AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mukesh Ambani: 10 ಸಾವಿರ ಕೋಟಿ ಅಮೆರಿಕನ್ ಡಾಲರ್ ಸಮೀಪ ಮುಕೇಶ್ ಅಂಬಾನಿ ಆಸ್ತಿ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ನಿವ್ವಳ ಆಸ್ತಿ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್ ಸಮೀಪಕ್ಕೆ ಬಂದಿದೆ.

Mukesh Ambani: 10 ಸಾವಿರ ಕೋಟಿ ಅಮೆರಿಕನ್ ಡಾಲರ್ ಸಮೀಪ ಮುಕೇಶ್ ಅಂಬಾನಿ ಆಸ್ತಿ ಮೌಲ್ಯ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Sep 04, 2021 | 7:55 PM

Share

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಚ ಮುಕೇಶ್ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯಕ್ಕೆ ಶುಕ್ರವಾರ 370 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಯಿತು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 27,000 ಕೋಟಿ ರೂಪಾಯಿಗೂ ಹೆಚ್ಚಾಯಿತು. ಏಕೆಂದರೆ, ಅವರ ಪ್ರಮುಖ ಸಂಸ್ಥೆಯ ಷೇರುಗಳು ಕ್ಲೀನ್-ಎನರ್ಜಿ ಗುರಿಗಳನ್ನು ದ್ವಿಗುಣಗೊಳಿಸಿದ ನಂತರ ಈ ಬೆಳವಣಿಗೆ ಆಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಆದ ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ 9260 ಕೋಟಿ ಅಮೆರಿಕನ್ ಡಾಲರ್ ಆಗಿದೆ. ಭಾರತೀಯ ಉದ್ಯಮಿ ಆದ ಅಂಬಾನಿ ಈಗ L’Orealನ ಫ್ರಾಂಕೋಯಿಸ್ ಬೆಟೆನ್​ಕೋರ್ಟ್ ಮೆಯರ್ಸ್ ನಿವ್ವಳ ಆಸ್ತಿ ಮೌಲ್ಯ 9290 ಕೋಟಿ ಡಾಲರ್​ಗೆ ಸಮೀಪಿಸುತ್ತಿದ್ದಾರೆ. ಏಕೆಂದರೆ ಇಬ್ಬರೂ ಈಗ 100 ಶತಕೋಟಿ ಸಂಪತ್ತು ಹೊಂದಿರುವವರ ಅಪರೂಪದ ಗುಂಪಿಗೆ ಹತ್ತಿರ ಆಗುತ್ತಿದ್ದಾರೆ. ಅಂಬಾನಿ ಅವರು ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಗ್ಗದ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು “ಆಕ್ರಮಣಕಾರಿಯಾಗಿ” ಮಾಡುತ್ತದೆ ಎಂದು ಹೇಳಿದ ನಂತರ ಕಂಪೆನಿಯ ಷೇರುಗಳ ಬೆಲೆ ಏರಿಕೆಯಿಂದಾಗಿ ನಿವ್ವಳ ಆಸ್ತಿಯ ಮೌಲ್ಯ ಜಾಸ್ತಿಯಾಯಿತು.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲವಾದ ಕಂಪೆನಿಯಾಗಿದ್ದು, ಅದರ ಡಿಜಿಟಲ್ ಕಾರ್ಯಾಚರಣೆಯು ಫೇಸ್​ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರ ಬೆಂಬಲದೊಂದಿಗೆ ವಿಸ್ತರಿಸಿದೆ. ಅದೇ ಸಮಯದಲ್ಲಿ, ಸೌದಿ ಅರಾಮ್ಕೋ ರಿಲಯನ್ಸ್​ನ ತೈಲ ಸಂಸ್ಕರಣೆಯಲ್ಲಿ ಪಾಲು ಪಡೆಯಲು ಬಯಸುತ್ತಿದೆ. ಈ ಒಪ್ಪಂದದಲ್ಲಿ ವ್ಯಾಪಾರವು 25 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ ಎಂದು ಹೇಳಲಾಗಿದೆ.

ಅಂಬಾನಿ ಈ ವರ್ಷ ಮಹತ್ವಾಕಾಂಕ್ಷೆಯ ಯೋಜನೆಯನ್ನು 10 ಶತಕೋಟಿ ಡಾಲರ್‌ಗಳಷ್ಟು ಕ್ಲೀನ್ ಎನರ್ಜಿಯಲ್ಲಿ ಹೂಡಿಕೆ ಮಾಡಿ, ಭಾರತದ ಅತ್ಯಮೂಲ್ಯವಾದ ಕಂಪೆನಿಗೆ ಹೊಸ ತಿರುವನ್ನು ನೀಡಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕರ ಆಮದು ಕಡಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯೊಂದಿಗೆ ಗುರಿ ಹೊಂದಿಕೆ ಆಗುತ್ತದೆ. ಅಂದಹಾಗೆ ರಿಲಯನ್ಸ್ ಷೇರುಗಳು ಮುಂಬೈನಲ್ಲಿ ದಾಖಲೆಯ ಶೇ 4.1ರಷ್ಟು ಏರಿಕೆಯಾಗಿ, ಶುಕ್ರವಾರ ದಾಖಲೆಯಾಗಿದೆ.

ನೂರು ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವವರು ಮತ್ತು ಅವರ ಆಸ್ರಿ ಮೌಲ್ಯ ಇಂತಿದೆ: ಜೆಫ್​ ಬೆಜೋಸ್ 20,070 ಕೋಟಿ ಯುಎಸ್​ಡಿ ಎಲಾನ್​ ಮಸ್ಕ್ 19,890 ಕೋಟಿ ಯುಎಸ್​ಡಿ ಬರ್ನಾರ್ಡ್ ಅರ್ನಾಲ್ಟ್ 16,360 ಕೋಟಿ ಯುಎಸ್​ಡಿ ಬಿಲ್ ಗೇಟ್ಸ್ 15,360 ಕೋಟಿ ಯುಎಸ್​ಡಿ ಮಾರ್ಕ್ ಝಕರ್​ಬರ್ಗ್ 13,980 ಕೋಟಿ ಯುಎಸ್​ಡಿ ಲ್ಯಾರಿ ಪೇಜ್ 12,810 ಕೋಟಿ ಯುಎಸ್​ಡಿ ಸೆರ್ಗಿ ಬ್ರಿನ್ 12,360 ಕೋಟಿ ಯುಎಸ್​ಡಿ ಸ್ಟೀವ್ ಬಲ್ಮರ್ 10,760 ಕೋಟಿ ಯುಎಸ್​ಡಿ ಲ್ಯಾರಿ ಎಲಿಸನ್ 10,380 ಕೋಟಿ ಯುಎಸ್​ಡಿ ವಾರೆನ್ ಬಫೆಟ್ 10,260 ಕೋಟಿ ಯುಎಸ್​ಡಿ ಫ್ರಾಂಕೋಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ 9290 ಕೋಟಿ ಯುಎಸ್​ಡಿ ಮುಕೇಶ್ ಅಂಬಾನಿ 9260 ಕೋಟಿ ಯುಎಸ್​ಡಿ

ಇದನ್ನೂ ಓದಿ: Radhakishan Damani: ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯೊಳಗೆ ರಾಧಾಕಿಶನ್ ದಮಾನಿಗೆ ಸ್ಥಾನ

(Reliance Industries Chairman Mukesh Ambani’s Net Worth Near To 100 Billion USD)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ