AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI Repo Rate: ಆರ್​ಬಿಐ ರಿಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 5.5 ಬಡ್ಡಿದರ ಮುಂದುವರಿಸಿದ ರಿಸರ್ವ್ ಬ್ಯಾಂಕ್

RBI MPC decides to keep Repo rate unchanged at 5.50%: ಆರ್​ಬಿಐನ ರಿಪೋ ದರದಲ್ಲಿ ಈ ಬಾರಿ ಯಾವ ಬದಲಾವಣೆ ಆಗಿಲ್ಲ. ರಿಪೋ ದರ ಅಥವಾ ಬಡ್ಡಿದರ ಶೇ. 5.5ರಲ್ಲೇ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಆಗಸ್ಟ್ 4ರಿಂದ 6ರವರೆಗೆ ನಡೆದ ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ತಜ್ಞರೂ ಕೂಡ ರಿಪೋ ದರ ಯಥಾಸ್ಥಿತಿ ಮುಂದುವರಿಯಬಹುದು ಎಂದು ಅಂದಾಜಿಸಿದ್ದರು.

RBI Repo Rate: ಆರ್​ಬಿಐ ರಿಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 5.5 ಬಡ್ಡಿದರ ಮುಂದುವರಿಸಿದ ರಿಸರ್ವ್ ಬ್ಯಾಂಕ್
ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 06, 2025 | 10:47 AM

Share

ನವದೆಹಲಿ, ಆಗಸ್ಟ್ 6: ಹೆಚ್ಚಿನ ತಜ್ಞರ ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರವನ್ನು (RBI Repo Rate in MPC meeting) ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಶೇ. 5.5ರ ರಿಪೋ ದರವೇ ಮುಂದಿನ ಎರಡು ತಿಂಗಳು ಮುಂದುವರಿಯಲಿದೆ. ಮೂರು ದಿನಗಳಿಂದ ನಡೆದ ಆರ್​ಬಿಐ ಎಂಪಿಸಿ ಸಭೆ ಬಳಿಕ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಈ ವಿಷಯವನ್ನು ಪ್ರಕಟಿಸಿದ್ದಾರೆ.

ರಿಪೋ ದರದ ಯಥಾಸ್ಥಿತಿ ಮುಂದುವರಿಸುವುದರ ಜೊತೆಗೆ ತನ್ನ ನೀತಿ ನಿಲುವನ್ನು ಅಥವಾ ಪಾಲಿಸಿ ಸ್ಟಾನ್ಸ್ ಅನ್ನು ತಟಸ್ಥ ಅಥವಾ ನ್ಯೂಟ್ರಲ್​ನಲ್ಲೇ ಮುಂದುವರಿಸುವ ನಿರ್ಣಯವನ್ನು ಅವರು ಘೋಷಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಆಗಸ್ಟ್ 4ರಿಂದ ಸಭೆ ನಡೆಸಿತ್ತು. ಈ ಸಮಿತಿಯಲ್ಲಿ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೇರಿ ಆರು ಮಂದಿ ಸದಸ್ಯರಿದ್ದಾರೆ. ಡೆಪ್ಯೂಟಿ ಗವರ್ನರ್ ಪೂನಮ್ ಗುಪ್ತಾ, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಹಾಗೂ ಮೂವರು ಬಾಹ್ಯ ಸದಸ್ಯರಾದ ನಾಗೇಶ್ ಕುಮಾರ್, ಸೌಗತ ಭಟ್ಟಾಚಾರ್ಯ ಹಾಗು ರಾಮ್ ಸಿಂಗ್ ಅವರು ಈ ಸಮಿತಿಯಲ್ಲಿರುವ ಇತರ ಸದಸ್ಯರು.

ಇದನ್ನೂ ಓದಿ: UPI transaction Fee: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಐಸಿಐಸಿಐ ಬ್ಯಾಂಕ್

ಸಂಜಯ್ ಮಲ್ಹೋತ್ರಾ ಅವರು ಈ ವರ್ಷದ ಆರಂಭದಲ್ಲಿ ಆರ್​ಬಿಐ ಗವರ್ನರ್ ಆಗಿ ನೇಮಕವಾಗಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ನಾಲ್ಕನೇ ಎಂಪಿಸಿ ಸಭೆ ಇದು. ಹಿಂದಿನ ಮೂರು ಸಭೆಯಲ್ಲಿ ಸತತವಾಗಿ ಬಡ್ಡಿದರ ಇಳಿಕೆ ಮಾಡಲಾಗಿದೆ. ಶೇ. 6.50ರಷ್ಟಿದ್ದ ರಿಪೋದರ ಶೇ. 5.50ಕ್ಕೆ ಇಳಿಕೆಯಾಗಿದೆ.

ಮತ್ತೆ ತಗ್ಗಿದ ಹಣದುಬ್ಬರ ಅಂದಾಜು

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 3.1ರಷ್ಟು ಇರಬಹುದು ಎಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಹಿಂದಿನ ಎಂಪಿಸಿ ಸಭೆ ಮಾಡಿದ ಅಂದಾಜು ಪ್ರಕಾರ ಈ ವರ್ಷ ಹಣದುಬ್ಬರ ಶೇ. 3.7ರಷ್ಟು ಇರಬಹುದು ಎನ್ನಲಾಗಿತ್ತು. ಈ ಬಾರಿ ಮತ್ತಷ್ಟು ಕಡಿಮೆ ಹಣದುಬ್ಬರವನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್

2025-26ರಲ್ಲಿ ಜಿಡಿಪಿ ಶೇ. 6.5ರಷ್ಟು ವೃದ್ಧಿಸುವ ಸಾಧ್ಯತೆ

ಇದೇ ವೇಳೆ, ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ವರ್ಷದ ಜಿಡಿಪಿ ಬೆಳವಣಿಗೆಯ ಸಾಧ್ಯತೆಯನ್ನು ಮತ್ತೆ ಪರಾಮರ್ಶಿಸಿದೆ. ಅದರ ಪ್ರಕಾರ 2025-26ರಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಬಹುದು ಎಂದಿದೆ. ಹಿಂದಿನ ಸಭೆಯಲ್ಲೂ ಇದೇ ಅಂದಾಜು ಮಾಡಲಾಗಿತ್ತು. ನಾಲ್ಕು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 6.5, ಶೇ. 6.7, ಶೇ. 6.6 ಮತ್ತು ಶೇ. 6.3ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಸಂಜಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Wed, 6 August 25