ಜೆಟ್ ಇಂಧನ: ವಿದೇಶೀ ಏರ್ಲೈನ್ಸ್​ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್​ಗಳಿಗೆ ಶೇ. 8.5 ಏರಿಕೆ

International airlines see double fuel hike: ವಿಮಾನಗಳಿಗೆ ಇಂಧನವಾಗಿ ಬಳಸುವ ಏವಿಯೇಶನ್ ಟರ್ಬೈನ್ ಫುಯಲ್ ಅಥವಾ ಜೆಟ್ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ. ವಿದೇಶೀ ಏರ್ಲೈನ್ಸ್ ಸಂಸ್ಥೆಗಳಿಗೆ ಜೆಟ್ ಇಂಧನದ ಬೆಲೆ ಎರಡು ಪಟ್ಟು ಹೆಚ್ಚಿಸಲಾಗಿದೆ. ದೇಶೀಯ ವಿಮಾನಗಳಿಗೆ ಜೆಟ್ ಇಂಧನದ ಬೆಲೆ ಶೇ. 8.5ರಷ್ಟು ಹೆಚ್ಚಿಸಲಾಗಿದೆ.

ಜೆಟ್ ಇಂಧನ: ವಿದೇಶೀ ಏರ್ಲೈನ್ಸ್​ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್​ಗಳಿಗೆ ಶೇ. 8.5 ಏರಿಕೆ
ಫ್ಲೈಟ್
Image Credit source: Shutterstock

Updated on: Apr 01, 2026 | 3:16 PM

ನವದೆಹಲಿ, ಏಪ್ರಿಲ್ 1: ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಕ್ಕೆ ಬಳಸುವ ಎಟಿಎಫ್ ಅಥವಾ ಜೆಟ್ ಇಂಧನದ ಬೆಲೆ ಏಪ್ರಿಲ್ 1ರಂದು ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಇಂದು ಎಟಿಎಫ್ ಬೆಲೆ (ATF price) ಎರಡು ಪಟ್ಟು ಏರಿಕೆ ಮಾಡಲಾಗಿತ್ತು. ದೆಹಲಿಯಲ್ಲಿ ಕಿಲೋಲೀಟರ್​ಗೆ ಒಂದು ಲಕ್ಷ ರೂಗಿಂತ ಕಡಿಮೆ ಇದ್ದ ಎಟಿಎಫ್ ಇಂಧನದ ಬೆಲೆಯನ್ನು 2.07 ಲಕ್ಷ ರೂಗೆ ಏರಿಸಲಾಯಿತು. ಬಳಿಕ ಸರ್ಕಾರ ಆ ಬೆಲೆ ಕೂಡಲೇ ಪರಿಷ್ಕರಿಸಿ 1.04 ಲಕ್ಷ ರೂಗೆ ಇಳಿಸಿತು. ಇದರೊಂದಿಗೆ ಜೆಟ್ ಫುಯಲ್​ನ ಒಟ್ಟು ಏರಿಕೆ ಶೇ. 8ಕ್ಕೆ ಸೀಮಿತಗೊಂಡಿದೆ.

ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧಾರ

ಏಪ್ರಿಲ್ 1ರಿಂದ ಎಟಿಎಫ್ ಅಥವಾ ಏವಿಯೇಶನ್ ಟರ್ಬೈನ್ ಫುಯಲ್ ಬೆಲೆ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇತ್ತು. ಇದರಿಂದ ಫ್ಲೈಟ್ ಟಿಕೆಟ್ ಬೆಲೆ ವಿಪರೀತ ಏರುವ ಸಾಧ್ಯತೆ ಇತ್ತು. ಹೀಗಾಗಿ, ಒಮ್ಮೆಗೇ ಇಂಧನ ಬೆಲೆಯನ್ನು ಶೇ. 100ರಷ್ಟು ಏರಿಸುವ ಬದಲು ಹಂತ ಹಂತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ತೈಲ ಮಾರುಕಟ್ಟೆ ಕಂಪನಿಗಳು ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಚರ್ಚಿಸಿ, ದೇಶೀಯ ಏರ್ಲೈನ್ಸ್ ಕಂಪನಿಗಳಿಗೆ ಶೇ. 8.5ರಷ್ಟು ಮಾತ್ರವೇ ಏರಿಸುವುದು ಎಂದು ತೀರ್ಮಾನಿಸಲಾಯಿತೆನ್ನಲಾಗಿದೆ. ಅಂದರೆ, ಲೀಟರ್​ಗೆ 15 ರೂನಷ್ಟು ಏರಿಕೆ ಮಾಡಲಾಗಿದೆ. ಇದು ದೇಶೀಯ ಫ್ಲೈಟ್​ಗಳಿಗೆ ಮಾತ್ರ. ಅಂದರೆ, ಭಾರತದೊಳಗೆ ಸಂಚರಿಸುವ ವಿಮಾನಗಳಿಗೆ ಮಾತ್ರ ಈ ಅಲ್ಪ ಏರಿಕೆ.

ವಿದೇಶೀ ಏರ್​ಲೈನ್ಸ್ ಸಂಸ್ಥೆಗಳು ಮತ್ತು ಚಾರ್ಟರ್ ಫ್ಲೈಟ್ ಇತ್ಯಾದಿ ಸರ್ವಿಸ್ ನೀಡುವ ನಾನ್ ಶೆಡ್ಯೂಲ್ಡ್ ಆಪರೇಟರ್​ಗಳಿಗೆ ಇಂಧನ ಬೆಲೆ ಪೂರ್ತಿ ಏರಿಕೆ ಆಗುತ್ತದೆ. ಅಂದರೆ ಪೂರ್ವನಿಗದಿಯಂತೆ ಎಟಿಎಫ್ ಬೆಲೆ ಒಂದು ಕೆಎಲ್​ಗೆ 2.07 ಲಕ್ಷ ರೂ ಆಗುತ್ತದೆ. ಎರಡು ಪಟ್ಟು ಹೆಚ್ಚು ಬೆಲೆ ಹೆಚ್ಚಳ ಆದಂತಾಗಿದೆ. ಭಾರತೀಯ ಏರ್ಲೈನ್ಸ್ ವಿಮಾನಗಳಾದರೆ ಸುಮಾರು ಶೇ. 8.5ರಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಮಾನಗಳಿಗೂ ಹಂತ ಹಂತವಾಗಿ ದರ ಹೆಚ್ಚಳ ಮಾಡಲಾಗುತ್ತದೆ.

ಇದನ್ನೂ ಓದಿ: Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

ದೊಡ್ಡ ಕಮರ್ಷಿಯಲ್ ವಿಮಾನಗಳು ಒಂದು ಗಂಟೆಗೆ ಸುಮಾರು 10 ಟನ್ ಇಂಧನ ವ್ಯಯಿಸುತ್ತವೆ. ಅಂದರೆ ಸುಮಾರು 13,000 ಲೀಟರ್ ಎಟಿಎಫ್ ಖರ್ಚಾಗುತ್ತದೆ. ಪ್ರೈವೇಟ್ ಜೆಟ್​ಗಳಾದರೆ ಗಂಟೆಗೆ ಸುಮಾರು 1,500 ಲೀಟರ್ ಇಂಧನ ಬಳಕೆ ಆಗಬಹುದು. ಇದು ಅಂದಾಜು ಮಾತ್ರ. ಒಂದು ಸಾವಿರ ಲೀಟರ್​ಗೆ 2.07 ಲಕ್ಷ ರೂ ಎಂದರೆ, 13 ಸಾವಿರ ಲೀಟರ್​ಗೆ 27 ಲಕ್ಷ ರೂ ಆಗುತ್ತದೆ. ಒಂದು ಗಂಟೆ ಫ್ಲೈಟ್ ಸಂಚರಿಸಲು ಹೊಸ ಬೆಲೆಯಲ್ಲಿ ಇಂಧನ ವೆಚ್ಚವೇ ಸುಮಾರು 30 ಲಕ್ಷ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us