ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ?

Investments from Modi's 5-Nation Tour: ಪ್ರಧಾನಿ ಮೋದಿ ಅವರ ಐದು ರಾಷ್ಟ್ರಗಳ (ಯುಎಇ, ನೆದರ್​ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಇಟಲಿ) ಪ್ರವಾಸ ಭಾರತಕ್ಕೆ ₹3.5 ಲಕ್ಷ ಕೋಟಿ (40 ಬಿಲಿಯನ್ ಡಾಲರ್) ಹೂಡಿಕೆ ತರುವಲ್ಲಿ ಯಶಸ್ವಿಯಾಗಿದೆ. ಇಂಧನ ಭದ್ರತೆ ಮತ್ತು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಇದು ಭಾರತದ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ. ಮೋದಿ ಅವರ ವಿದೇಶ ಪ್ರವಾಸದ ಆರ್ಥಿಕ ಪರಿಣಾಮಗಳ ಕುರಿತು ಲೇಖನ ಬೆಳಕು ಚೆಲ್ಲಲಿದೆ.

ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ?
ನರೇಂದ್ರ ಮೋದಿ
Image Credit source: PTI

Updated on: May 21, 2026 | 12:53 PM

ನವದೆಹಲಿ, ಮೇ 21: ಯುಎಇ, ನೆದರ್​ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ಈ ಐದು ದೇಶಗಳಿಗೆ ನರೇಂದ್ರ ಮೋದಿ ನೀಡಿದ ಭೇಟಿ (PM Narendra Modi’s 5 nation tour) ಬಹುತೇಕ ಫಲಪ್ರದವಾಗಿದೆ ಎಂದು ಹೇಳಲಾಗುತ್ತಿದೆ. ಈ ಐದು ದೇಶಗಳ ಪ್ರವಾಸದಿಂದ ಮೋದಿ ಅವರು ಭಾರತಕ್ಕೆ 40 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ) ಹೂಡಿಕೆ ಹರಿದುಬರಲು ನೆರವಾಗಿದ್ದಾರೆ. ಇದರಲ್ಲಿ ಹೊಸ ಹೂಡಿಕೆಗಳು ಸೇರಿವೆ. ಹಾಗೆಯೇ, ಹೆಚ್ಚುವರಿ ಹೂಡಿಕೆಗಳಿಗೂ ಕೆಲ ಕಂಪನಿಗಳು ಬದ್ಧವಾಗಿವೆ.

ಮೋದಿ ಅವರು ಹೂಡಿಕೆಗಳನ್ನು ಸೆಳೆದಿರುವುದು ಮಾತ್ರವಲ್ಲ, ಇಂಧನ ಭದ್ರತೆಗೂ ವ್ಯವಸ್ಥೆ ಬಿಗಿ ಮಾಡಿದ್ದಾರೆ. ಯುಎಇಗೆ ಮೊದಲು ತೆರಳಿದ ಪ್ರಧಾನಿಗಳು ಅಲ್ಲಿ ದೀರ್ಘಾವಧಿ ಎಲ್​ಪಿಜಿ ಪೂರೈಕೆ ಮತ್ತು ಕಚ್ಚಾ ತೈಲ ಸಂಗ್ರಹಕ್ಕೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ನೆದರ್​ಲ್ಯಾಂಡ್ಸ್​ನಲ್ಲಿ ಮೋದಿ ಅವರು ಅಲ್ಲಿಯ ಪ್ರಧಾನಿ ಜೊತೆಗೂಡಿ ವಿವಿಧ ಕ್ಷೇತ್ರಗಳಲ್ಲಿನ 50ಕ್ಕೂ ಹೆಚ್ಚು ಜಾಗತಿಕ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಕಂಪನಿಗಳ ಒಟ್ಟೂ ಮೌಲ್ಯ ಅಂದಾಜು 3 ಟ್ರಿಲಿಯನ್ ಡಾಲರ್​ನಷ್ಟು ಇದೆ. ಈ ಹೆಚ್ಚಿನ ಕಂಪನಿಗಳು ಭಾರತದಲ್ಲಿ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿವೆ. ಭಾರತದಲ್ಲಿ ಅವುಗಳು ಮಾಡಿರುವ ಹೂಡಿಕೆ ಒಟ್ಟು 180 ಬಿಲಿಯನ್ ಡಾಲರ್ ಇರಬಹುದು.

ವಿವಿಧ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು 17 ಒಪ್ಪಂದಗಳನ್ನು ಮಾಡಿಕೊಂಡಿವೆ. ಇದರಲ್ಲಿ ಪ್ರಮುಖವಾದುದು ಎಎಸ್​ಎಂಎಲ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ನಡುವಿನ ಸೆಮಿಕಂಡಕ್ಟರ್ ಡೀಲ್. ಎಎಸ್​ಎಂಎಲ್ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪಿಸಲು ಟಾಟಾ ಎಲೆಕ್ಟ್ರಾನಿಕ್ಸ್​ಗೆ ನೆರವಾಗಲಿದೆ. ಈ ಬೆಳವಣಿಗೆ ಭಾರತದ ಮಟ್ಟಿಗೆ ಐತಿಹಾಸಿಕವೆನಿಸಿದೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ 40 ಬಿಲಿಯನ್ ಡಾಲರ್ ಮೊತ್ತದಷ್ಟು ಹೂಡಿಕೆಗಳು ಭಾರತಕ್ಕೆ ಹರಿದುಬರಲು ಸಿದ್ಧವಾಗಿರುವುದು ಗಮನಾರ್ಹ. ಜಾಗತಿಕ ಹೂಡಿಕೆಗಳಿಗೆ ಭಾರತವು ಆದ್ಯತಾ ರಾಷ್ಟ್ರಗಳಲ್ಲಿ ಒಂದೆನಿಸಿರುವುದು ಗಮನಾರ್ಹ. ಹಾಗೆಯೇ, ವಿದೇಶ ಪ್ರವಾಸ ಮಾಡಬೇಡಿರೆಂದು ಸಾಮಾನ್ಯ ಜನರಿಗೆ ಹೇಳುವ ಪ್ರಧಾನಿಗಳು ತಾವೇ ಖುದ್ದಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಈ ಸಂಭಾವ್ಯ ಹೂಡಿಕೆಗಳೇ ಉತ್ತರವೆನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us