AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

Reasons why Gold, silver rates falling from past few days: ಚಿನ್ನದ ಬೆಲೆ ಸತತ ನಾಲ್ಕು ದಿನ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ ಸತತವಾಗಿ ಕಡಿಮೆ ಆಗಿದೆ. ಗೋಲ್ಡ್ ಮತ್ತು ಸಿಲ್ವರ್ ಕಾಂಟ್ರ್ಯಾಕ್ಟ್​ಗಳೂ ಕೂಡ ತಗ್ಗಿವೆ. ಬೆಲೆ ನಿರಂತರ ಕುಸಿಯಲು ಏನು ಕಾರಣ? ತಜ್ಞರ ಪ್ರಕಾರ ಅಮೆರಿಕದಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕ್ಷೀಣಿಸುತ್ತಿರುವುದು ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ಕಾರಣ ಇರಬಹುದು.

ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2025 | 7:21 PM

Share

ನವದೆಹಲಿ, ನವೆಂಬರ್ 18: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold rates) ಕಳೆದ ಒಂದು ವಾರದಲ್ಲಿ ನಾಲ್ಕು ಬಾರಿ ಇಳಿಕೆ ಕಂಡಿವೆ. ಸತತ ಮೂರು ದಿನ ಬೆಲೆ ತಗ್ಗಿದೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲ, ಭಾರತದಲ್ಲೂ ಇವೆರಡು ಲೋಹಗಳ ಬೆಲೆ ಕಡಿಮೆಗೊಂಡಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಡಿಸೆಂಬರ್​ನ ಗೋಲ್ಡ್ ಫ್ಯೂಚರ್ಸ್ 10 ಗ್ರಾಮ್​ಗೆ 1,807 ರೂಗಳಷ್ಟು ಬೆಲೆ ಕಡಿಮೆ ಆಗಿದೆ. 2026ರ ಫೆಬ್ರುವರಿಯ ಗೋಲ್ಡ್ ಕಾಂಟ್ರಾಕ್ಟ್ ಕೂಡ ಇಷ್ಟೇ ಪ್ರಮಾಣದಲ್ಲಿ ತಗ್ಗಿದೆ.

ಗೋಲ್ಡ್ ಫ್ಯೂಚರ್ಸ್ ಶೇ. 1.45-1.50ರಷ್ಟು ಕಡಿಮೆ ಆದರೆ, ಸಿಲ್ವರ್ ಫ್ಯೂಚರ್ಸ್ ಶೇ. 2.36ರಷ್ಟು ಕಡಿಮೆ ಆಗಿದೆ. ಎಂಸಿಎಕ್ಸ್​ನಲ್ಲಿ ಡಿಸೆಂಬರ್​ನ ಗೋಲ್ಡ್ ಫ್ಯೂಚರ್ ಕಾಂಟ್ರಾಕ್ಟ್​ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1.21 ಲಕ್ಷ ರೂ ಇದೆ. ಫೆಬ್ರುವರಿ ಕಾಂಟ್ರಾಕ್ಟ್​ನಲ್ಲಿ 1.22 ಲಕ್ಷ ರೂ ಆಗಿದೆ. ಡಿಸೆಂಬರ್​ನಲ್ಲಿ ಸಿಲ್ವರ್ ಫ್ಯೂಚರ್ ಕಿಲೋಗೆ 1.51 ಲಕ್ಷ ರೂ ಇದೆ.

ಇದನ್ನೂ ಓದಿ: ಸೌತ್ ಇಂಡಿಯನ್ ಬ್ಯಾಂಕ್​ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ

ಚಿನ್ನ, ಬೆಳ್ಳಿ ಬೆಲೆಗಳು ಕಡಿಮೆ ಆಗಲು ಏನು ಕಾರಣ?

ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಂಸ್ಥೆ ತನ್ನ ಬಡ್ಡಿದರವನ್ನು ಕಡಿಮೆಗೊಳಿಸುವ ನಿರೀಕ್ಷೆ ಬಹಳ ಇತ್ತು. ಆದರೆ, ಆ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಬಡ್ಡಿದರ ಇಳಿಸುವ ನಿರ್ಧಾರವನ್ನು ಪ್ರಚೋದಿಸುವಂತಹ ಬೆಳವಣಿಗೆಗಳೂ ಯಾವುದು ಆಗುತ್ತಿಲ್ಲ. ಹೀಗಾಗಿ, ಬಹಳಷ್ಟು ಹೂಡಿಕೆದಾರರು ಬಡ್ಡಿದರ ಕಡಿತದ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ. ಇದು ಚಿನ್ನ ಹಾಗೂ ಬೆಳ್ಳಿ ಮೇಲಿನ ಹೂಡಿಕೆಗಳಿಂದ ನಿರ್ಗಮಿಸಲು ದಾರಿಯಾಗಿದೆ ಎನ್ನುತ್ತಾರೆ ತಜ್ಞರು.

ಕಳೆದ ಬಾರಿಯ ಫೆಡರಲ್ ರಿಸರ್ವ್ ಸಭೆಯಲ್ಲಿ ಬಡ್ಡಿದರ ಇಳಿಸಲಾಯಿತಾದರೂ, ಮುಂಬರುವ ದಿನಗಳಲ್ಲಿ ತಾಳ್ಮೆ ವಹಿಸುವ ನೀತಿ ಅನುಸರಿಸುವುದಾಗಿ ಹೇಳಲಾಗಿದೆ. ಹೀಗಾಗಿ, ಡಿಸೆಂಬರ್​ನಲ್ಲಿ ದರ ಕಡಿತ ಮಾಡುವ ಸಂಭವ ಕಡಿಮೆ ಎಂದು ತೋರುತ್ತಿದೆ.

ಇದನ್ನೂ ಓದಿ: ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?

ನಾಳೆ ಬುಧವಾರ (ನ. 19) ಫೆಡರಲ್ ಮೀಟಿಂಗ್ ನಡೆಯುತ್ತಿದ್ದು, ಅದರಲ್ಲಿ ಚರ್ಚೆಯಾಗುವ ಅಂಶಗಳು ಬಡ್ಡಿದರ ಕಡಿತ ಸಾಧ್ಯತೆ ಬಗ್ಗೆ ಸುಳಿವು ನೀಡಬಹುದು. ನ. 20ರಂದು ಅಮೆರಿಕದ ನಾನ್-ಫಾರ್ಮ್ ಪೇರೋಲ್ ಡಾಟಾ ಬಿಡುಗಡೆ ಆಗುತ್ತದೆ. ಅದರಲ್ಲಿರುವ ದತ್ತಾಂಶವು ಫೆಡರಲ್ ರಿಸರ್ವ್​ನ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು. ಈ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ಹೂಡಿಕೆದಾರರ ಮುಂದಿನ ನಡೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಂತೆಯೇ, ಇವೆರಡು ಲೋಹಗಳ ಬೆಲೆಗಳು ಯಾವ ದಿಕ್ಕಿನಲ್ಲಿ ಹೋಗುತ್ತವೆ ಎಂಬುದೂ ಗೊತ್ತಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ