
ನವದೆಹಲಿ, ಸೆಪ್ಟೆಂಬರ್ 21: ಪಿಎಂ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ರೈತರು ಈಗ 24ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಜೂನ್ ತಿಂಗಳಲ್ಲಿ 23ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಮುಂದಿನ ಕಂತು ಈ ತಿಂಗಳ ಕೊನೆಯಲ್ಲಿ ಬರಬಹುದು, ಅಥವಾ ಅಕ್ಟೋಬರ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಕೆಲ ವರದಿಗಳ ಪ್ರಕಾರ ನವೆಂಬರ್ ತಿಂಗಳಲ್ಲಿ 24ನೇ ಕಂತಿನ ಹಣ ಬಿಡುಗಡೆಯಾಗಬಹುದು.
ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ ಒಟ್ಟು ₹6,000 ನೆರವನ್ನು ನೀಡಲಾಗುತ್ತದೆ. ಇದನ್ನು ತಲಾ ₹2,000 ರಂತೆ ಮೂರು ಕಂತುಗಳಲ್ಲಿ (4 ತಿಂಗಳಿಗೊಮ್ಮೆ) ನೀಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷದ ಮೂರನೇ ಕಂತಿನ (ಅಕ್ಟೋಬರ್-ನವೆಂಬರ್) ಹಣವನ್ನು ಹಬ್ಬಗಳ ಸೀಸನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳ ಮುಷ್ಕರ: ಸೆಪ್ಟೆಂಬರ್ 26ರಿಂದ ಐದು ದಿನಗಳ ಕಾಲ ಬ್ಯಾಂಕುಗಳು ಬಂದ್
ಇ-ಕೆವೈಸಿ ಕಡ್ಡಾಯ (e-KYC): 24ನೇ ಕಂತಿನ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಲು ರೈತರು ತಮ್ಮ ಪಿಎಂ-ಕಿಸಾನ್ ಖಾತೆಗೆ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದು ಕಡ್ಡಾಯ.
ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಮತ್ತು ಎನ್‌ಪಿಸಿಐ (NPCI/Direct Benefit Transfer) ಸಕ್ರಿಯಗೊಂಡಿರುವುದನ್ನು (Active) ರೈತರು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ: ಆಪಲ್ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಎರಡು ತಿಂಗಳಲ್ಲಿ ಎರಡನೇ ಬಾರಿ ಲೇ ಆಫ್
ಆ ಗ್ರಾಮದಲ್ಲಿ ಯಾರೆಲ್ಲಾ ಪಿಎಂ ಕಿಸಾನ್ ಸ್ಕೀಮ್ನ ಫಲಾನುಭವಿಗಳಿದ್ದಾರೋ ಅವರೆಲ್ಲರ ಹೆಸರುಗಳಿರುವ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲಿಸಬಹುದು.
ಗಮನಿಸಿ: ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ ಅಥವಾ ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ನಿಮ್ಮ ಕಂತಿನ ಹಣ ತಡೆಹಿಡಿಯಲ್ಪಡಬಹುದು. ಆದ್ದರಿಂದ ಹತ್ತಿರದ ಸಿಎಸ್‌ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಪಿಎಂ-ಕಿಸಾನ್ ಆಪ್ ಮೂಲಕ ತಕ್ಷಣ ಇ-ಕೆವೈಸಿ ಮುಗಿಸಿಕೊಳ್ಳಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ