ಹಣಕಾಸು ವರ್ಷ 2022ರಲ್ಲಿ ಭಾರತದ ಬೆಳವಣಿಗೆ ದರ ಶೇ 9.5 ಇರಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. “ಈ ಹಂತದಲ್ಲಿ ನಾವು ಶೇ 9.5ರಷ್ಟು ಬೆಳವಣಿಗೆಯನ್ನು ಅಂದಾಜಿಸಿದ್ದೇವೆ. ಆದರೆ ಮೂರನೇ ಅಲೆಯ ಅನಿಶ್ಚಿತತೆ ಇದ್ದೇ ಇದೆ,” ಎಂದು ಮಾಧ್ಯಮದ ವೆಬ್ಕಾಸ್ಟ್ನಲ್ಲಿ ಹೇಳಿದ್ದಾರೆ. “ಆದರೆ ನನಗನಿಸುವಂತೆ ಜನರು ಮತ್ತು ಉದ್ಯಮ ಚಟುವಟಿಕೆಗಳು ಹೆಚ್ಚೆಚ್ಚು ಕೊವಿಡ್ ಪ್ರೊಟೋಕಾಲ್ಗೆ ಹೊಂದಾಣಿಕೆ ಆಗುತ್ತಿರುವುದು ಕಂಡುಬರುತ್ತಿದೆ ಮತ್ತು ತಮ್ಮ ಉದ್ಯಮವನ್ನು ಮುಂದುವರಿಸಿದ್ದಾರೆ. ಕೊವಿಡ್ ಮೂರನೇ ಅಲೆಯು ಗಂಭೀರ ಪರಿಣಾಮ ಬೀರಲಿಲ್ಲ ಅಂತಾದರೆ ಶೇ 9.5ರಷ್ಟು ಬೆಳವಣಿಗೆ ನಿರೀಕ್ಷೆ ಮಾಡಬಹುದು,” ಎಂದು ಅವರು ಹೇಳಿದ್ದಾರೆ. ಆರ್ಥಿಕ ಬೆಳವಣಿಗೆಯು ಎರಡನೇ ತ್ರೈಮಾಸಿಕದಿಂದ ಉತ್ತಮವಾಗುತ್ತಾ ಹೋಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊವಿಡ್ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲು ನಿರ್ಧಾರ ಮಾಡಿದೆ. ಸರ್ಕಾರ ನಿಗದಿ ಮಾಡಿರುವಂತೆ ಹಣದುಬ್ಬರ ದರ ಶೇ 2ರಿಂದ 6ರ ಮಧ್ಯೆ ಇರುವಂತೆ ನೋಡಿಕೊಳ್ಳಲು ಕಾರ್ಯ ನಿರ್ವಹಿಸಲಿದೆ. ನಿಧಾನವಾಗಿ ಆರ್ಬಿಐನಿಂದ ಶೇ 4ರ ದರವನ್ನು ಸಾಧಿಸಲು ಸಾಗಲಾಗುವುದು. ಸುಸ್ಥಿರವಾದ ಹಣದುಬ್ಬರ ಏರಿಕೆ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಪ್ರಮುಖಾಂಶಗಳು
– ಆರ್ಬಿಐ ಗವರ್ನರ್ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲೇ ಲಿಕ್ವಿಡಿಟಿ ಸನ್ನಿವೇಶ ಸುಲಭವಾಗಿದೆ ಮತ್ತು ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಏರಿಕೆ ಆಗಿದೆ. ಹೆಚ್ಚಿನ ಆಸ್ತಿ ದರವು ಹಣದುಬ್ಬರ ಸನ್ನಿವೇಶದ ಮಲೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.
– ಅಕಾಮಡೇಟಿವ್ ನಿಲವಿನ ಬಗ್ಗೆ ಉತ್ತರಿಸಿದ ದಾಸ್, ಆರ್ಬಿಐನ ದರ ನಿಗದಿ ಸಮಿತಿಯು ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೋ ಅದರ ಮೇಲೆ ತೀರ್ಮಾನ ಆಗುತ್ತದೆ ಎಂದಿದ್ದಾರೆ.
– ಎಲ್ಲಕ್ಕೂ ಹಣದುಬ್ಬರ ಆಗುತ್ತಿದೆ ಎಂಬುದು ರಿಸರ್ವ್ ಬ್ಯಾಂಕ್ಗೆ ಕಂಡುಬಂದಿಲ್ಲ.
– ಬ್ಯಾಂಕಿಂಗ್ ವಲಯಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಜೂನ್ ತ್ರೈಮಾಸಿಕದ ಕೊನೆ ಹೊತ್ತಿಗೆ ಶೇ 7.5ರಷ್ಟಿತ್ತು ಮತ್ತು ಅದನ್ನೇ ಇಲ್ಲಿಯ ತನಕ ನಿರ್ವಹಿಸಲಾಗಿದೆ.
ಹಿನ್ನೆಲೆ
ಈ ಹಿಂದೆ, ಆಗಸ್ಟ್ ತಿಂಗಳಲ್ಲಿ ಆರ್ಬಿಐ ತಿಳಿಸಿರುವಂತೆ, ರಿಯಲ್ ಜಿಡಿಪಿ ಬೆಳವಣಿಗೆ ಪ್ರಸಕ್ತ ಹಣಕಾಸು 2021-22ರಲ್ಲಿ ಶೇ 9.5ರಷ್ಟು ಇರಲಿದೆ. ಬ್ಯಾಂಕ್ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ವೇಳೆ ಇದನ್ನು ತಿಳಿಸಿತ್ತು.
ಅಕಾಮಡೆಟಿವ್ ನಿಲವು ಮುಂದುವರಿಸಲು ತೀರ್ಮಾನಿಸಿತ್ತು. ರೆಪೋ ದರ ಶೇ 4ರಲ್ಲಿ ಮತ್ತು ರಿವರ್ಸ್ ರೆಪೋ ದರ ಶೇ 3.35ರಲ್ಲೇ ಮುಂದುವರಿಸಲು ನಿರ್ಧರಿಸಿತ್ತು. ಶಕ್ತಿಕಾಂತ್ ದಾಸ್ ಹೇಳಿರುವಂತೆ, ಕೊವಿಡ್- 19 ಎರಡನೇ ಅಲೆ ನಿರ್ಬಂಧ ಸಡಿಲಗೊಳಿಸುತ್ತಿದ್ದಂತೆ ದೇಶೀಯ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಬಂದಿದೆ ಮತ್ತು ಹಂತಹಂತವಾಗಿ ಆರ್ಥಿಕತೆ ಪುನರಾರಂಭ ಆಗುತ್ತಿದೆ.
ಇದನ್ನೂ ಓದಿ: GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ
ಜಿಡಿಪಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
(Real GDP Growth For FY22 Estimated To Be 9.5 Percent Said By RBI Governor Shaktikanta Das )