ್: ಶೇ 8.45- ಶೇ 14.50 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.85- ಶೇ 10.20 ಇಂಡಿಯನ್ ಬ್ಯಾಂಕ್: ಶೇ 9.05- ಶೇ 13.65 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ 9.30- ಶೇ 13.40 ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ 9.55- ಶೇ 12.90 ಐಡಿಬಿಐ ಬ್ಯಾಂಕ್: ಶೇ 9.50- ಶೇ 14 ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ 9.50- ಶೇ 11.50 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 9.60- ಶೇ 13.85 ನೈನಿತಾಲ್ ಬ್ಯಾಂಕ್: ಶೇ 10- ಶೇ 10.50 ಬ್ಯಾಂಕ್ ಆಫ್ ಬರೋಡ: ಶೇ 10- ಶೇ 15.60 ಯುಕೋ ಬ್ಯಾಂಕ್: ಶೇ 10.30- ಶೇ 10.55 ಇಂಡಿಯನ್ ಓವರ್​ಸೀಸ್ ಬ್ಯಾಂಕ್: ಶೇ 10.30- ಶೇ 12.05 ಬ್ಯಾಂಕ್ ಆಫ್ ಇಂಡಿಯಾ: ಶೇ 10.35- ಶೇ 12.35 ಕೊಟಕ್ ಮಹೀಂದ್ರಾ ಬ್ಯಾಂಕ್: ಶೇ 10.45- ಶೇ 24 ಆಕ್ಸಿಸ್ ಬ್ಯಾಂಕ್: ಶೇ 10.49- ಶೇ 11.25

(ಮಾಹಿತಿ ಮೂಲ: ಮೈಮನಿಮಂತ್ರ.ಕಾಮ್ ಮೇ 20, 2021ಕ್ಕೆ ಅನ್ವಯ ಆಗುವಂತೆ)

ಇದನ್ನೂ ಓದಿ: 2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು

(Here is the India’s major banks personal loan rate of interest as on May 20, 2021)

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?