Repo Rate: ಆರ್​ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ

ಆರ್​​ಬಿಐ ಹಣಕಾಸು ನೀತಿ ಎಂದರೇನು? ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ರೆಪೊ ದರ ಹೆಚ್ಚಳದಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Repo Rate: ಆರ್​ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ
RBI repo rate hike Best time to book your fixed deposits FDs know interest rates here Image Credit source: PTI
Follow us
Ganapathi Sharma
|

Updated on: Feb 08, 2023 | 12:34 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ (Monetary Policy) ಬುಧವಾರ ಪ್ರಕಟಗೊಂಡಿದ್ದು, ರೆಪೊ ದರವನ್ನು (Repo Rate) ಮತ್ತೆ 25 ಮೂಲಾಂಶ ಹೆಚ್ಚಿಸಲಾಗಿದೆ. ಇದರೊಂದಿಗೆ, 2022ರ ಮೇ ತಿಂಗಳ ನಂತರ ಸತತವಾಗಿ ಆರ್​ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಂತಾಗಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್​ಬಿಐ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿದೆ. ಆರ್​​ಬಿಐ ಹಣಕಾಸು ನೀತಿ ಎಂದರೇನು? ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ರೆಪೊ ದರ ಹೆಚ್ಚಳದಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹಣಕಾಸು ನೀತಿ ಎಂದರೇನು?

ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು, ಉತ್ತೇಜಿಸುವುದಕ್ಕಾಗಿ ಕೈಗೊಳ್ಳುವ ಹಣಕಾಸು ಕ್ರಮಗಳು ಮತ್ತು ನಿರ್ಣಯಗಳೇ ಆರ್​​ಬಿಐಯ ಹಣಕಾಸು ನೀತಿ. ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದರ ಸ್ಥಿರತೆಯನ್ನು ಕಾಪಾಡುವ ಉದ್ದೇಶದೊಂದಿಗೆ ನಿರ್ಧಾರಗಳನ್ನು ಕೈಗೊಳ್ಳುವುದೇ ಹಣಕಾಸು ನೀತಿ ಎಂದು ಆರ್​​ಬಿಐ ಹೇಳಿದೆ.

ಇದನ್ನೂ ಓದಿ: Coin Vending Machine: ಬರಲಿದೆ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಗ್ ಮಷಿನ್; ಏನಿದು ಆರ್​​ಬಿಐ ಹೊಸ ಯೋಜನೆ?

ದೇಶದ ಹಣಕಾಸು ಸ್ಥಿರತೆ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಹಣಕಾಸು ನೀತಿ ಬಹಳ ಮುಖ್ಯವಾದದ್ದಾಗಿದೆ. ಹಣಕಸು ನೀತಿ ಅಥವಾ ವಿತ್ತೀಯ ನೀತಿ ಲಭ್ಯವಿರುವ ಹಣದ ಒಟ್ಟಾರೆ ಪೂರೈಕೆಯನ್ನು ನಿಯಂತ್ರಿಸುತ್ತದೆ. ಇದು ವಾಣಿಜ್ಯ ಬ್ಯಾಂಕುಗಳಿಗೆ ನೇರವಾಗಿ ಪರಿಣಾಮ ಬೀರಿದರೆ ವೈಯಕ್ತಿಕ ಬಳಕೆದಾರರು ಮತ್ತು ಕಂಪನಿಗಳಿಗೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ.

ರೆಪೊ ದರ ಎಂದರೇನು?

ಆರ್‌ಬಿಐನ ಹಣಕಾಸು ನೀತಿ ದರಗಳಲ್ಲಿ ರೆಪೊ ದರ ಒಂದು ಪ್ರಮುಖ ಅಂಶವಾಗಿದೆ. ಸರಳವಾಗಿ ಹೇಳುವುದಾದರೆ, ದೇಶದ ವಾಣಿಜ್ಯ ಬ್ಯಾಂಕ್​​ಗಳು ಹಣಕಾಸಿನ ಕೊರತೆ ಎದುರಾದಾಗ ಅಲ್ಪಾವಧಿಗೆ ಆರ್​ಬಿಐಯಿಂದ ಪಡೆಯುವ ಸಾಲದ ಬಡ್ಡಿದರವೇ ರೆಪೊ ದರ. ಅದೀಗ ಶೇ 6.50 ಆಗಿದೆ. ಕೆಲವು ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಗ್ರಾಹಕರ ಶೇವಣಿಗಳಿಂದ ಬರುವ ಹಣವನ್ನು ಕೂಡ ಅಲ್ವಾವಧಿಗೆ ಬಳಸಿಕೊಳ್ಳುತ್ತವೆ. ಆದರೆ ಸಾಲಗಳಿಗೆ ಬೇಡಿಕೆ ಹೆಚ್ಚಾದಾಗ, ನಿಧಿ ಕೊರತೆ ಉಂಟಾದಾಗ ಸಾಮಾನ್ಯವಾಗಿ ಬ್ಯಾಂಕ್‌ಗಳು ಆರ್​ಬಿಐ ಮೊರೆ ಹೋಗುತ್ತವೆ. ಹೀಗೆ ಆರ್​ಬಿಐಯಿಂದ ಬ್ಯಾಂಕ್​ಗಳು ಪಡೆಯುವ ಹಣಕ್ಕೆ ಅದು ನಿಗದಿಪಡಿಸುವ ಬೆಂಚ್​ಮಾರ್ಕ್ ದರವೇ ರೆಪೊ ದರ.

ರಿವರ್ಸ್ ರೆಪೊ ದರ ಎಂದರೇನು?

ಇದು ರೆಪೊ ದರಕ್ಕೆ ಸರೀ ತದ್ವಿರುದ್ಧವಾದದ್ದು. ಸರಳವಾಗಿ ಹೇಳುವುದಾದರೆ, ಆರ್​ಬಿಐಯು ದೇಶದ ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಬಡ್ಡಿ ದರವೇ ರಿವರ್ಸ್ ರೆಪೊ ದರ. ಆರ್ಥಿಕತೆಯಲ್ಲಿ ಹಣಕಾಸಿನ ಹರಿವನ್ನು ನಿಯಂತ್ರಿಸುವುದಕ್ಕಾಗಿ ಆರ್​​ಬಿಐ ಇದನ್ನು ಬಳಸಿಕೊಳ್ಳುತ್ತದೆ. ಹೆಚ್ಚುವರಿ ಹಣವನ್ನು ಆರ್​ಬಿಐನಲ್ಲಿ ಇಡುವ ಮೂಲಕ ವಾಣಿಜ್ಯ ಬ್ಯಾಂಕ್​​ಗಳಿಗೆ ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಇದು ನೆರವಾಗುತ್ತದೆ. ಅತಿಯಾದ ಹಣ ಚಲಾವಣೆ ತಡೆಯುವ ನಿಟ್ಟಿನಲ್ಲಿಯೂ ಪೂರಕವಾಗಿ ಕೆಲಸ ಮಾಡುತ್ತದೆ. ಪ್ರಸ್ತುತ ರಿವರ್ಸ್ ರೆಪೊ ದರ ಶೇ 3.35ರಷ್ಟಿದೆ.

ರೆಪೊ ದರ ರಿವರ್ಸ್ ರೆಪೊ ದರಕ್ಕಿಂತ ಹೆಚ್ಚಿರುವುದೇಕೆ?

ಆರ್​ಬಿಐ ಯಾವಾಗಲೂ ತಾನು ಪಾವತಿಸಿದ್ದಕ್ಕಿಂತ ಹೆಚ್ಚು ಗಳಿಸಬೇಕಿರುತ್ತದೆ. ಹೀಗಾಗಿ ರೆಪೊ ದರ ಸಾಮಾನ್ಯವಾಗಿ ಯಾವಾಗಲೂ ರಿವರ್ಸ್ ರೆಪೊ ದರಕ್ಕಿಂತ ಹೆಚ್ಚಿರುತ್ತದೆ. ಬ್ಯಾಂಕ್​ಗಳ ಉಳಿತಾಯಕ್ಕೆ ಪಾವತಿಸುವ ಬಡ್ಡಿಯಿಂದಲೂ ಸಾಲಕ್ಕೆ ಪಡೆಯುವ ಬಡ್ಡಿಯೇ ಹೆಚ್ಚಿರುವಂತೆ ಆರ್​ಬಿಐ ನೋಡಿಕೊಳ್ಳುತ್ತದೆ.

ರೆಪೊ, ರಿವರ್ಸ್ ರೆಪೊ ದರ ಬದಲಾವಣೆಯ ಪರಿಣಾಮವೇನು?

ರೆಪೊ ದರ ಬದಲಾದಾಗಲೆಲ್ಲ ಬ್ಯಾಂಕ್​ಗಳು ಬಡ್ಡಿ ದರ ಪರಿಷ್ಕರಿಸುತ್ತವೆ. ಒಂದು ವೇಳೆ ರೆಪೊ ದರ ಹೆಚ್ಚಾದರೆ ವಾಣಿಜ್ಯ ಬ್ಯಾಂಕ್​​ಗಳೂ ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಠೇವಣಿಗಳ ದರವನ್ನೂ ಹೆಚ್ಚಿಸುತ್ತವೆ. ಇದರಿಂದ ಜನರು ವೆಚ್ಚ ಮಾಡುವುದು ಕಡಿಮೆಯಾಗುತ್ತದೆ. ಉಳಿತಾಯ ಮಾಡುವುದು ಹೆಚ್ಚಾಗುತ್ತದೆ. ಒಂದು ವೇಳೆ ಆರ್​​ಬಿಐ ರೆಪೊ ದರ ಕಡಿಮೆ ಮಾಡಿದರೆ, ವಾಣಿಜ್ಯ ಬ್ಯಾಂಕ್​​ಗಳೂ ವಿವಿಧ ಸಾಲಗಳ ಬಡ್ಡಿ ದರ ಕಡಿಮೆ ಮಾಡುತ್ತವೆ. ಠೇವಣಿಗಳ ಬಡ್ಡಿ ದರಗಳೂ ಕಡಿಮೆಯಾಗುತ್ತವೆ. ಇದರಿಂದಾಗಿ ಜನ ಉಳಿತಾಯ ಮಾಡುವುದು ಕಡಿಮೆಯಾಗಿ ವೆಚ್ಚ ಹೆಚ್ಚಾಗುತ್ತದೆ. ಜನರು ಹೆಚ್ಚು ಹಣ ಖರ್ಚು ಮಾಡುವುದರಿಂದ ಆರ್ಥಿಕ ಚಟುವಟಿಕೆಗಳು ಬಿರುಸುಗೊಂಡು ಹಣಕಾಸಿನ ಹರಿವು ಹೆಚ್ಚಾಗುತ್ತದೆ.

ಇದನ್ನೂ ಓದಿ: Repo Rate Hike; ಆರ್​ಬಿಐ ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ; ಹೆಚ್ಚಾಗಲಿದೆ ಇಎಂಐ ಮೊತ್ತ

ರಿವರ್ಸ್ ರೆಪೊ ದರ ಕೂಡ ಜನರು ಖರ್ಚು ಮಾಡುವುದನ್ನು ಕಡಿಮೆ ಮಾಡಿ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಕಾರಣವಾಗುತ್ತದೆ. ರಿವರ್ಸ್ ರೆಪೊ ದರ ಹೆಚ್ಚಿದ್ದಾಗ ಬ್ಯಾಂಕ್​​ಗಳು ಹಣವನ್ನು ಆರ್​ಬಿಐಯಲ್ಲಿ ಉಳಿತಾಯ ಮಾಡಿ ಲಾಭ ಗಳಿಸಲು ಯತ್ನಿಸುತ್ತವೆ. ಇದರ ಪರಿಣಾಮ ಪರೋಕ್ಷವಾಗಿ ಜನರ ಮೇಲೂ ಉಂಟಾಗುತ್ತದೆ. ಅವರೂ ವ್ಯಯಿಸುವುದನ್ನು ಕಡಿಮೆ ಮಾಡಿ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು