Axis Bank: ನಿಯಮ ಉಲ್ಲಂಘನೆ ಕಾರಣಕ್ಕೆ ಆಕ್ಸಿಸ್​ ಬ್ಯಾಂಕ್​ಗೆ ಸೆಬಿಯಿಂದ 5 ಲಕ್ಷ ರೂಪಾಯಿ ದಂಡ

ಮರ್ಚೆಂಟ್​ ಬ್ಯಾಂಕಿಂಗ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಸೆಬಿಯಿಂದ ಆಕ್ಸಿಸ್​ ಬ್ಯಾಂಕ್​ಗೆ 5 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.

Axis Bank: ನಿಯಮ ಉಲ್ಲಂಘನೆ ಕಾರಣಕ್ಕೆ ಆಕ್ಸಿಸ್​ ಬ್ಯಾಂಕ್​ಗೆ ಸೆಬಿಯಿಂದ 5 ಲಕ್ಷ ರೂಪಾಯಿ ದಂಡ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 25, 2022 | 7:22 AM

ಮರ್ಚೆಂಟ್ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾರ್ಚ್ 24ರಂದು ಆಕ್ಸಿಸ್ ಬ್ಯಾಂಕ್​ಗೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2016ರ ಆಗಸ್ಟ್​ನಿಂದ 2019ರ ಆಗಸ್ಟ್ ಮಧ್ಯೆ ಆಕ್ಸಿಸ್ ಬ್ಯಾಂಕ್‌ನ ಸಾಲ ಮಾರುಕಟ್ಟೆ ಕಾರ್ಯಾಚರಣೆಗಳ ಪರೀಕ್ಷೆಯನ್ನು ನಡೆಸಿದ್ದು, ಬ್ಯಾಂಕ್​ನಿಂದ 1992ರ ಸೆಬಿ (ಮರ್ಚೆಂಟ್ ಬ್ಯಾಂಕರ್‌ಗಳು) ನಿಯಮಾವಳಿ 27ರ ನಿಬಂಧನೆಗಳನ್ನು ಉಲ್ಲಂಘಿಸುತ್ತಿದೆ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ. ಮಾರುಕಟ್ಟೆ ನಿಯಂತ್ರಕರು ಮೂರು ವರ್ಷಗಳ ಅವಧಿಯಲ್ಲಿ ಆಕ್ಸಿಸ್ ಬ್ಯಾಂಕ್ 22 ಘಟಕಗಳಿಗೆ ಮರ್ಚೆಂಟ್ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿರುವಾಗ ರೂಢಿಯಂತೆ ಹೂಡಿಕೆಯ ದಿನಾಂಕದಿಂದ ಅದೇ 15 ದಿನಗಳ ಬಗ್ಗೆ ಸೆಬಿಗೆ ತಿಳಿಸದೆ ಒಂಬತ್ತು ಕಂಪೆನಿಗಳ ಸಾಲದ ಪತ್ರಗಳಿಗೆ ಚಂದಾದಾರರಾಗಿದ್ದಾರೆ ಎಂದು ಹೇಳಿದೆ.

ದಿವಾನ್ ಹೌಸಿಂಗ್ ಫೈನಾನ್ಸ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಹೋಮ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ಇಸಿಎಲ್ ಫೈನಾನ್ಸ್, ಎಲ್ ಅಂಡ್ ಟಿ ಫೈನಾನ್ಸ್ ಮತ್ತು ಟಾಟಾ ಕ್ಯಾಪಿಟಲ್ ಫೈನಾನ್ಸ್ ಇವುಗಳು ಎನ್​ಬಿಎಫ್​ಸಿ ಆಗಿದ್ದು, ಆಕ್ಸಿಸ್ ಬ್ಯಾಂಕ್ ಮರ್ಚೆಂಟ್ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗ ಮತ್ತು ಸೆಬಿಗೆ ಪೂರ್ವ ಸೂಚನೆಯಿಲ್ಲದೆ ಸೆಕ್ಯೂರಿಟಿಗಳನ್ನು ಪಡೆದುಕೊಂಡಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್​ಗೆ ಏಕೆ ದಂಡ ವಿಧಿಸಬಾರದು ಎಂದು ಸೆಬಿ ಕೇಳಿದಾಗ, ಆಕ್ಸಿಸ್ ಬ್ಯಾಂಕ್ ವರದಿ ಮಾಡುವ ಮಾನದಂಡಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದೆ. ಆದರೆ ಇದು ಅಚಾತುರ್ಯದ ಉಲ್ಲಂಘನೆಯಾಗಿದ್ದು, ಇದು ಪೂರ್ವಭಾವಿಯಾಗಿ ಸೆಬಿಗೆ ವರದಿ ಮಾಡಿದೆ. ಅಂತಹ ಉಲ್ಲಂಘನೆಗಳನ್ನು ತಡೆಗಟ್ಟಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬ್ಯಾಂಕ್ ಮನವಿ ಮಾಡಿದೆ. “ಈ ವಿಷಯದಲ್ಲಿ ನಾವು ಸಹನೆ ಕೋರುತ್ತೇವೆ ಮತ್ತು ಮೇಲಿನದನ್ನು ವಿವರವಾಗಿ ವಿವರಿಸಲು ವೈಯಕ್ತಿಕ ವಿಚಾರಣೆಗಾಗಿ ವಿನಂತಿಸುತ್ತೇವೆ,” ಎಂದು ಸೆಬಿಗೆ ಬ್ಯಾಂಕ್​ನಿಂದ ಪ್ರತಿಕ್ರಿಯೆ ಬಂದಿದೆ.

ಆಕ್ಸಿಸ್ ಬ್ಯಾಂಕ್ ತನ್ನ ವಾದವನ್ನು ವೈಯಕ್ತಿಕ ವಿಚಾರಣೆಯಲ್ಲಿ ಮಂಡಿಸಲು ಸೆಬಿ ಅವಕಾಶ ಮಾಡಿಕೊಟ್ಟಿತು. ಬ್ಯಾಂಕ್​ ಕೂಡ ತನ್ನ ವಕೀಲರ ಮೂಲಕ ನಿಯಂತ್ರಕರಿಗೆ ತನ್ನ ವಾದವನ್ನು ಮಂಡಿಸಿದೆ. ಆ ನಂತರ, ಆಕ್ಸಿಸ್ ಬ್ಯಾಂಕ್ ನಿಯಂತ್ರಕರಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಕ್ರಿಯೆಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದೆ ಎಂದು ಉಲ್ಲೇಖಿಸಿದ್ದಾರೆ. ಆದರೂ ಸೆಬಿಯು ವಿಲೇವಾರಿ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರಕರಣದಲ್ಲಿ ಹೆಚ್ಚಿನ ಸಲ್ಲಿಕೆ ಒದಗಿಸುವಂತೆ ಆಕ್ಸಿಸ್ ಬ್ಯಾಂಕ್ ಅನ್ನು ಕೇಳಿತು. ಆಕ್ಸಿಸ್ ಬ್ಯಾಂಕ್​ನಿಂದ ಸೆಬಿಗೆ ಮತ್ತೊಂದು ಸಲ್ಲಿಕೆಯಲ್ಲಿ, ತಾನು ಮರ್ಚೆಂಟ್ ಬ್ಯಾಂಕಿಂಗ್ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದೆ ಎಂದು ಮತ್ತೊಮ್ಮೆ ಒಪ್ಪಿಕೊಂಡಿತ್ತು. ಆದರೆ ಹೇಳಿದ ಒಂಬತ್ತು ಸಮಸ್ಯೆಗಳು ಸಂಪೂರ್ಣ ಮರ್ಚೆಂಟ್ ಬ್ಯಾಂಕಿಂಗ್ ವಹಿವಾಟಿನ ಒಂದು ಸಣ್ಣ ಪ್ರಮಾಣವನ್ನು ಮಾತ್ರ ರೂಪಿಸುತ್ತವೆ ಎಂದು ಹೇಳುವ ಮೂಲಕ ನಿಯಂತ್ರಕರಿಂದ ಸ್ವಲ್ಪ ಸಹಾನುಭೂತಿ ಕೋರಿದೆ. ಬ್ಯಾಂಕ್‌ನ ಮರ್ಚೆಂಟ್ ಬ್ಯಾಂಕಿಂಗ್ ಮತ್ತು ಹೂಡಿಕೆ ಕಾರ್ಯಗಳೆರಡರಲ್ಲೂ ಸಂಬಂಧಿತ ಬ್ಯಾಂಕ್ ಅಧಿಕಾರಿ ವ್ಯವಹರಿಸುವುದರಿಂದ ಉಲ್ಲಂಘನೆ ಸಂಭವಿಸಿರಬೇಕು ಎಂದು ಬ್ಯಾಂಕ್ ಹೇಳಿದೆ.

ಬ್ಯಾಂಕ್​ಗೆ ದಂಡ ವಿಧಿಸುವುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಕಂಡುಕೊಂಡಿದೆ ಎಂದು ಸೆಬಿ ತಿಳಿಸಿದ್ದು, ಇನ್ನು 45 ದಿನಗಳಲ್ಲಿ 5 ಲಕ್ಷ ರೂಪಾಯಿ ಪಾವತಿಸುವಂತೆ ಆಕ್ಸಿಸ್​ಬ್ಯಾಂಕ್​ಗೆ ಸೂಚಿಸಲಾಗಿದೆ.

ಇದನ್ನೂ ಓದಿ: Life Insurance Corporation IPO: ಎಲ್​ಐಸಿ ಐಪಿಒಗೆ ಸೆಬಿಯಿಂದ ಅನುಮತಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ