AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2,000 ರೂಪಾಯಿ ನೋಟುಗಳ ಪ್ರಮಾಣ ಕ್ರಮೇಣ ಕಡಿಮೆ ಆಗಲಿದೆಯೇ? ವಿವರ ಇಲ್ಲಿದೆ

RBI: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಿಡುಗಡೆಯಾಗಿದೆ. ಅದರಂತೆ, ಆರ್​ಬಿಐ ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದೇ ಒಂದು 2,000 ರೂಪಾಯಿ ನೋಟನ್ನು ಮುದ್ರಣ ಮಾಡುವುದಿಲ್ಲ.

2,000 ರೂಪಾಯಿ ನೋಟುಗಳ ಪ್ರಮಾಣ ಕ್ರಮೇಣ ಕಡಿಮೆ ಆಗಲಿದೆಯೇ? ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 27, 2021 | 10:19 PM

Share

ನರೇಂದ್ರ ಮೋದಿ ಸರ್ಕಾರ 2016 ನವೆಂಬರ್​ನಲ್ಲಿ ತುರ್ತಾಗಿ ಡಿಮಾನಿಟೈಸೇಷನ್ ಮಾಡುವ ತೀರ್ಮಾನ ಕೈಗೊಂಡಿತು. ಅದರಂತೆ, 500 ಮತ್ತು 1,000 ರೂಪಾಯಿ ನೋಟುಗಳನ್ನು ಚಲಾವಣೆಯನ್ನು ಅಮಾನ್ಯೀಕರಣ ಮಾಡಲಾಯಿತು. ಕಪ್ಪು ಹಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು. ನೋಟು ಅಮಾನ್ಯೀಕರಣ ಮಾಡಿದ ನಾಲ್ಕು ದಿನಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ 500 ಮತ್ತು 2,000 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತು. ಆದರೆ, ಆರ್​ಬಿಐ ಕ್ರಮೇಣ 2,000 ರೂಪಾಯಿ ನೋಟುಗಳ ಚಲಾವಣೆಯನ್ನು ಕೂಡ ಕಡಿಮೆ ಮಾಡುವತ್ತ ಗಮನ ಹರಿಸಿದೆ.

ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಿಡುಗಡೆಯಾಗಿದೆ. ಅದರಂತೆ, ಆರ್​ಬಿಐ ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದೇ ಒಂದು 2,000 ರೂಪಾಯಿ ನೋಟನ್ನು ಮುದ್ರಣ ಮಾಡುವುದಿಲ್ಲ. ಈ ವರದಿಯಂತೆ, 2020- 21 ನೇ ಸಾಲಿನ ಹಣಕಾಸು ವರ್ಷದಲ್ಲಿ ಇರುವ ಪೇಪರ್ ಕರೆನ್ಸಿ ಒಟ್ಟು 2,23,301 ಲಕ್ಷ ನೋಟುಗಳು. ಈ ಹಿಂದಿನ ಹಣಕಾಸು ವರ್ಷ ಅಂದರೆ 2019- 20 ರಲ್ಲಿ ಈ ಸಂಖ್ಯೆ 2,23,875 ಲಕ್ಷ ನೋಟುಗಳು ಆಗಿತ್ತು. ಕರೆನ್ಸಿ ಚಲಾವಣೆ ಪ್ರಮಾಣದಲ್ಲಿ 500 ಮತ್ತು 2,000 ರೂಪಾಯಿ ನೋಟುಗಳ ಪ್ರಮಾಣವೇ 85.70 ಶೇಕಡಾ ಇತ್ತು. ಅದರಲ್ಲಿ 500ರ ನೋಟುಗಳ ಪ್ರಮಾಣ ಶೇಕಡಾ 31.10. ಮಾರ್ಚ್ 2021 ರಲ್ಲಿ ಲೋಕಸಭೆಯಲ್ಲಿ ಮತ್ತೊಂದು ಮಾಹಿತಿ ನೀಡಲಾಗಿತ್ತು. ಅದರಂತೆ, ಕಳೆದ ಎರಡು ವರ್ಷಗಳಲ್ಲಿ ಹೊಸ 2,000 ರೂಪಾಯಿ ನೋಟು ಪ್ರಿಂಟ್ ಆಗಿಲ್ಲ.

2,000 ರೂಪಾಯಿ ನೋಟುಗಳ ಸಂಖ್ಯೆ ಇಳಿಕೆ ಆಗುತ್ತಿದೆ ಆಗಿನ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕುರ್ ಹೇಳಿದಂತೆ, ಮಾರ್ಚ್ 30, 2018 ರಲ್ಲಿ ಒಟ್ಟು ಕರೆನ್ಸಿ ಚಲಾವಣೆಯಲ್ಲಿ ಒಟ್ಟು 3,362 ಮಿಲಿಯನ್ ನೋಟುಗಳು 2,000 ದ್ದು ಆಗಿದ್ದವು. ಅಂದರೆ ಅದು ಒಟ್ಟು ಕರೆನ್ಸಿ ಪೈಕಿ 3.27 ಶೇಕಡಾ ಆಗಿತ್ತು. ವಹಿವಾಟು ಪ್ರಮಾಣವನ್ನು ನೋಡಿದರೆ ಇದು 37.26 ಶೇಕಡಾ ಆಗಿತ್ತು. ಫೆಬ್ರವರಿ 26, 2021 ರ ವಿವರದಂತೆ 2,000 ರೂಪಾಯಿ ನೋಟುಗಳ ಸಂಖ್ಯೆ 2,499 ಮಿಲಿಯನ್​ಗೆ ಇಳಿಕೆ ಆಗಿತ್ತು. ಅಂದರೆ ಒಟ್ಟು ನೋಟುಗಳ ಪೈಕಿ 2.01 ಶೇಕಡಾ ಮತ್ತು ವಹಿವಾಟಿನಲ್ಲಿ 17.78 ಶೇಕಡಾ ಮಾತ್ರ.

ಏಪ್ರಿಲ್ 2019 ರಲ್ಲಿ 2,000 ರೂಪಾಯಿ ನೋಟ್ ಮುದ್ರಣ ಸ್ಥಗಿತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2019 ರಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತೆ, 2016- 17 ಹಣಕಾಸು ವರ್ಷದಲ್ಲಿ (ಏಪ್ರಿಲ್ 2016- ಮಾರ್ಚ್ 2017) 2,000 ರೂಪಾಯಿಯ 3,542.991 ಮಿಲಿಯನ್ 2,000 ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಲಾಗಿದೆ. ಆದರೆ, ಮುಂದಿನ ಹಣಕಾಸು ವರ್ಷ ಅಂದರೆ 2017- 18 ಅವಧಿಯಲ್ಲಿ ಕೇವಲ 111.507 ಮಿಲಿಯನ್ 2,000 ರೂಪಾಯಿ ನೋಟುಗಳು ಮಾತ್ರ ಪ್ರಿಂಟ್ ಆಗಿವೆ. ಮುಂದಿನ ಅಂದರೆ, 2018- 19 ಹಣಕಾಸು ವರ್ಷದಲ್ಲಿ ಕೇವಲ 46.690 ಮಿಲಿಯನ್ 2,000 ರೂಪಾಯಿ ನೋಟುಗಳು ಮುದ್ರಣವಾಗಿದೆ. ಏಪ್ರಿಲ್, 2019ರ ಬಳಿಕ ಒಂದೇ ಒಂದು 2,000 ರೂಪಾಯಿ ನೋಟ್ ಪ್ರಿಂಟ್ ಆಗಿಲ್ಲ. ಮಾರ್ಚ್ 2022ರ ವರೆಗೆ ಒಂದೇ ಒಂದು 2,000 ರೂಪಾಯಿ ನೋಟ್ ಪ್ರಿಂಟ್ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಅತಿ ಹೆಚ್ಚು ಚಲಾವಣೆಯಲ್ಲಿದೆ 500 ರೂಪಾಯಿ ನೋಟು ಆರ್​ಬಿಐ 2,000 ರೂಪಾಯಿ ನೋಟುಗಳನ್ನು ಮುದ್ರಿಸುತ್ತಿಲ್ಲ. ಅಂದರೆ ಬದಲಾಗಿ ಮತ್ತೊಂದು ನೋಟು ಪ್ರಿಂಟ್ ಆಗುತ್ತಿದೆ ಎಂದು ಅಂದುಕೊಳ್ಳಬಹುದು. ಮಿಂಟ್ ಸುದ್ದಿ ಸಂಸ್ಥೆ ವರದಿಯ ಪ್ರಕಾರ, 2,000 ರೂಪಾಯಿ ನೋಟುಗಳ ಸ್ಥಾನವನ್ನು 200 ಮತ್ತು 500 ರೂಪಾಯಿ ನೋಟುಗಳು ಪಡೆದುಕೊಂಡಿವೆ. 2017 ಮಾರ್ಚ್​ನಲ್ಲಿ 500 ರೂಪಾಯಿ ನೋಟುಗಳ ಪ್ರಮಾಣ 5.9 ಶೇಕಡಾ ಆಗಿತ್ತು. ಅದು ಮಾರ್ಚ್ 2019 ರಲ್ಲಿ 19.80 ಶೇಕಡಾಗೆ ಏರಿಕೆ ಆಗಿದೆ.

ಇದನ್ನೂ ಓದಿ: Bank Holidays in September: ಬ್ಯಾಂಕ್ ಗ್ರಾಹಕರೇ ಗಮನಿಸಿ; ಸೆಪ್ಟೆಂಬರ್​ನಲ್ಲಿದೆ 12 ಸಾಲು ಸಾಲು ರಜೆಗಳು

ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್​; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ