Petrol Price on November 28: ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

TV9kannada Web Team

TV9kannada Web Team | Edited By: Sushma Chakre

Updated on: Nov 28, 2022 | 9:13 AM

Fuel Price Today: ಭಾರತದ 4 ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸುಮಾರು 6 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಮಾಡದೇ ಇರುವುದು ಇದೇ ಮೊದಲು.

Petrol Price on November 28: ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಪೆಟ್ರೋಲ್ ಮತ್ತು ಡೀಸೆಲ್ ದರ

Fuel Price on November 28: ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತಗಳ ಹೊರತಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಯಲ್ಲಿ (Petrol Price) ಹೆಚ್ಚಿನ ಬದಲಾವಣೆಗಳಾಗಿಲ್ಲ. ಈ ನಡುವೆ ಹಲವೆಡೆ ಇಂಧನದ ಬೆಲೆಯಲ್ಲಿ ಬದಲಾವಣೆಯಾಗಿದ್ದರೂ 6 ತಿಂಗಳಿನಿಂದ ದೇಶದ 4 ಮಹಾನಗರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮತ್ತೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Fuel Price) ಬೆಲೆಯ ಏರಿಳಿತ ಮುಂದುವರಿದಿದೆ.

ಗಮನಾರ್ಹ ಅಂಶವೆಂದರೆ, ಭಾರತದ 4 ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಕೊನೆಯ ಬದಲಾವಣೆಯು ಮೇ 22ರಂದು ಸಂಭವಿಸಿತ್ತು. ಅಷ್ಟೇ ಅಲ್ಲ, ಸುಮಾರು 6 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಮಾಡದೇ ಇರುವುದು ಇದೇ ಮೊದಲು. ತೈಲ ಕಂಪನಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿ ನಂತರ ಹೊಸ ದರಗಳನ್ನು ನೀಡುತ್ತವೆ. ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ದಿನದ ಹೊಸ ದರಗಳು ಬೆಳಿಗ್ಗೆ 6 ಗಂಟೆಯಿಂದಲೇ ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳ ಸೇರ್ಪಡೆಯಿಂದಾಗಿ ಅದರ ಬೆಲೆ ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ತುಂಬಾ ಹೆಚ್ಚಾಗಿತ್ತು.

ಇದನ್ನೂ ಓದಿ: Petrol Price on November 24: ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿನಿಂದ ಯಥಾಸ್ಥಿತಿಯಲ್ಲಿದೆ ಪೆಟ್ರೋಲ್, ಡೀಸೆಲ್ ಬೆಲೆ

ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. OPEC ರಾಷ್ಟ್ರಗಳು ಕಚ್ಚಾ ಉತ್ಪಾದನೆಯಲ್ಲಿ ಕಡಿತದ ಘೋಷಣೆ ಮಾಡಿದ ನಂತರ ಕಚ್ಚಾ ತೈಲದಲ್ಲಿ ಏರಿಳಿತಗಳಾಗಿತ್ತು. ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ, ಕಂಪನಿಗಳು ಇದನ್ನು ಮಾಡಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 6 ತಿಂಗಳಿನಿಂದ ಪೆಟ್ರೋಲ್ -ಡೀಸೆಲ್ ಬೆಲೆ ಸ್ಥಿರವಾಗಿದೆ. ಇದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ಗೆ 6 ರೂ. ಕಡಿತಗೊಳಿಸಿದ್ದರಿಂದ ಮೇ ತಿಂಗಳಲ್ಲಿ ಇಂಧನದ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿತ್ತು. ಪರಿಷ್ಕೃತ ದರಗಳ ಪ್ರಕಾರ, ಭಾರತದ ಪ್ರಮುಖ ಮೆಟ್ರೋ ಪಾಲಿಟನ್ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳು ಹೀಗಿವೆ…

ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.65 ರೂ. ಮತ್ತು ಡೀಸೆಲ್ 89.82 ರೂ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.76 ರೂ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ 93.72 ರೂ. ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ 96.52 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್ 94.76 ರೂ. ಚಂಡೀಗಢದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ 84.26 ರೂ. ಹೈದರಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ. ಆಗಿದೆ.

ಇದನ್ನೂ ಓದಿ: Petrol Price on November 25: ಈ ರಾಜ್ಯದಲ್ಲಿ ಇಂದು ಪೆಟ್ರೋಲ್ ಬೆಲೆ ಹೆಚ್ಚಳ; ಇಂದಿನ ಡೀಸೆಲ್ ದರ ಹೀಗಿದೆ

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. OMCಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿವೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಕಳುಹಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸವು ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada