ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್​ಬಿಐ ಕರಡು ನಿಯಮಗಳಿವು…

RBI draft rules on claim settlement: ಬ್ಯಾಂಕ್ ಅಕೌಂಟ್, ಡೆಪಾಸಿಟ್, ಲಾಕರ್​ಗಳಲ್ಲಿನ ಆಸ್ತಿಗೆ ಕ್ಲೇಮ್ ಸಲ್ಲಿಸಿದಾಗ ಸೆಟಲ್ಮೆಂಟ್ ಮಾಡುವ ವಿಧಾನಗಳನ್ನು ಆರ್​ಬಿಐ ಸರಳಗೊಳಿಸಿದೆ. ಬ್ಯಾಂಕುಗಳು ಕ್ಲೇಮ್ ಅನ್ನು ತ್ವರಿತವಾಗಿ ಸೆಟಲ್ಮೆಂಟ್ ಮಾಡದೇ ಹೋದರೆ ದಂಡ ಎದುರಿಸಬೇಕಾಗುತ್ತದೆ. ಆರ್​ಬಿಐ ಈ ಕರಡು ನಿಯಮಗಳನ್ನು ಸಾರ್ವತ್ರಿಕ ಅವಗಾಹನೆಗೆ ಮುಕ್ತಗೊಳಿಸಿದು, ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್​ಬಿಐ ಕರಡು ನಿಯಮಗಳಿವು...
ಆರ್​ಬಿಐ

Updated on: Aug 11, 2025 | 3:12 PM

ನವದೆಹಲಿ, ಆಗಸ್ಟ್ 11: ಡೆಪಾಸಿಟ್ ಅಕೌಂಟ್, ಲಾಕರ್ಸ್​ಗೆ ಸಂಬಂಧಿಸಿದ ಕ್ಲೇಮ್​ಗಳ ಸೆಟಲ್ಮೆಂಟ್​ಗೆ ನಿಯಮಗಳನ್ನು ಸರಳ ಹಾಗೂ ಬಿಗಿಗಿಳಿಸುವ ಪ್ರಯತ್ನದಲ್ಲಿ ಆರ್​ಬಿಐ (RBI) ಇದೆ. ಈ ಸಂಬಂಧ ರಿಸರ್ವ್ ಬ್ಯಾಂಕ್ ಕರಡು ನಿಯಮಗಳನ್ನು ರೂಪಿಸಿದೆ ಇಂದು ಬಿಡುಗಡೆ ಮಾಡಿದೆ. ಖಾತೆದಾರರು ಮೃತಪಟ್ಟಾಗ ಅವರ ವಾರಸುದಾರರು ಸಲ್ಲಿಸುವ ಕ್ಲೇಮ್​ಗಳನ್ನು ಸೆಟಲ್ ಮಾಡುವ ಸಂಬಂಧದ ನಿಯಮಗಳಿವು. ಈ ಕರಡು ನಿಯಮಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಆರ್​ಬಿಐ ಸಾರ್ವಜನಿಕರಿಗೆ ಆಹ್ವಾನಿಸಿದೆ.

ಕ್ಲೇಮ್ ಸೆಟಲ್ಮೆಂಟ್ ಸಂಬಂಧ ಆರ್​ಬಿಐ ರೂಪಿಸಿದ ಕರಡು ನಿಯಮಗಳು

  • ಡೆಪಾಸಿಟ್ ಸಂಬಂಧಿಸಿದ ಕ್ಲೇಮ್​ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ 15 ದಿನದೊಳಗೆ ಬ್ಯಾಂಕುಗಳು ಸೆಟಲ್ ಮಾಡಬೇಕು.
  • ಠೇವಣಿಗಳಿಗೆ ನಾಮಿನಿಯನ್ನು ಹೆಸರಿಸಲಾಗಿದ್ದರೆ, ಇಂಡೆಮ್ನಿಟಿ ಬಾಂಡ್ ಅಥವಾ ವಾರಸುದಾರಿಕೆ ಪ್ರಮಾಣ ಪತ್ರ ಇತ್ಯಾದಿ ಕಾನೂನು ದಾಖಲೆಗಳನ್ನು ಕೇಳುವ ಅಗತ್ಯ ಇಲ್ಲ. ಕ್ಲೇಮ್ ಫಾರ್ಮ್, ಡೆತ್ ಸರ್ಟಿಫಿಕೇಟ್, ನಾಮಿನಿಯ ಐಡಿ ಪ್ರೂಫ್ ಮತ್ತು ವಿಳಾಸದ ಪ್ರೂಫ್ ದಾಖಲೆಗಳನ್ನು ಕೊಟ್ಟರೆ ಸಾಕು.
  • ಖಾತೆಗಳಿಗೆ ನಾಮಿನಿ ಹೆಸರಿಸಿಲ್ಲದಿದ್ದರೆ ಸರಳ ವಿಧಾನಗಳನ್ನು ಅನುಸರಿಸಬೇಕು. 15 ಲಕ್ಷ ರೂವರೆಗಿನ ಠೇವಣಿಗಳಿಗೆ ಸರಳ ವಿಧಾನ ಇರಬೇಕು. ಹೆಚ್ಚಿನ ಮೊತ್ತಕ್ಕೆ ಪ್ರಮಾಣಪತ್ರ ಇತ್ಯಾದಿ ಹೆಚ್ಚುವರಿ ದಾಖಲೆಗಳನ್ನು ನೀಡಬೇಕಾಗಬಹುದು.
  • ಖಾತೆದಾರರು ನಾಪತ್ರೆಯಾಗಿದ್ದು ಸತ್ತಿರುವ ಶಂಕೆ ಇದ್ದರೆ ಕೋರ್ಟ್​ನಿಂದ ಆದೇಶ ತರಬೇಕಾಗಬಹುದು.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಕಡ್ಡಾಯ; ಇಲ್ಲಿದೆ ಇತರೆಲ್ಲಾ ಶುಲ್ಕಗಳ ವಿವರ

  • ಸೇಫ್ ಕಸ್ಟಡಿ ಆಸ್ತಿಗಳ ವಿಚಾರಕ್ಕೆ ಬಂದರೆ, ಕ್ಲೇಮ್​ಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ 15 ದಿನದೊಳಗೆ ಇನ್ವೆಂಟರಿ ಪ್ರಕ್ರಿಯೆ ಶುರುವಾಗಬೇಕು. ವಿಳಂಬವಾದರೆ ಬ್ಯಾಂಕುಗಳು ದಂಡ ತೆರಬೇಕು. ಠೇವಣಿಗಳಿಗೆ ಬ್ಯಾಂಕ್ ದರದಲ್ಲಿ ಬಡ್ಡಿ ಹಾಗೂ ವಿಳಂಬ ಅವಧಿಗೆ ಹೆಚ್ಚುವರಿ ಶೇ. 4 ದಂಡ ತೆರಬೇಕು. ಲಾಕರ್ ಆಗಿದ್ದರೆ, ಬ್ಯಾಂಕುಗಳು ದಿನಕ್ಕೆ 5,000 ರೂ ದಂಡ ತೆರಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us