Coin Vending Machine: ಬರಲಿದೆ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್; ಏನಿದು ಆರ್​​ಬಿಐ ಹೊಸ ಯೋಜನೆ?

QR Code Coin Vending Machines; 12 ನಗರಗಳಲ್ಲಿ ಪ್ರಾಯೋಗಿಕವಾಗಿ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್​ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಜನರು ಪ್ರತಿ ಬಾರಿ ಹಣ ಪಡೆಯಲು ಬ್ಯಾಂಕ್​​ಗಳಿಗೆ ಹೋಗುವುದು, ಬ್ಯಾಂಕ್​​ಗಳಲ್ಲಿ ಕಾಯಬೇಕಾಗಿ ಬರುವುದು ತಪ್ಪಲಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

Coin Vending Machine: ಬರಲಿದೆ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್; ಏನಿದು ಆರ್​​ಬಿಐ ಹೊಸ ಯೋಜನೆ?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 08, 2023 | 12:35 PM

ಮುಂಬೈ: ದೇಶದ 12 ನಗರಗಳಲ್ಲಿ ಪ್ರಾಯೋಗಿಕವಾಗಿ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್​ಗಳನ್ನು (QR Code Coin Vending Machines) ಸ್ಥಾಪಿಸಲಾಗುವುದು ಎಂದು ಆರ್​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಘೋಷಣೆ ಮಾಡಿದರು. ಆರ್​​ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಣಯಗಳನ್ನು ಪ್ರಕಟಿಸಿದ ಬಳಿಕ ಅವರು, ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 12 ನಗರಗಳಲ್ಲಿ ಪ್ರಾಯೋಗಿಕವಾಗಿ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್​ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಜನರು ಪ್ರತಿ ಬಾರಿ ಹಣ ಪಡೆಯಲು ಬ್ಯಾಂಕ್​​ಗಳಿಗೆ ಹೋಗುವುದು, ಬ್ಯಾಂಕ್​​ಗಳಲ್ಲಿ ಕಾಯಬೇಕಾಗಿ ಬರುವುದು ತಪ್ಪಲಿದೆ. ಕಾಯಿನ್​​ ವೆಂಡಿಂಗ್ ಮಷಿನ್​​ಗಳ ಮೂಲಕವೇ ಜನರು ಹಣ ಪಡೆಯಬಹುದಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.

ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಆಧರಿಸಿಕೊಂಡು ಯೋಜನೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು. ಆದರೆ, ಯಾವೆಲ್ಲ ನಗರಗಳಲ್ಲಿ ಕಾಯಿನ್ ವೆಂಡಿಂಗ್ ಮಷಿನ್​ಗಳನ್ನು ಸ್ಥಾಪಿಸಲಾಗುತ್ತದೆ ಎಂಬುದನ್ನು ಅವರು ತಿಳಿಸಿಲ್ಲ. ಜತೆಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ವೆಂಡಿಂಗ್ ಮಷಿನ್​​ಗಳಲ್ಲಿ ಕ್ಯುಆರ್​ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿ ಎಷ್ಟು ಮೊತ್ತದ ಹಣ ಬೇಕೆಂದು ನಮೂದಿಸಿದರೆ ಅಷ್ಟು ಹಣವನ್ನು ಮಷಿನ್ ನೀಡಲಿದೆ.

ಇದನ್ನೂ ಓದಿ: Repo Rate: ಆರ್​ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ

ಜಿ20 ದೇಶದಗಳ ಸದಸ್ಯರಿಗೆ ಯುಪಿಐ

ಜಿ20 ಸದಸ್ಯರ ರಾಷ್ಟ್ರಗಳ ಜನರಿಗೂ ಯುಪಿಐ ವ್ಯವಸ್ಥೆಯ ಸೌಲಭ್ಯ ದೊರೆಯುವಂತೆ ಮಾಡಲಾಗುವುದು. ಸದಸ್ಯ ರಾಷ್ಟ್ರಗಳ ಜನರು ಭಾರತಕ್ಕೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಯುಪಿಐ ಮೂಲಕವೇ ಪಾವತಿ ಮಾಡಬಹುದು ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್​​ನಲ್ಲಿ ಫೋನ್​ಪೇ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಇದನ್ನೂ ಓದಿ: Repo Rate Hike; ಆರ್​ಬಿಐ ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ; ಹೆಚ್ಚಾಗಲಿದೆ ಇಎಂಐ ಮೊತ್ತ

ಈ ಮಧ್ಯೆ, ಆರ್​ಬಿಐ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿದ್ದು ಶೇ 6.50ಕ್ಕೆ ನಿಗದಿಪಡಿಸಿದೆ. 2022ರ ಮೇ ತಿಂಗಳ ನಂತರ ಸತತವಾಗಿ ಆರ್​ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಂತಾಗಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್​ಬಿಐ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿದೆ. ಇದೀಗ ಮತ್ತೆ ರೆಪೊ ದರ ಹೆಚ್ಚಿಸಿರುವುದರಿಂದ ಗೃಹ, ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ ಮೊತ್ತ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Wed, 8 February 23

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ