AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಅತ್ಯುತ್ತಮ ಭಾರತೀಯ ಬ್ಯಾಂಕ್; ಜೆಪಿ ಮಾರ್ಗನ್ ಚೇಸ್ ವಿಶ್ವದ ಅತ್ಯುತ್ತಮ ಬ್ಯಾಂಕ್

Global Finance magazine bank awards 2024: ಅಮೆರಿಕದ ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ ಜಾಗತಿಕವಾಗಿ ಅತ್ಯುತ್ತಮ ಬ್ಯಾಂಕುಗಳನ್ನು ಪರಿಗಣಿಸಿ ಪ್ರಶಸ್ತಿ ದಯಪಾಲಿಸಿದೆ. 2024ರಲ್ಲಿ ಅತ್ಯುತ್ತಮ ಭಾರತೀಯ ಬ್ಯಾಂಕ್ ಎನ್ನುವ ಪ್ರಶಸ್ತಿಯನ್ನು ಎಸ್​ಬಿಐಗೆ ನೀಡಿದೆ. ಜೆಪಿ ಮಾರ್ಗನ್ ಚೇಸ್ ವಿಶ್ವದ ಅತ್ಯುತ್ತಮ ಬ್ಯಾಂಕ್, ಅತ್ಯುತ್ತಮ ಖಾಸಗಿ ಬ್ಯಾಂಕ್ ಮತ್ತು ಅತ್ಯುತ್ತಮ ಇನ್ವೆಸ್ಟ್​ಮೆಂಟ್ ಬ್ಯಾಂಕ್, ಮೂರು ಪ್ರಶಸ್ತಿಗಳನ್ನು ಪಡೆದಿದೆ.

ಎಸ್​ಬಿಐ ಅತ್ಯುತ್ತಮ ಭಾರತೀಯ ಬ್ಯಾಂಕ್; ಜೆಪಿ ಮಾರ್ಗನ್ ಚೇಸ್ ವಿಶ್ವದ ಅತ್ಯುತ್ತಮ ಬ್ಯಾಂಕ್
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2024 | 6:12 PM

Share

ನವದೆಹಲಿ, ಅಕ್ಟೋಬರ್ 27: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024ರ ವರ್ಷದಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಅಮೆರಿಕದ ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ ಪರಿಗಣಿಸಿ ಪ್ರಶಸ್ತಿ ನೀಡಿದೆ. ಅಮೆರಿಕದ ವಾಷಿಂಗ್ಟನ್​ನಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್​ನ ವಾರ್ಷಿಕ ಸಭೆ ನಡುವಲ್ಲಿ ಆಯೋಜಿಸಲಾದ 31ನೇ ವಾರ್ಷಿಕ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಎಸ್​ಬಿಐ ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಎಸ್​ಬಿಐನ ಛೇರ್ಮನ್ ಸಿಎಸ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು. ಗ್ರಾಹಕರಿಗೆ ಅಸಾಧಾರಣ ಸೇವೆ ಒದಗಿಸಲು ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಎಸ್​ಬಿಐ ತೋರುತ್ತಿರುವ ಬದ್ಧತೆಗೆ ಸಿಕ್ಕ ಒಂದು ಗೌರವ ಇದು ಎಂದು ಈ ಸಂದರ್ಭದಲ್ಲಿ ಎಸ್​ಬಿಐ ಹೇಳಿಕೆ ನೀಡಿದೆ.

ಜೆಪಿ ಮಾರ್ಗನ್ ಚೇಸ್ ವಿಶ್ವದ ಅತ್ಯುತ್ತಮ ಬ್ಯಾಂಕ್

ಅಮೆರಿಕದ ಜೆಪಿ ಮಾರ್ಗನ್ ಚೇಸ್ 2024ರಲ್ಲಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಅತ್ಯುತ್ತಮ ಇನ್ವೆಸ್ಟ್​ಮೆಂಟ್ ಬ್ಯಾಂಕ್ ಮತ್ತು ಅತ್ಯುತ್ತಮ ಖಾಸಗಿ ಬ್ಯಾಂಕ್ ಎನ್ನುವ ಗೌರವವೂ ಅದಕ್ಕೆ ಸಿಕ್ಕಿದೆ. ಅಮೆರಿಕದ ಬ್ಯಾಂಕುಗಳ ಸರಣಿ ಕುಸಿತವನ್ನು ತಡೆಯಲು ಚೇಸ್ ವಹಿಸಿದ ಪಾತ್ರ ಮಹತ್ತರವಾದುದು. ಇದನ್ನು ಪರಿಗಣಿಸಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎಂದು ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಉತ್ಕೃಷ್ಟ ಗುಣಮಟ್ಟ, ಸೇವೆಯಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ಅನ್ನೂ ಮೀರಿಸುತ್ತೆ ವಂದೇ ಭಾರತ್ ಸ್ಲೀಪರ್ ಟ್ರೈನು

ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ 2024 ವಿಶ್ವದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿ

  • ಅತ್ಯುತ್ತಮ ಬ್ಯಾಂಕು: ಜೆಪಿ ಮಾರ್ಗನ್ ಚೇಸ್
  • ಅತ್ಯುತ್ತಮ ಕಾರ್ಪೊರೇಟ್ ಬ್ಯಾಂಕ್: ಬಿಬಿವಿಎ
  • ಅತ್ಯುತ್ತಮ ಕನ್ಸೂಮರ್ ಬ್ಯಾಂಕ್: ಸ್ಟಾಂಡರ್ಡ್ ಚಾರ್ಟರ್ಡ್
  • ಅತ್ಯುತ್ತಮ ಉದಯೋನ್ಮುಖ ಮಾರುಕಟ್ಟೆಗಳ ಬ್ಯಾಂಕ್: ಕ್ಯೂಎನ್​ಬಿ
  • ಅತ್ಯುತ್ತಮ ಫ್ರಾಂಟಿಯರ್ ಮಾರ್ಕೆಟ್ ಬ್ಯಂಕ್: ಯುಬಿಎ
  • ಅತ್ಯುತಮ ಸಬ್-ಕಸ್ಟಡಿಯನ್ ಬ್ಯಾಂಕ್: ಸಿಐಬಿಸಿ ಮೆಲ್ಲೋನ್
  • ಅತ್ಯುತ್ತಮ ಟ್ರಾನ್ಸಾಕ್ಷನ್ ಬ್ಯಾಂಕ್: ಬ್ಯಾಂಕ್ ಆಫ್ ಅಮೆರಿಕ
  • ಅತ್ಯುತ್ತಮ ಸಸ್ಟೈನಬಲ್ ಫೈನಾನ್ಸ್ ಬ್ಯಾಂಕ್: ಸೊಸೈಟೆ ಜನರೇಲ್
  • ಅತ್ಯುತ್ತಮ ಇಸ್ಲಾಮಿಕ್ ಫೈನಾನ್ಷಿಯಲ್ ಇನ್ಸ್​ಟಿಟ್ಯೂಶನ್: ಕುವೇತ್ ಫೈನಾನ್ಸ್ ಹೌಸ್
  • ಅತ್ಯುತ್ತಮ ಕ್ಯಾಷ್ ಮ್ಯಾನೇಜ್ಮೆಂಟ್ ಬ್ಯಾಂಕ್: ಸಿಟಿ ಬ್ಯಾಂಕ್
  • ಅತ್ಯುತ್ತಮ ಫಾರೀನ್ ಎಕ್ಸ್​ಚೇಂಜ್ ಸರ್ವಿಸ್: ಯುಬಿಎಸ್
  • ಅತ್ಯುತ್ತಮ ಎಸ್​ಎಂಇ ಬ್ಯಾಂಕ್: ಬಿಟಿಜಿ ಪ್ಯಾಕ್ಚುಯಲ್ ಎಂಪ್ರೆಸಾಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ