AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee vs Dollar: ರುಪಾಯಿ ಹೊಸ ದಾಖಲೆ ಮಟ್ಟಕ್ಕೆ ಕುಸಿತ; ಈ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತದ ಕರೆನ್ಸಿ

Rupee vs Dollar: ಡಾಲರ್ ಎದುರು ರುಪಾಯಿ ಮೌಲ್ಯ ಮಂಗಳವಾರ ಬೆಳಗ್ಗೆ 89.95ಕ್ಕೆ ಕುಸಿದಿದೆ. ಇದು ರುಪಾಯಿಯ ಇತಿಹಾಸದಲ್ಲೇ ಕನಿಷ್ಠ ಮಟ್ಟ. ಮೊದಲ ಬಾರಿಗೆ 90ರ ಮಟ್ಟವನ್ನು ಇವತ್ತೇ ಮುಟ್ಟುವ ಸಾಧ್ಯತೆ ಇದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯಲು ಹಲವು ಕಾರಣಗಳಿವೆ. ಈ ಬಗ್ಗೆ ಒಂದು ವರದಿ.

Rupee vs Dollar: ರುಪಾಯಿ ಹೊಸ ದಾಖಲೆ ಮಟ್ಟಕ್ಕೆ ಕುಸಿತ; ಈ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತದ ಕರೆನ್ಸಿ
ಡಾಲರ್ ವರ್ಸಸ್ ರುಪಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 02, 2025 | 12:09 PM

Share

ನವದೆಹಲಿ, ಡಿಸೆಂಬರ್ 2: ಭಾರತದ ಕರೆನ್ಸಿಯಾದ ರುಪಾಯಿಯ ಮೌಲ್ಯ (Dollar vs Rupee) ಕುಸಿತ ಮುಂದುವರಿದಿದೆ. ಇಂದು ಮಂಗಳವಾರ ಡಾಲರ್ ಎದುರು ರುಪಾಯಿ 89.95ರ ಮಟ್ಟಕ್ಕೆ ಕುಸಿದಿದೆ. ರುಪಾಯಿ ಇತಿಹಾಸದಲ್ಲೇ ಇದು ಅತ್ಯಂತ ಹೀನಾಯ ಸ್ಥಿತಿ ಎನಿಸಿದೆ. ಈ ವಾರದಲ್ಲೇ ರುಪಾಯಿ ಮೌಲ್ಯ ಮೊತ್ತಮೊದಲ ಬಾರಿಗೆ 90ರ ಗಡಿ ದಾಟಿ ಹೋದರೆ ಅಚ್ಚರಿ ಇಲ್ಲ. ನಿನ್ನೆ ಸೋಮವಾರವೇ ರುಪಾಯಿ ಬಹಳ ಒತ್ತಡಕ್ಕೆ ಸಿಲುಕಿತ್ತು. ಟ್ರೇಡಿಂಗ್​ನ ಒಂದು ಹಂತದಲ್ಲಿ ಅದರ ಮೌಲ್ಯ 89.79ರವರೆಗೂ ಹೋಗಿತ್ತು. ನಂತರ ತುಸು ಚೇತರಿಸಿಕೊಂಡು 89.53ರಲ್ಲಿ ದಿನಾಂತ್ಯಗೊಳಿಸಿತು. ಇವತ್ತು ಬೆಳಗ್ಗೆ 10:45ಕ್ಕೆ ಅದರ ಮೌಲ್ಯ 89.95ರವರೆಗೂ ಕುಸಿದಿದೆ. ಇವತ್ತೇ 90ರ ಗಡಿ ದಾಟಿದರೂ ಅಚ್ಚರಿ ಇರದು.

ಡಾಲರ್ ಎದುರು ರುಪಾಯಿ ಕುಸಿಯುತ್ತಿರುವುದು ಯಾಕೆ?

ಈ ವರ್ಷ ಡಾಲರ್ ಎದುರು ರುಪಾಯಿ ಮೌಲ್ಯ ಶೇ. 4.3ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ. 2025ರಲ್ಲಿ ಏಷ್ಯಾದ ಕರೆನ್ಸಿಗಳ ಪೈಕಿ ಅತ್ಯಂತ ಹೀನಾಯ ಪ್ರದರ್ಶನ ರುಪಾಯಿಯದ್ದು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಇದ್ದರೂ ಭಾರತದ ಕರೆನ್ಸಿ ಇಷ್ಟು ಹಿನ್ನಡೆ ಕಾಣುತ್ತಿರುವುದಕ್ಕೆ ಕಾರಣಗಳಿವೆ.

ಇದನ್ನೂ ಓದಿ: ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದಲ್ಲಿ ಹೂಡಿಕೆ, ಎಲ್​ಪಿಜಿ ಅನುಭೋಗದಲ್ಲಿ ಸಖತ್ ಹೆಚ್ಚಳ

ರುಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಏನು ಕಾರಣ?

  • ಡಾಲರ್ ಕರೆನ್ಸಿ ಪ್ರಬಲವಾಗಿ ಉಳಿದಿದೆ
  • ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಇನ್ನೂ ಕೈಗೂಡದೇ ಇದೆ.
  • ಭಾರತದ ಮೇಲೆ ಅಮೆರಿದ ಟ್ಯಾರಿಫ್ ಇನ್ನೂ ಅಧಿಕ ಮಟ್ಟದಲ್ಲಿ ಇದೆ.
  • ಭಾರತದ ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳು ಹೆಚ್ಚಾಗಿ ಹೊರಹೋಗುತ್ತಿವೆ.
  • ಭಾರತದ ಟ್ರೇಡ್ ಡೆಫಿಸಿಟ್ ಇನ್ನೂ ಹೆಚ್ಚಾಗಿದೆ.
  • ಆರ್​ಬಿಐ ಮೊದಲಿನಂತೆ ಈಗ ರುಪಾಯಿ ಕುಸಿತ ತಡೆಯಲು ಕ್ರಮ ತೆಗೆದುಕೊಳ್ಳುತ್ತಿಲ್ಲ

ರುಪಾಯಿ ಮೌಲ್ಯ ಕುಸಿತದಿಂದ ಅನನುಕೂಲಗಳೇನು?

  • ರುಪಾಯಿ ಮೌಲ್ಯ ಕಡಿಮೆಗೊಂಡರೆ ಆಮದು ವೆಚ್ಚ ಹೆಚ್ಚಾಗುತ್ತದೆ.
  • ಆಮದು ಮಾಡಿಕೊಳ್ಳುವ ಉದ್ಯಮಗಳಿಗೆ ಹಿನ್ನಡೆಯಾಗುತ್ತದೆ.
  • ಹಣದುಬ್ಬರ ಹೆಚ್ಚಾಗುತ್ತದೆ.

ರುಪಾಯಿ ಕುಸಿತದಿಂದ ಅನುಕೂಲಗಳೇನು?

  • ರುಪಾಯಿ ಮೌಲ್ಯ ಕಡಿಮೆಗೊಳ್ಳುವುದರಿಂದ ರಫ್ತಾಗುವ ಉತ್ಪನ್ನಗಳ ಬೆಲೆ ಕಡಿಮೆ ಆಗುತ್ತದೆ. ಇದರಿಂದ ರಫ್ತಿಗೆ ಅನುಕೂಲವಾಗುತ್ತದೆ.
  • ಅನಿವಾಸಿ ಭಾರತೀಯರು ತಮ್ಮ ಮನೆಗಳಿಗೆ ಹಣ ಕಳುಹಿಸಿದಾಗ, ಹೆಚ್ಚು ಹಣ ಸಿಗುತ್ತದೆ.

ಇದನ್ನೂ ಓದಿ: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ಭಾರತ ರಫ್ತಿಗಿಂತ ಆಮದು ಹೆಚ್ಚಾಗಿ ಮಾಡಿಕೊಳ್ಳುವುದರಿಂದ ರುಪಾಯಿ ಮೌಲ್ಯ ಕುಸಿತದಿಂದ ಹಿನ್ನಡೆಯೇ ಹೆಚ್ಚು. ಅಮೆರಿಕದ ಜೊತೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡು, ಟ್ಯಾರಿಫ್ ಅನ್ನು ಗಣನೀಯವಾಗಿ ಕಡಿಮೆ ಮಾಡಿಸಿಕೊಂಡರೆ ರುಪಾಯಿ ಮೌಲ್ಯ ವೃದ್ಧಿಸಬಹುದು. ಅಲ್ಲಿಯವರೆಗೆ ಭಾರತದ ಕರೆನ್ಸಿಯ ಹಿನ್ನಡೆ ಮುಂದುವರಿಯುತ್ತಲೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Tue, 2 December 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ