Petrol Price Today: ಶುಕ್ರವಾರ ಪೆಟ್ರೋಲ್, ಡೀಸೆಲ್ ದರ ಹೀಗಿದೆ.. ಕೊಳ್ಳುವ ಮೊದಲು ಇಂಧನ ದರ ಪರಿಶೀಲಿಸಿ!

Petrol Diesel Price Today in Bengaluru: ಶುಕ್ರವಾರ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ದರ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ಮಂಗಳವಾರ ದರ ಕಡಿತದ ನಂತರ ಇಂಧನ ದರ ಸ್ಥಿರವಾಗಿದೆ. ಹಾಗಿದ್ದರೆ ಎಷ್ಟಿದೆ ದರ ಎಂಬುದರ ವಿವರ ಇಲ್ಲಿದೆ.

  • TV9 Web Team
  • Published On - 8:52 AM, 2 Apr 2021
Petrol Price Today: ಶುಕ್ರವಾರ ಪೆಟ್ರೋಲ್, ಡೀಸೆಲ್ ದರ ಹೀಗಿದೆ.. ಕೊಳ್ಳುವ ಮೊದಲು ಇಂಧನ ದರ ಪರಿಶೀಲಿಸಿ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಮಂಗಳವಾರ ಪೆಟ್ರೋಲ್​, ಡೀಸೆಲ್​ ದರ ಕಡಿತದ ನಂತರ ಸತತ ಮೂರನೇ ದಿನವೂ ದೇಶಾದ್ಯಂತ ದರ ಸ್ಥಿರವಾಗಿದೆ. ಕಳೆದ ಮಂಗಳವಾರ ಅಂತರಾಷ್ಟ್ರೀಯ ಕಚ್ಚಾ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಮಂಗಳವಾರಕ್ಕಿಂತ ಮೊದಲು ಸತತ ನಾಲ್ಕು ದಿನಗಳವರೆಗೆ ಇಂಧನ ದರದಲ್ಲಿ ಬದಲಾವಣೆ ಕಂಡು ಬಂದಿರಲಿಲ್ಲ. ಇಂದು ಶುಕ್ರವಾರ ಪ್ರತಿ ಲೀಟರ್​ ಪೆಟ್ರೋಲ್​ ದರ ದೆಹಲಿಯಲ್ಲಿ 90.56 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 87.96 ರೂಪಾಯಿ ಇದೆ. ಹಾಗೆಯೇ ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 93.59 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ 85.75 ರೂಪಾಯಿಗೆ ಮಾರಾಟವಾಗುತ್ತಿದೆ.

ಸರಕು ಸಾಗಣೆ ಶುಲ್ಕಗಳ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯಿಂದ ವಿವಿಧ ರಾಜ್ಯಗಳಲ್ಲಿ ಇಂಧನ ಬೆಲೆ ಬದಲಾಗುತ್ತವೆ. ಅಂತರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುನವಾಗಿ ಇಂಧನ ಬೆಲೆಗಳನ್ನು ಪ್ರತಿನಿತ್ಯ ಪರಿಷ್ಕರಿಸಲಾಗುತ್ತದೆ.

ಇಂದು ಶುಕ್ರವಾರ, ಎಪ್ರಿಲ್​ 2ನೇ ತಾರೀಕು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್​ ದರ ಹೇಗಿದೆ ಎಂಬುದನ್ನು ಪರಿಶೀಲಿಸಿದಾಗ ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96.98 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 87.96 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.77 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83.75 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.58 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.88 ರೂಪಾಯಿ ಇದೆ. ಹಾಗೆಯೇ ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 94.16 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ಅನ್ನು 88.20 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ಇನ್ನು, ಭೋಪಾಲ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 98.58 ರೂಪಾಯಿ ಇದ್ದು, ಪ್ರತಿ ಲೀಟರ್​ ಡೀಸೆಲ್​ ದರ 89.13 ರೂಪಾಯಿ ಇದೆ. ಹಾಗೆಯೇ ಪಾಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.89 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 86.12 ರೂಪಾಯಿ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.85 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.27 ರೂಪಾಯಿ ಇದೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.91 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ಅನ್ನು 81.33 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/diesel-price-today.html

ಇದನ್ನೂ ಓದಿ: Petrol Diesel Price: ಗ್ರಾಹಕರು ಕೊಂಚ ನಿರಾಳ.. ಪೆಟ್ರೋಲ್ ದರದಲ್ಲಿ 18 ಪೈಸೆ ಇಳಿಕೆ!

Petrol Diesel Price: ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ದರ ಏರಿಕೆ ಮಾತು.. ದರ ಹೆಚ್ಚಳವಾಗದಂತೆ ಗ್ರಾಹಕರ ಪ್ರಾರ್ಥನೆ

(Petrol Price Today in Bangalore Delhi Mumbai and Chennai Diesel price on 2nd april 2021)