
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಾಟ್ಸಾಪ್ ಜಗತ್ತಿಗೆ ಕಾಲಿಟ್ಟಿದ್ದು ತನ್ನ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಕಳೆದ ತಿಂಗಳು ವಾಟ್ಸಪ್ ಮೂಲಕ ಸೇವೆ ಆರಂಭಿಸಿದೆ. ನಿಮ್ಮ ಖಾತೆಯ ಮಿನಿ ಸ್ಟೇಟ್‌ಮೆಂಟ್ ಮತ್ತು ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯವಿದೆ. ಮಿನಿ ಸ್ಟೇಟ್ ಮೆಂಟ್ ಎಂದರೆ ನಿಮ್ಮ ಖಾತೆಯ ಕೊನೆಯ ಐದು ವಹಿವಾಟುಗಳ ವಿವರ ದೊರೆಯಲಿದೆ.
“ನಿಮ್ಮ ಬ್ಯಾಂಕ್ ಈಗ WhatsApp ನಲ್ಲಿದೆ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಿ ಮತ್ತು ಮಿನಿ ಸ್ಟೇಟ್‌ಮೆಂಟ್ ಸುಲಭವಾಗಿ ಪಡೆದುಕೊಳ್ಳಿ” ಎಂದು ಬ್ಯಾಂಕ್ ತನ್ನ ಗ್ರಾಹಕರನ್ನು ಉದ್ದೇಶಿಸಿ ಟ್ವೀಟ್ ಮಾಡಿದೆ. ಬ್ಯಾಂಕ್ ನೀಡಿರುವ +919022690226 ಸಂಖ್ಯೆಗೆ ‘ಹಾಯ್’ ಎಂದು ಮೆಸೇಜ್ ಕಳುಹಿಸಿದ ನಂತರ ಸೇವೆ ಪಡೆದುಕೊಳ್ಳಬಹುದು.
SBI WhatsApp ಬ್ಯಾಂಕಿಂಗ್ ಸೇವೆಗಳನ್ನು ಬಳಸಲು, ನೀವು ಮೊದಲು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು SMS ಮೂಲಕ ನಿಮ್ಮ ಒಪ್ಪಿಗೆ ನೀಡಬೇಕು. ಬ್ಯಾಂಕ್ ನಿಮ್ಮಿಂದ ಮರುಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ.
ನೋಂದಾಯಿಸಿಕೊಳ್ಳಲು ಏನು ಮಾಡಬೇಕು?
ಹಂತ 1: ನೀವು SBI WhatsApp ಬ್ಯಾಂಕಿಂಗ್ ಸೇವೆಗಳಿಗೆ ನೋಂದಾಯಿಸುವುದು ಬಹಳ ಸುಲಭ. ಬ್ಯಾಂಕ್ ಗೆ ನೀವು ನೀಡಿರುವ ರಜಿಸ್ಟರ್ ಮೊಬೈಲ್ ಸಂಖ್ಯೆಯಿಂದ 917208933148 ಗೆ WAREG A/c(ನಿಮ್ಮ ಖಾತೆ ಸಂಖ್ಯೆ) ಅನ್ನು ಕಳುಹಿಸಿ. ಟರ್ಮ್ ಮತ್ತು ಕಂಡಿಶನ್ಸ್ ಪೇಜ್ ಇದಾದ ಮೇಲೆ ಕಾಣುತ್ತದೆ.
ಹಂತ 2: ಒಮ್ಮೆ ನೀವು ನೋಂದಾಯಿಸಿದ ನಂತರ, +919022690226 ಸಂಖ್ಯೆಯಲ್ಲಿ ‘ಹಾಯ್’ SBI ಎಂದು ಟೈಪ್ ಮಾಡಿ ಅಥವಾ WhatsApp ನಲ್ಲಿ ನೀವು ಸ್ವೀಕರಿಸಿದ ಸಂದೇಶಕ್ಕೆ ಪ್ರತ್ಯುತ್ತರ ನೀಡಿ “ಆತ್ಮೀಯ ಗ್ರಾಹಕರೇ, ನೀವು SBI WhatsApp ಬ್ಯಾಂಕಿಂಗ್ ಸೇವೆಗಳಿಗೆ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದೀರಿ ಎಂಬ ಸಂದೇಶ ಸ್ವೀಕಾರ ಮಾಡುತ್ತೀರಿ.
ಹಂತ 3: ಇದಾದ ಮೇಲೆ ಪ್ರಿಯ ಗ್ರಾಹಕ, SBI Whatsapp ಬ್ಯಾಂಕಿಂಗ್ ಸೇವೆಗಳಿಗೆ ಸುಸ್ವಾಗತ! ದಯವಿಟ್ಟು ಕೆಳಗಿನ ಯಾವುದೇ ಆಯ್ಕೆ ಆರಿಸಿಕೊಳ್ಳಿ
1. ಖಾತೆ ಬ್ಯಾಲೆನ್ಸ್ಟ
2. ಮಿನಿ ಸ್ಟೇಟ್ ಮೆಂಟ್
3. WhatsApp ಬ್ಯಾಂಕಿಂಗ್‌ನಿಂದ ಡಿ-ರಿಜಿಸ್ಟರ್
ನಿಮ್ಮ ಇತರೆ ಪ್ರಶ್ನೆಗಳಿದ್ದರೂ ಇಲ್ಲಿ ಕೇಳಬಹುದು.
ಹಂತ 4: ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಅಥವಾ ನಿಮ್ಮ ಕೊನೆಯ ಐದು ವಹಿವಾಟುಗಳ ಮಿನಿ ಸ್ಟೇಟ್‌ಮೆಂಟ್ ಪಡೆಯಲು 1 ಅಥವಾ 2 ಆಯ್ಕೆಗಳಿಂದ ಆರಿಸಿಕೊಳ್ಳಿ. ನೀವು ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್‌ನಿಂದ ಡಿ-ರಿಜಿಸ್ಟರ್ ಮಾಡಲು ಬಯಸಿದರೆ ನೀವು ಆಯ್ಕೆ 3 ಅನ್ನು ಸಹ ಆಯ್ಕೆ ಮಾಡಬಹುದು.
ಹಂತ 5: ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ಖಾತೆಯ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್‌ಮೆಂಟ್ ಅನ್ನು ಪ್ರದರ್ಶಿಸಲಾಗುತ್ತದೆ. ನೀವು ಯಾವುದಾದರೂ ಪ್ರಶ್ನೆಯನ್ನು ಹೊಂದಿದ್ದರೆ ನೀವು ಅದನ್ನು ಟೈಪ್ ಮಾಡಬಹುದು.
ಬರಹ: ಮಧುಸೂಧನ ಹೆಗಡೆ
Published On - 1:03 pm, Wed, 17 August 22