PM Kisan 16th Installment Released: ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ; 9 ಕೋಟಿಗೂ ಹೆಚ್ಚು ರೈತರ ಖಾತೆಗೆ 21,000 ಕೋಟಿ ರೂ ವರ್ಗಾವಣೆ
PM Narendra Modi Releases Over 21,000 Cr Money to Farmers Account: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇಂದು ಫೆಬ್ರುವರಿ 28ರಂದು 16ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2,000 ರೂಗಳಂತೆ ಒಟ್ಟು 21,000 ಕೋಟಿ ರೂಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ. 2019ರಿಂದ ಇಲ್ಲಿಯವರೆಗೆ 16 ಕಂತುಗಳಲ್ಲಿ 3 ಲಕ್ಷ ಕೋಟಿ ರೂಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ.
ಮುಂಬೈ, ಫೆಬ್ರುವರಿ 28: ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆ (PM Kisan Samman Nidhi Yojana) ಅಡಿ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 21,000 ಕೋಟಿ ರೂಗೂ ಹೆಚ್ಚಿನ ಮೊತ್ತವನ್ನು ಪ್ರಧಾನಿ ಮೋದಿ ರಿಮೋಟ್ ಬಟನ್ ಒತ್ತುವ ಮೂಲಕ ರವಾನೆ ಮಾಡಿದ್ದಾರೆ. ಅಷ್ಟೂ ಫಲಾನುಭವಿಗಳ ಖಾತೆಗಳಿಗೆ ತಲಾ 2,000 ರೂ ಸಿಗಲಿದೆ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 16 ಕಂತುಗಳನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಐದು ವರ್ಷದಲ್ಲಿ ಒಟ್ಟಾರೆ 3 ಲಕ್ಷ ಕೋಟಿ ರೂ ಹಣ ರೈತರಿಗೆ ಸಿಕ್ಕಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅರ್ಹ ರೈತರಿಗೆ ವರ್ಷಕ್ಕೆ 6,000 ರೂ ಒದಗಿಸುತ್ತದೆ. ನಾಲ್ಕು ತಿಂಗಳಿಗೊಮ್ಮೆಯಂತೆ 2,000 ರೂಗಳನ್ನು ನೀಡಲಾಗುತ್ತದೆ. ಡಿಸೆಂಬರ್ನಿಂದ ಮಾರ್ಚ್ವರೆಗೆ ಒಂದು ಕಂತು, ಏಪ್ರಿಲ್ನಿಂದ ಜುಲೈವರೆಗೆ ಇನ್ನೊಂದು ಕಂತು, ಹಾಗೂ ಆಗಸ್ಟ್ನಿಂದ ನವೆಂಬರ್ವರೆಗೆ ಮಗದೊಂದು ಕಂತು ಹೀಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ರೈತರಿಗೆ ಹಣ ಒದಗಿಸಲಾಗುತ್ತದೆ.
ಕೇಂದ್ರ ಕೃಷಿ ಇಲಾಖೆ ಮಾಡಿರುವ ಟ್ವೀಟ್ ಈ ಕೆಳಗಿನದ್ದು…
माननीय प्रधानमंत्री श्री @narendramodi ने आज महाराष्ट्र के यवतमाल से रिमोट बटन दबाकर #PMKisan सम्मान निधि योजना की 16वीं किस्त के तहत लगभग 9 करोड़ किसानों को ₹21 हजार करोड़ से अधिक की राशि हस्तांतरित की।#PMKisanSammanNidhi #PMKisan16thInstallment @MundaArjun @pmkisanofficial pic.twitter.com/Fi1saNHIuT
— Agriculture INDIA (@AgriGoI) February 28, 2024
ಇದನ್ನೂ ಓದಿ: ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡಲು ಫೆ. 29 ಡೆಡ್ಲೈನ್; ಇನ್ನೊಂದೇ ದಿನ ಬಾಕಿ; ಆನ್ಲೈನ್ನಲ್ಲಿ ಸುಲಭವಾಗಿ ಅಪ್ಡೇಟ್ ಮಾಡಿ
ಇದೀಗ ಪ್ರಧಾನಿ ನರೇಂದ್ರ ಮೋದಿ 16ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಈ ಹಣ ನಿಮ್ಮ ಖಾತೆಗೆ ತಲುಪಿದೆಯಾ ಪರೀಕ್ಷಿಸಿ. ಕೆಲವೊಮ್ಮೆ ಹಣ ತತ್ಕ್ಷಣ ಖಾತೆಗೆ ಬರದೇ ಹೋಗಬಹುದು. ಒಂದು ವಾರದ ಅವಧಿಯೊಳಗೆ ಹಣ ವರ್ಗಾವಣೆ ಆಗಿರುತ್ತದೆ.
ಒಂದು ವೇಳೆ, ನೀವು ಯೋಜನೆಯ ಫಲಾನುಭವಿಯಾಗಿದ್ದೂ ಖಾತೆಗೆ ಹಣ ಸಂದಾಯ ಆಗಿಲ್ಲವೆಂದರೆ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ನಿಮ್ಮ ಬೆನಿಫಿಶಿಯರಿ ಸ್ಟೇಟಸ್ ಪರಿಶೀಲಿಸಿ. ಅದರ ವೆಬ್ಸೈಟ್ ವಿಳಾಸ ಇಂತಿದೆ: pmkisan.gov.in/
ಈ ವೆಬ್ಸೈಟ್ನ ಮುಖ್ಯ ಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅದರಲ್ಲಿ ನೋ ಯುವರ್ ಸ್ಟೇಟಸ್ ಕ್ಲಿಕ್ ಮಾಡಿ. ಇದರಲ್ಲಿ ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಹಾಕಿ ಹುಡುಕಿ ಮಾಹಿತಿ ತಿಳಿಯಬಹುದು.
ಇದನ್ನೂ ಓದಿ: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ
ಹಾಗೆಯೇ, ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡುವ ಮೂಲಕ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದೂ ತಿಳಿಯಬಹುದು. ಅದರಲ್ಲಿ ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Wed, 28 February 24