Inox-PVR Merger: ಐನಾಕ್ಸ್- ಪಿವಿಆರ್​ ಮಹಾವಿಲೀನ; ಆಗಲಿದೆ 1500ಕ್ಕೂ ಹೆಚ್ಚು ತೆರೆಗಳುಳ್ಳ ಸಿನಿಮಾ ಪ್ರದರ್ಶಕ ಸಂಸ್ಥೆ

ಪಿವಿಆರ್​ ಮತ್ತು ಐನಾಕ್ಸ್ ಲೀಷರ್ ಲಿ,ಮಿಟೆಡ್ ವಿಲೀನದ ಬಗ್ಗೆ ಘೋಷಣೆ ಮಾಡಲಾಗಿದೆ. ಒಟ್ಟು ಎಷ್ಟು ಸ್ಕ್ರೀನ್ ಆಗಲಿದೆ ಎಂಬುದು ಗೊತ್ತೆ? ಇಲ್ಲಿದೆ ವಿವರ.

Inox-PVR Merger: ಐನಾಕ್ಸ್- ಪಿವಿಆರ್​ ಮಹಾವಿಲೀನ; ಆಗಲಿದೆ 1500ಕ್ಕೂ ಹೆಚ್ಚು ತೆರೆಗಳುಳ್ಳ ಸಿನಿಮಾ ಪ್ರದರ್ಶಕ ಸಂಸ್ಥೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 28, 2022 | 8:26 PM

ಭಾರತದ ಎರಡು ಟಾಪ್ ಎರಡು ಮಲ್ಟಿಪ್ಲೆಕ್ಸ್​ ಜಾಲಗಳಾದ ಪಿವಿಆರ್​ ಲಿಮಿಟೆಡ್ (PVR) ಮತ್ತು ಐನಾಕ್ಸ್ ಲೀಷರ್ ಲಿಮಿಟೆಡ್​ ಮಂಡಳಿಯು ಕಂಪೆನಿಯ ಸ್ಟಾಕ್​ ವಿಲೀನಕ್ಕೆ ಭಾನುವಾರ ಒಪ್ಪಿಕೊಂಡಿದ್ದು, ಈ ಮೂಲಕ 1500ಕ್ಕೂ ಹೆಚ್ಚು ತೆರೆಗಳುಳ್ಳ ಅತಿ ದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆಯಾಗಿದೆ. ಈಗಿನ ಮಲ್ಟಿಪ್ಲೆಕ್ಸ್​ ತೆರೆಗಳು ಅದೇ ಬ್ರ್ಯಾಂಡ್​ಗಳನ್ನು ಹಾಗೇ ಉಳಿಸಿಕೊಳ್ಳಲಿದ್ದು, ವಿಲೀನದ ನಂತರ ಇನ್ನು ಮುಂದೆ ಆರಂಭವಾಗಲಿರುವುದಕ್ಕೆ ಪಿವಿಆರ್​ ಐನಾಕ್ಸ್ ಎಂದು ಬ್ರ್ಯಾಂಡ್ ಆಗಲಿದೆ ಎಂದು ಭಾನುವಾರದಂದು ವಿನಿಮಯ ಕೇಂದ್ರಕ್ಕೆ ಪಿವಿಆರ್​ ಹೇಳಿದೆ. ವಿಲೀನವಾದ ಸಂಸ್ಥೆಯನ್ನು ಪಿವಿಆರ್​ ಐನಾಕ್ಸ್ ಲಿಮಿಟೆಡ್​ ಎಂದು ಕರೆಯಲಾಗುವುದು. ವಿಲೀನದ ನಂತರ, ಐನಾಕ್ಸ್​ ಪ್ರವರ್ತಕರು ಹೊಸ ಸಂಸ್ಥೆಯೊಳಗೆ ಶೇ 16.66ರಷ್ಟು ಪಾಲನ್ನು ಹೊಂದಿರಲಿದೆ. ಪಿವಿಆರ್​ ಸ್ಥಾಪಕರು ಶೇ 10.62ರಷ್ಟು ಮಾಲೀಕತ್ವ ಇರಿಸಿಕೊಳ್ಳಲಿದ್ದಾರೆ. ಪಿವಿಆರ್​ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಬಿಜಿಲಿ ವಿಲೀನವಾದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರಲಿದ್ದು, ಸಂಜೀವ್​ ಕುಮಾರ್​ ಬಿಜಿಲಿ ಕಾರ್ಯ ನಿರ್ವಾಹಕ ನಿರ್ದೇಶಕ ಆಗಲಿದ್ದಾರೆ.

ಐನಾಕ್ಸ್​ನ ಮುಖ್ಯಸ್ಥ ಆಗಿರುವ ಪವನ್ ಕುಮಾರ್​ ಜೈನ್ ಅವರನ್ನು ಕಾರ್ಯ- ನಿರ್ವಾಹಕೇತರ ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು. ಐನಾಕ್ಸ್ ನಿರ್ದೇಶಕ ಸಿದ್ಧಾರ್ಥ್ ಜೈನ್ ಅವರು ಒಗ್ಗೂಡಿದ ಸಂಸ್ಥೆಯಲ್ಲಿ ಕಾರ್ಯ ನಿರ್ವಾಹಕೇತರ ಅಧಿಕಾರಿ ಹಾಗೂ ಸ್ವತಂತ್ರ ಅಲ್ಲದ ನಿರ್ದೇಶಕರಾಗಿ ನೇಮಕರಾಗಲಿದ್ದಾರೆ. ವಿಲೀನವಾದ ಕಂಪೆನಿಯ ಆಡಳಿತ ಮಂಡಳಿಯಲ್ಲಿ 10 ನಿರ್ದೇಶಕರು ಇರಲಿದ್ದು, ಪ್ರವರ್ತಕರ ಎರಡು ಕಡೆಯ ಕುಟುಂಬಗಳು ತಲಾ ಎರಡು ಮಂಡಳಿಯ ಸ್ಥಾನಗಳೊಂದಿಗೆ ಸಮಾನವಾಗಿ ಪ್ರತಿನಿಧಿಸುತ್ತವೆ. ಕೊರೊನಾ ಕಾರಣದಿಂದಾಗಿ ಚಿತ್ರಮಂದಿರಗಳನ್ನು ಮುಚ್ಚಲಾಗುತ್ತಿದೆ. ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆ ಏರಿಕೆ ನಂತರ ಉದ್ಯಮದಲ್ಲಿ ಬಲವರ್ಧನೆಯು ಬರುತ್ತಿದೆ. ದೀರ್ಘಾವಧಿಗೆ ಮುಚ್ಚಿದ್ದರಿಂದಾಗಿ ಉಂಟಾದ ನಗದು ಕೊರತೆಯು ಹೊಸ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಈ ಸಿನಿಮಾ ಜಾಲಗಳಿಗೆ ಕಠಿಣವಾಗಿದೆ ಮತ್ತು ಸ್ಕ್ರೀನ್​ ಸಂಖ್ಯೆಯನ್ನು ಹೆಚ್ಚಿಸಲು ಪ್ರತಿಸ್ಪರ್ಧಿಗಳೊಂದಿಗೆ ಪಾಲುದಾರರಾಗಲು ಸುಲಭವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

“(ಚಲನಚಿತ್ರ ಪ್ರದರ್ಶನ) ಉದ್ಯಮವು ಕೊರೊನಾದಿಂದ ಪ್ರಭಾವಿತವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಶೂನ್ಯ ಆದಾಯಕ್ಕೆ ಇಳಿದ ಪ್ರಪಂಚದಾದ್ಯಂತದ ಕೆಲವೇ ವ್ಯವಹಾರಗಳಲ್ಲಿ ಇದೂ ಒಂದಾಗಿದೆ. ಆದರೂ ನಾವು ವ್ಯವಹಾರದ ದೀರ್ಘಾವಧಿ ಸಾಧ್ಯತೆಯನ್ನು ನಂಬುತ್ತೇವೆ ಮತ್ತು ವಿಲೀನಗಳು ಯಾವಾಗಲೂ ಸಿದ್ಧವಾಗಿ ಇರುತ್ತವೆ. ಏಕೆಂದರೆ ಈ ಉದ್ಯಮವು ಬಲವರ್ಧನೆ ಮತ್ತು ಪ್ರಮಾಣದ ಬಗ್ಗೆಯೇ ಆಗಿರುತ್ತದೆ,” ಎಂದು ಪಿವಿಆರ್​ನ ಅಜಯ್ ಬಿಜಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ವಿಲೀನವು ಕಳೆದ ಎರಡು ವರ್ಷಗಳ ನಷ್ಟವನ್ನು ಸರಿದೂಗಿಸಲು ಉದ್ಯಮಕ್ಕೆ ಉತ್ತೇಜನ ನೀಡುತ್ತದೆ ಮತ್ತು ಹೆಚ್ಚಿನ ಸಿನಿಮಾ ಓಪನಿಂಗ್‌ಗಳ ರೂಪದಲ್ಲಿ ಅಳತೆಯನ್ನು ನಿರ್ಮಿಸುತ್ತದೆ ಎಂದು ಬಿಜಿಲಿ ಹೇಳಿದ್ದಾರೆ. ಆದರೂ ಈ ಉದ್ಯಮಕ್ಕೆ ಸವಾಲುಗಳು ಓವರ್-ದ-ಟಾಪ್ (OTT) ವೀಡಿಯೊ ಸ್ಟ್ರೀಮಿಂಗ್ ರೂಪದಲ್ಲಿ ಇವೆ ಎಂದು ಬಿಜಿಲಿ ಹೇಳಿದ್ದು ಮತ್ತು ಗ್ರಾಹಕರು ಈಗ ಮನೆಯಲ್ಲಿ ಕಂಟೆಂಟ್ ವೀಕ್ಷಿಸಲು ಬಳಸುತ್ತಾರೆ.

ವಿಲೀನಗೊಂಡ ಕಂಪೆನಿಯು 341 ಆಸ್ತಿಗಳು ಮತ್ತು 109 ನಗರಗಳಲ್ಲಿ 1,546 ಪರದೆಗಳನ್ನು ನಿರ್ವಹಿಸುತ್ತದೆ. ವಿಲೀನವು ಐನಾಕ್ಸ್ ಮತ್ತು ಪಿವಿಆರ್ ಮತ್ತು ಇತರ ನಿಯಂತ್ರಕರ ಷೇರುದಾರರಿಂದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಎರಡು ಕಂಪೆನಿಗಳು ಹೇಳಿಕೆಯಲ್ಲಿ ತಿಳಿಸಿವೆ.

ಇದನ್ನೂ ಓದಿ: Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್