Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೇಗಿದೆ?

| Updated By: ನಯನಾ ರಾಜೀವ್

Updated on: Jul 07, 2022 | 10:45 AM

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯ ಇಂಡಿಯನ್ ಆಯಿಲ್‌ನ ಪಂಪ್‌ನಲ್ಲಿ ಪೆಟ್ರೋಲ್ ಬೆಲೆ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ದಾಖಲಾಗಿದ್ದು ಸುಮಾರು ಒಂದೂವರೆ ತಿಂಗಳಿನಿಂದ ಬೆಲೆ ಸ್ಥಿರವಾಗಿದೆ. ದೊಡ್ಡ ನಗರಗಳಲ್ಲಿ ದರ ಎಷ್ಟು ಎಂದು ತಿಳಿಯೋಣ.

Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೇಗಿದೆ?
Petrol
Follow us on

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯ ಇಂಡಿಯನ್ ಆಯಿಲ್‌ನ ಪಂಪ್‌ನಲ್ಲಿ ಪೆಟ್ರೋಲ್ ಬೆಲೆ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ದಾಖಲಾಗಿದ್ದು ಸುಮಾರು ಒಂದೂವರೆ ತಿಂಗಳಿನಿಂದ ಬೆಲೆ ಸ್ಥಿರವಾಗಿದೆ. ದೊಡ್ಡ ನಗರಗಳಲ್ಲಿ ದರ ಎಷ್ಟು ಎಂದು ತಿಳಿಯೋಣ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲವು ಎರಡು ತಿಂಗಳಲ್ಲಿ ಮೊದಲ ಬಾರಿಗೆ 100 ಕ್ಕಿಂತ ಕಡಿಮೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ: ಲೀಟರ್​ಗೆ 101.94, ರೂ. ಇದ್ದು, ಡೀಸೆಲ್ ಬೆಲೆ ಲೀಟರ್​ಗೆ 87.89 ರೂ. ಇದೆ.
ಕಳೆದ ತಿಂಗಳು ಮೇ 21 ರಂದು ಮೋದಿ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 8 ರೂಪಾಯಿ ಮತ್ತು ಡೀಸೆಲ್ ಮೇಲೆ 6 ರೂಪಾಯಿ ಕಡಿತಗೊಳಿಸಿತ್ತು.

ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ 9.50 ಮತ್ತು ಡೀಸೆಲ್‌ಗೆ 7 ರೂ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕೇರಳ ಸರ್ಕಾರಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿತು, ಇದು ಈ ರಾಜ್ಯಗಳಲ್ಲಿ ದರವನ್ನು ಮತ್ತಷ್ಟು ಕಡಿಮೆ ಮಾಡಿತು. ಆದರೆ, ಅಂದಿನಿಂದ ಸತತ ಒಂದು ತಿಂಗಳಿನಿಂದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.62 ರೂ. ಇದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.35 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ದರ ಲೀಟರ್ ಗೆ 97.28 ರೂ.ಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.03 ರೂ.ಗೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 92.76 ರೂ. ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.63 ರೂ.ಗಳಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 94.24 ರೂ., ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.94 ರೂ.ಗಳಾಗಿದ್ದು, ಡೀಸೆಲ್ ದರ ಲೀಟರ್‌ಗೆ 87.89 ರೂ. ಇದೆ.

ಗುರುಗ್ರಾಮದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.81 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 90.05 ರೂ. ಇದೆ. ಭೋಪಾಲ್‌ನಲ್ಲಿ ಪೆಟ್ರೋಲ್ ಬೆಲೆ 108.65 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 93.90 ರೂ., ಜೈಪುರದಲ್ಲಿ ಪೆಟ್ರೋಲ್ ಲೀಟರ್‌ಗೆ 108.48 ಮತ್ತು ಡೀಸೆಲ್ 93.72 ರೂ. ಇದೆ. ರಾಂಚಿಯಲ್ಲಿ ಪೆಟ್ರೋಲ್ ಗೆ 99.84 ರೂ., ಡೀಸೆಲ್ ಗೆ 94.65 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ., ಡೀಸೆಲ್ 94.04 ರೂ. ಇದೆ.