ಪಿಎಂ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಆದ್ಯತೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

PM Mudra Yojana: ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಮುದ್ರಾ ಯೋಜನೆ ಸ್ಕೀಮ್​ನಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭಾನುವಾರ ಹೇಳಿದ್ದಾರೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಪಿಎಂ ಸ್ವನಿಧಿ ಸೆ ಸಮೃದ್ಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ ಮಾಡಿದ ನಿರ್ಮಲಾ ಸೀತಾರಾಮ್, ಪಿಎಂ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ದಿಮೆದಾರರಿಗೆ ಹೇಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

ಪಿಎಂ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಆದ್ಯತೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
|

Updated on: Nov 19, 2023 | 6:34 PM

ರಾಮೇಶ್ವರಂ, ನವೆಂಬರ್ 19: ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಮುದ್ರಾ ಯೋಜನೆ ಸ್ಕೀಮ್​ನಲ್ಲಿ (PM Mudra Yojana) ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭಾನುವಾರ ಹೇಳಿದ್ದಾರೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಪಿಎಂ ಸ್ವನಿಧಿ ಸೆ ಸಮೃದ್ಧಿ (PM SVANidhi Se Samriddhi) ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ ಮಾಡಿದ ನಿರ್ಮಲಾ ಸೀತಾರಾಮ್, ಪಿಎಂ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ದಿಮೆದಾರರಿಗೆ ಹೇಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

‘ಪಿಎಂ ಮುದ್ರಾ ಯೋಜನೆಯ ಒಂದು ಪ್ರಮುಖ ಅಂಶ ಎಂದರೆ ಸಣ್ಣ ಉದ್ದಿಮೆ ನಡೆಸುತ್ತಿರುವ ಅಥವಾ ಹೊಸ ಉದ್ದಿಮೆ ಆರಂಭಿಸುವ ಆಸಕ್ತಿ ಹೊಂದಿರುವ ಮಹಿಳೆಯರು ಬ್ಯಾಂಕ್​ಗೆ ಹೋಗಿ ಪಿಎಂ ಮುದ್ರಾ ಯೋಜನೆ ಅಡಿ ಸಾಲ ಪಡೆಯಬಹುದು. ಈ ಯೋಜನೆಯಲ್ಲಿ 100 ಮಂದಿ ಫಲಾನುಭವಿಗಳ ಪೈಕಿ 60 ಮಂದಿ ಮಹಿಳೆಯರಿರುತ್ತಾರೆ. ಪಿಎಂ ಮುದ್ರಾ ಸ್ಕೀಮ್​ನಲ್ಲಿ ಮಹಿಳೆಯರಿಗೆ ಆದ್ಯತೆ ಕೊಡಲಾಗಿದೆ,’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಮೈಲಿಗಲ್ಲು; 4 ಟ್ರಿಲಿಯನ್ ಗಡಿ ದಾಟಿದ ಜಿಡಿಪಿ; ಭಾರತ ಈಗ ವಿಶ್ವದ ನಂಬರ್ 4

ಪಿಎಂ ಮುದ್ರಾ ಯೋಜನೆಯನ್ನು 2015ರ ಎಪ್ರಿಲ್ 8ರಂದು ಆರಂಭಿಸಲಾಗಿದೆ. ಕಾರ್ಪೊರೇಟ್ ಅಲ್ಲದ, ಕೃಷಿ ಅಲ್ಲದ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಇರುವ ಸ್ಕೀಮ್ ಇದಾಗಿದೆ. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ 10 ಲಕ್ಷ ರೂವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತದೆ.

ಸ್ವನಿಧಿ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ

ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 50,000 ರೂವರೆಗೂ ಸಾಲ ಸಿಗುತ್ತದೆ. ಮೊದಲಿಗೆ ಒಬ್ಬ ಫಲಾನುಭವಿ 10,000 ರೂ ಸಾಲ ಪಡೆಯಬಹುದು. ಅದನ್ನು ಸಕಾಲದಲ್ಲಿ ಮರುಪಾವತಿಸಿದರೆ, 20 ಸಾವಿರ ರೂ ಮೊತ್ತದ ಹೊಸ ಸಾಲ ಪಡೆಯಬಹುದು. ಅದನ್ನೂ ಮರಳಿಸಿದರೆ 50,000 ರೂವರೆಗೂ ಸಾಲ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ