AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rural Housing: ಪಿಎಂ ಗ್ರಾಮೀಣ ಆವಾಸ್ ಯೋಜನೆ ಅಡಿ ಈವರೆಗೆ 40 ಲಕ್ಷ ಮನೆಗಳು ಮಂಜೂರು

PM Awas Yojana Gramin scheme: ಪಿಎಂ ಗ್ರಾಮೀಣ ವಸತಿ ಯೋಜನೆ ಅಡಿ ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳಲ್ಲಿ 46 ಲಕ್ಷ ಮನೆಗಳ ನಿರ್ಮಾಣಕ್ಕೆ ಇಡಲಾಗಿದ್ದ ಗುರಿಯಲ್ಲಿ 39 ಲಕ್ಷ ಮನೆಗಳಿಗೆ ಈವರೆಗೆ ಮಂಜೂರಾತಿ ಆಗಿದೆ. 2024-25ರ ಹಣಕಾಸು ವರ್ಷಕ್ಕೆ 18 ರಾಜ್ಯಗಳಲ್ಲಿ 84 ಲಕ್ಷ ಮನೆಗಳಿಗೆ ಗುರಿ ಮಾಡಲಾಗಿತ್ತು. ಆ ಗುರಿ ಸಾಧನೆ ಬಹುತೇಕ ಆಗಿದೆ. ಪಿಎಂ ಗ್ರಾಮೀಣ ಆವಾಸ್ ಯೋಜನೆಯಲ್ಲಿ ಈವರೆಗೆ ಮೂರು ಕೋಟಿಗೂ ಅಧಿಕ ಮನೆಗಳು ಮಂಜೂರು ಆಗಿವೆ.

Rural Housing: ಪಿಎಂ ಗ್ರಾಮೀಣ ಆವಾಸ್ ಯೋಜನೆ ಅಡಿ ಈವರೆಗೆ 40 ಲಕ್ಷ ಮನೆಗಳು ಮಂಜೂರು
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2025 | 6:16 PM

Share

ನವದೆಹಲಿ, ಫೆಬ್ರುವರಿ 9: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ (ಪಿಎಂಎವೈ-ಜಿ) ಅಡಿ ಒಂಬತ್ತು ರಾಜ್ಯಗಳಲ್ಲಿ ಎರಡು ತಿಂಗಳಲ್ಲಿ ಸುಮಾರು 40 ಲಕ್ಷದಷ್ಟು ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2024-25ರ ಹಣಕಾಸು ವರ್ಷಕ್ಕೆ ಒಟ್ಟು 84.37 ಲಕ್ಷ ಮನೆಗಳಿಗೆ ಗುರಿ ಇಡಲಾಗಿತ್ತು. ಈ ಪೈಕಿ ಈವರೆಗೆ 39.82 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.

2024-25ರ ಆರ್ಥಿಕ ವರ್ಷಕ್ಕೆ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ಗ್ರಾಮೀಣ ಆವಾಸ್ ಯೋಜನೆ ಅಡಿ 84,37,139 ಮನೆಗಳನ್ನು ನಿರ್ಮಿಸಲು ಗುರಿ ನಿಗದಿ ಮಾಡಲಾಗಿತ್ತು. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್, ರಾಜಸ್ಥಾನ, ಒಡಿಶಾ, ಮಣಿಪುರ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಜಾರ್ಖಂಡ್, ಹಿಮಾಚಲಪ್ರದೇಶ, ಹರ್ಯಾಣ, ಗುಜರಾತ್, ಅಸ್ಸಾಂ, ಬಿಹಾರ್ ಮತ್ತು ಛತ್ತೀಸ್​ಗಡ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಈ ಯೋಜನೆಗೆ ಗುರಿ ಇಡಲಾಗಿತ್ತು.

ಇದನ್ನೂ ಓದಿ: ಭಾರತದಿಂದ ಹೊಸ ರಫ್ತು ಮೈಲಿಗಲ್ಲು; ಆಮದು ಹೆಚ್ಚಳವೂ ಶುಭಸೂಚಕವಾ? ಸಚಿವರು ಬಿಚ್ಚಿಟ್ಟ ಸತ್ಯ ಇದು

ಇದೇ ಡಿಸೆಂಬರ್ (2024) ಮತ್ತು ಜನವರಿ (2025) ಈ ಎರಡು ತಿಂಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ 46,56,765 ಮನೆಗಳಿಗೆ ಗುರಿ ಮಾಡಲಾಗಿತ್ತು. ಕರ್ನಾಟಕ, ತಮಿಳುನಾಡು, ಅಸ್ಸಾಂ, ಬಿಹಾರ, ಛತ್ತೀಸ್​ಗಡ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ್ ಈ 9 ರಾಜ್ಯಗಳಲ್ಲಿ 46.57 ಲಕ್ಷ ಮನೆಗಳ ಗುರಿಗೆ ಪ್ರತಿಯಾಗಿ 39,82,764 ಮನೆಗಳಿಗೆ ಸ್ಯಾಂಕ್ಷನ್ ಆಗಿದೆ.

ಏನಿದು ಪಿಎಂ ಆವಾಸ್ ಯೋಜನೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಬಡವರಿಗೆ ಸೂರು ಕಲ್ಪಿಸಲು ಸಹಾಯವಾಗಲು ಸರ್ಕಾರ ಕೈಗೊಂಡಿರುವ ಯೋಜನೆಯಾಗಿದೆ. 2015ರಲ್ಲಿ ಈ ಯೋಜನೆ ಮೊದಲುಗೊಳ್ಳಲಾಯಿತು. ನಗರಗಳಲ್ಲಿರುವ ಬಡವರಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ಇದು. ಹಾಗೆಯೇ, ಗ್ರಾಮೀಣ ಭಾಗದಲ್ಲೂ ಪ್ರತ್ಯೇಕ ಪಿಎಂ ಆವಾಸ್ ಯೋಜನೆ ಇದೆ. ಇಲ್ಲೂ ಕೂಡ ಬಡವರನ್ನು ಈ ಸ್ಕೀಮ್​ನಲ್ಲಿ ಗುರಿ ಮಾಡಲಾಗಿದೆ. ಸರ್ಕಾರವು ಫಲಾಭವಿಗಳಿಗೆ ಮನೆ ನಿರ್ಮಾಣದಲ್ಲಿ ಸಹಾಯಧನ ನೀಡುತ್ತದೆ.

ಇದನ್ನೂ ಓದಿ: ಇನ್ನೈದು ವರ್ಷದಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 9 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ

ನಗರ ಭಾಗದಲ್ಲಿ ಈವರೆಗೆ 1.18 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 90 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಕೇಂದ್ರದಿಂದ 1.67 ಲಕ್ಷ ಕೋಟಿ ರೂ ಅನುದಾನ ಈವರೆಗೆ ಸಿಕ್ಕಿದೆ.

ಇನ್ನು, ಗ್ರಾಮೀಣ ಆವಾಸ್ ಯೋಜನೆ ಅಡಿ ಈವರೆಗೆ 3.37 ಕೋಟಿ ಮನೆಗಳಿಗೆ ಮಂಜೂರಾತಿ ಆಗಿದೆ. ಇದರಲ್ಲಿ 2.69 ಕೋಟಿ ಮನೆಗಳ ನಿರ್ಮಾಣ ಮುಗಿದಿದೆ. 3.49 ಲಕ್ಷ ಕೋಟಿ ಕೋಟಿ ರೂ ಸಹಾಯಧನವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ