2014ಕ್ಕೆ ಮುಂಚಿನ ವೇಗ ಇದ್ದಿದ್ದರೆ ಪುಣೆಯಂಥ ನಗರಗಳಿಗೆ ಮೆಟ್ರೋ ಬರಲು ದಶಕಗಳೇ ಆಗುತ್ತಿತ್ತು: ಪ್ರಧಾನಿ ಟಾಂಟ್

ಭಾರತದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಅಗಾಧ ಬದಲಾವಣೆಯಾಗಿದೆ. ಮೆಟ್ರೋ ಜಾಲ ಗಣನೀಯವಾಗಿ ವಿಸ್ತರಣೆ ಆಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಮೆಟ್ರೋ ಜಾಲವು 2014ರಲ್ಲಿದ್ದ 248 ಕಿ.ಮೀ ನಿಂದ ಇಂದು 26 ನಗರಗಳಲ್ಲಿ ಸುಮಾರು 1,200 ಕಿ.ಮೀಗೆ ವಿಸ್ತರಿಸಿದೆ ಎಂದು ಮೋದಿ ತಿಳಿಸಿದ್ದಾರೆ. ಮೆಟ್ರೋದಲ್ಲಿ ನಿತ್ಯವೂ ಒಂದು ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಯ ಕಡಿಮೆಗೊಂಡಿದೆ ಎಂದಿದ್ದಾರೆ.

2014ಕ್ಕೆ ಮುಂಚಿನ ವೇಗ ಇದ್ದಿದ್ದರೆ ಪುಣೆಯಂಥ ನಗರಗಳಿಗೆ ಮೆಟ್ರೋ ಬರಲು ದಶಕಗಳೇ ಆಗುತ್ತಿತ್ತು: ಪ್ರಧಾನಿ ಟಾಂಟ್
ನರೇಂದ್ರ ಮೋದಿ ಅವರ ಸಾಂದರ್ಭಿಕ ಚಿತ್ರ
Image Credit source: PTI

Updated on: Nov 05, 2026 | 1:44 PM

ನವದೆಹಲಿ, ನವೆಂಬರ್ 5: ಭಾರತದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಆಗಿರುವ ಅಭೂತಪೂರ್ವ ಬದಲಾವಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ (X) ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ದೇಶದಲ್ಲಿ ಮೆಟ್ರೋ ನೆಟ್ವರ್ಕ್ ಅದ್ವಿತೀಯ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವುದನ್ನು ಪ್ರಶಂಸಿಸಿರುವ ಅವರು, ಹಿಂದಿನ ಯುಪಿಎ ಅವಧಿಯಲ್ಲಿದ್ದ ಮೆಟ್ರೋ ವಿಸ್ತರಣೆ ವೇಗಕ್ಕೆ ತುಲನೆ ಮಾಡಿ ಟಾಂಟ್ ಕೊಟ್ಟಿದ್ದಾರೆ. 2014ಕ್ಕೂ ಮೊದಲು ಇದ್ದ ವೇಗದಲ್ಲಿಯೇ ಮೆಟ್ರೋ ಜಾಲವು ಬೆಳೆದಿದ್ದರೆ ಪುಣೆಯಂತಹ ನಗರಗಳು ಮೆಟ್ರೋ ಪಡೆಯಲು ಎಷ್ಟು ಬೇಕಾಗುತ್ತಿತ್ತು ಎಂದು ಕೇಳಿರುವ ಅವರು, ಅದಕ್ಕಾಗಿ ವರ್ಷಗಳಲ್ಲ, ದಶಕಗಳೇ ಕಾಯಬೇಕಾಗುತ್ತಿತ್ತು ಎಂದು ತಿಳಿಸಿದ್ದಾರೆ.

2014ರಲ್ಲಿ ದೇಶದ ಕೇವಲ 5 ನಗರಗಳಲ್ಲಿ ಮಾತ್ರ 248 ಕಿ.ಮೀ ಉದ್ದದ ಮೆಟ್ರೋ ಮಾರ್ಗಗಳಿದ್ದವು. ಆದರೆ ಇಂದು ದೇಶದ 26 ನಗರಗಳಲ್ಲಿ ಸುಮಾರು 1,200 ಕಿ.ಮೀವರೆಗೆ ಮೆಟ್ರೋ ಜಾಲವು ವಿಸ್ತರಿಸಿದೆ. ಪ್ರಸ್ತುತ ಪ್ರತಿದಿನ 1 ಕೋಟಿಗೂ ಹೆಚ್ಚು ಜನರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಪ್ರಧಾನಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

Loading...

ಇದನ್ನೂ ಓದಿ: ಶಕ್ತಿ ಸಂಗ್ರಹಣೆ, ವಿಸ್ತಾರ್, ಖನಿಜ ಸಂಸ್ಕರಣೆ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ

ನಗರ ಜೀವನದ ಗುಣಮಟ್ಟದಲ್ಲಿ ಸುಧಾರಣೆ: ಮೋದಿ

ಈ ಮೆಟ್ರೋ ಕ್ರಾಂತಿಯು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಿಲ್ಲದೆ, ಜನರ ಅಮೂಲ್ಯ ಸಮಯವನ್ನು ಉಳಿಸುತ್ತಿದೆ, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತಿದೆ, ಕುಟುಂಬದೊಂದಿಗೆ ಕಳೆಯಲು ಹೆಚ್ಚಿನ ಸಮಯ ಸಿಗುವಂತೆ ಮಾಡುತ್ತಿದೆ ಹಾಗೂ ಉತ್ಪಾದಕತೆ ಮತ್ತು ಅವಕಾಶಗಳನ್ನು ಹೆಚ್ಚಿಸುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪಿಎಂ ಮೋದಿ ಅವರ ಎಕ್ಸ್ ಪೋಸ್ಟ್

ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ

ಇತ್ತೀಚೆಗೆ ಸುಮಾರು 21,800 ಕೋಟಿ ರೂ ವೆಚ್ಚದ ಪುಣೆ ಮೆಟ್ರೋ ಯೋಜನೆಗಳನ್ನು (ಪಿಂಕ್ ಲೈನ್ ಉದ್ಘಾಟನೆ ಹಾಗೂ ಹಂತ-2 ರ ಶಂಕುಸ್ಥಾಪನೆ) ಪ್ರಧಾನಿಯವರು ಲೋಕಾರ್ಪಣೆಗೊಳಿಸಿದ್ದಾರೆ. ಇದು ಹಿಂಜೆವಾಡಿ ಐಟಿ ಹಬ್ ಸೇರಿದಂತೆ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us