ಪಿಎಂ ಕಿಸಾನ್ ಸ್ಕೀಮ್; ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ; ನಿಮಗೆ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?

PM Kisan scheme, 22nd installment released: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 22ನೇ ಕಂತಿನ ಹಣ ಬಿಡುಗಡೆ ಆಗಿದೆ. 9.32 ಕೋಟಿ ರೈತರಿಗೆ ಒಟ್ಟು 18,640 ಕೋಟಿ ರೂ ಹಣ ಸಿಕ್ಕಿದೆ. ಕಳೆದ ಬಾರಿಗಿಂತ ಈ ಸಲ ಫಲಾನುಭವಿಗಳ ಸಂಖ್ಯೆಯಲ್ಲಿ 3.8 ಲಕ್ಷದಷ್ಟು ಕಡಿಮೆ ಆಗಿದೆ. ನೀವು ಯೋಜನೆಗೆ ನೊಂದಾಯಿಸಿದ್ದೂ ಹಣ ಬಂದಿಲ್ಲವೆಂದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಪಿಎಂ ಕಿಸಾನ್ ಸ್ಕೀಮ್; ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ; ನಿಮಗೆ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?
ರೈತ

Updated on: Mar 13, 2026 | 8:40 PM

ನವದೆಹಲಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್​ನ ಗುವಾಹಟಿಯಲ್ಲಿ ಇಂದು ಪಿಎಂ ಕಿಸಾನ್ ಸ್ಕೀಮ್​ನಡಿ ((PM Kisan scheme) 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂನಂತೆ ಒಟ್ಟು 18,640 ಕೋಟಿ ರೂ ಹಾಕಲಾಗಿದೆ. ಕಳೆದ ಬಾರಿಗಿಂತ ಈ ಸಲ ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ ಆಗಿದೆ. ಇಕೆವೈಸಿ ಆಗಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಲಕ್ಷಾಂತರ ಮಂದಿಗೆ ಯೋಜನೆಯ ಲಾಭ ಕೈತಪ್ಪಿದೆ. 21ನೇ ಕಂತಿನ ಹಣವನ್ನು 9,35,79,869 ಮಂದಿ ಪಡೆದಿದ್ದರು. ಈ ಬಾರಿ 3.8 ಲಕ್ಷದಷ್ಟು ಸಂಖ್ಯೆ ಕಡಿಮೆ ಆಗಿದೆ.

ಏನಿದು ಪಿಎಂ ಕಿಸಾನ್ ಸ್ಕೀಮ್?

ಪಿಎಂ ಕಿಸಾನ್ ಯೋಜನೆಯು ರೈತರ ವ್ಯವಸಾಯಕ್ಕೆ ಸರ್ಕಾರ ನೀಡುವ ಸಹಾಯಧನದ ಸ್ಕೀಮ್. ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣ ವಿತರಣೆ ಆಗುತ್ತದೆ. ನೇರವಾಗಿ ರೈತರ ಬ್ಯಾಂಕ್ ಅಕೌಂಟ್​ಗಳಿಗೆ ಈ ಹಣ ಜಮೆ ಆಗುತ್ತದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜಿಸಲು ಸರ್ಕಾರದಿಂದ ಹೊಸ ಸಬ್ಸಿಡಿ ಸ್ಕೀಮ್; ಪಿಎಲ್​ಐ ಬದಲು ಹೊಸ ಯೋಜನೆ

ಫಲಾನುಭವಿಯಾಗಿದ್ದೂ ಹಣ ಬಂದಿಲ್ಲವಾ? ಹೀಗೆ ಮಾಡಿ…

ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಹಣ ಇನ್ನೂ ಬಂದಿಲ್ಲ ಎಂದಾದಲ್ಲಿ ಹಲವಾರು ಕಾರಣಗಳಿರುವ ಸಾಧ್ಯತೆ ಇದೆ. ನೀವು ಇಕೆವೈಸಿ ಮಾಡಿಲ್ಲದಿರಬಹುದು, ಯೋಜನೆಗೆ ಅರ್ಹರಲ್ಲದಿರಬಹುದು, ಅಥವಾ ಬೇರೇನೇ ಇರಬಹುದು.

ನಿಮಗೆ ಹಣ ಬಂದಿಲ್ಲದಿದ್ದರೆ ಸ್ಕೀಮ್​ನಲ್ಲಿ ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ. ಈ ಕೆಲಸ ಮಾಡಲು ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ: pmkisan.gov.in/

ಇದನ್ನೂ ಓದಿ: ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಇಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಳ್ಳಿ. ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ನಿಮ್ಮ ಹೆಸರಿದೆಯಾ ನೋಡಿಕೊಳ್ಳಿ. ಇದೇ ವೆಬ್​ಸೈಟ್​ನಲ್ಲಿ ನೀವು ಇಕೆವೈಸಿ ಅಪ್​ಡೇಟ್ ಕೂಡ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 13 March 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us