SBI 3 in 1 Account: ಎಸ್​ಬಿಐ 3 ಇನ್ 1 ಖಾತೆ ವೈಶಿಷ್ಟ್ಯ, ಅನುಕೂಲ ಹಾಗೂ ಇತರ ಮಾಹಿತಿಗಳು ಇಲ್ಲಿವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 3 ಇನ್ 1 ಖಾತೆಯ ವೈಶಿಷ್ಟ್ಯ, ಅನುಕೂಲ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ.

SBI 3 in 1 Account: ಎಸ್​ಬಿಐ 3 ಇನ್ 1 ಖಾತೆ ವೈಶಿಷ್ಟ್ಯ, ಅನುಕೂಲ ಹಾಗೂ ಇತರ ಮಾಹಿತಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 16, 2021 | 9:23 PM

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 3-ಇನ್-1 ಖಾತೆಯನ್ನು ಒದಗಿಸುತ್ತದೆ. ಉಳಿತಾಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್‌ಲೈನ್ ಟ್ರೇಡಿಂಗ್ ಖಾತೆಯನ್ನು ಸಂಯೋಜಿಸಿ, ಸರಳ ಮತ್ತು ಕಾಗದರಹಿತ (ಪೇಪರ್​ಲೆಸ್) ವ್ಯವಹಾರದ ಅನುಭವವನ್ನು ಒದಗಿಸುತ್ತದೆ. ಆದ್ದರಿಂದ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯು ಕಡ್ಡಾಯವಾಗಿದೆ. ಇ-ಮಾರ್ಜಿನ್ ಸೌಲಭ್ಯದೊಂದಿಗೆ 3 ಇನ್ 1 ಖಾತೆ ತೆರೆಯುವುದು ಹೇಗೆಂಬ ವಿವರ ಇಲ್ಲಿದೆ. ಉಳಿತಾಯ ಖಾತೆ, ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆಯ ಅನುಕೂಲಗಳನ್ನು ಒಂದೇ ಸೂರಿನಡಿ ಪಡೆಯಿರಿ ಎಂದು ಎಸ್‌ಬಿಐ ಹೇಳಿದೆ. “3-ಇನ್-1 ಶಕ್ತಿಯನ್ನು ಅನುಭವಿಸಿ! ಉಳಿತಾಯ ಖಾತೆ, ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆಯನ್ನು ಸಂಯೋಜಿಸುವ ಖಾತೆಯು ಸರಳ ಮತ್ತು ಪೇಪರ್‌ಲೆಸ್ ಟ್ರೇಡಿಂಗ್ ಅನುಭವವನ್ನು ಒದಗಿಸುತ್ತದೆ,” ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

SBI ಉಳಿತಾಯ ಬ್ಯಾಂಕ್ ಖಾತೆ: ಅಗತ್ಯ ದಾಖಲೆಗಳು – ಪ್ಯಾನ್ ಅಥವಾ ಫಾರ್ಮ್ 60 – ಭಾವಚಿತ್ರ

ಕೆಳಗಿನಂತೆ ಅಧಿಕೃತವಾಗಿ ಮಾನ್ಯವಾದ ದಾಖಲೆಗಳಲ್ಲಿ (OVD) ಒಂದು: – ಪಾಸ್​ಪೋರ್ಟ್ – ಆಧಾರ್ ಹೊಂದಿರುವ ಪುರಾವೆ – ಚಾಲನಾ ಪರವಾನಗಿ – ಮತದಾರರ ಗುರುತಿನ ಚೀಟಿ – MNREGA ನೀಡಿದ ಜಾಬ್ ಕಾರ್ಡ್ – ಹೆಸರು ಮತ್ತು ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ.

SBI ಡಿಮ್ಯಾಟ್ ಮತ್ತು ವ್ಯಾಪಾರ ಖಾತೆ: ಅಗತ್ಯ ದಾಖಲೆಗಳು – ಪಾಸ್​ಪೋರ್ಟ್ ಅಳತೆಯ ಭಾವಚಿತ್ರ (ಒಂದು) – ಪ್ಯಾನ್ ಕಾರ್ಡ್ ನಕಲು – ಆಧಾರ್ ಕಾರ್ಡ್ ನಕಲು – ಒಂದು ರದ್ದಾದ (ಕ್ಯಾನ್ಸಲ್ಡ್) ಚೆಕ್ ಲೀಫ್/ಇತ್ತೀಚಿನ ಬ್ಯಾಂಕ್ ಸ್ಟೇಟ್‌ಮೆಂಟ್.

ಎಸ್‌ಬಿಐ ಪ್ರಕಾರ, ಡಿಮ್ಯಾಟ್ ಖಾತೆಯು ಭೌತಿಕ ಷೇರು ಪ್ರಮಾಣಪತ್ರವನ್ನು ಎಲೆಕ್ಟ್ರಾನಿಕ್ ಬ್ಯಾಲೆನ್ಸ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಇದು ಮಾರುಕಟ್ಟೆ/ ಆಫ್-ಮಾರುಕಟ್ಟೆ ವಹಿವಾಟುಗಳ ಪರಿಣಾಮವಾಗಿ ಎಲೆಕ್ಟ್ರಾನಿಕ್ ಬ್ಯಾಲೆನ್ಸ್‌ಗಳ ವಿತರಣೆ/ ರಶೀದಿಯನ್ನು ಸುಗಮಗೊಳಿಸುತ್ತದೆ ಎಂದು ಎಸ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: Personal loan: ಎಸ್​ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್